More

    ವರದಿಗಾರರಿಗೆ ವೈಜ್ಞಾನಿಕ ಮನೋಭಾವ ಬೇಕು

    ವಿಜಯಪುರ: ಸಮಾಜದಲ್ಲಿರುವ ತಪ್ಪನ್ನು ಸೂಕ್ಷ್ಮಸಂವೇದನೆಯಿಂದ ತಿಳಿಸಿದಾಗ ಮಾತ್ರ ಸಮಾಜದ ಅಭಿವೃದ್ಧಿ, ಗ್ರಾಮಗಳ ಪ್ರಗತಿ ಸಾಧ್ಯ ಎಂದು ಮುಧೋಳದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ ಹೇಳಿದರು.

    ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ರಜತ ಮಹೋತ್ಸವ ಸಮಿತಿ ದತ್ತಿನಿಧಿ ಉಪನ್ಯಾಸ ಮಾಲಿಕೆ ಅಡಿಯಲ್ಲಿ ಗ್ರಾಮೀಣ ಅಭಿವೃದ್ಧಿ ವರದಿಗಾರಿಕೆಯ ಸವಾಲುಗಳು ಕುರಿತು ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ವೈಜ್ಞಾನಿಕ ಮನೋಭಾವ ಅತ್ಯವಶ್ಯ. ವರದಿಗಾರರು ವೈಜ್ಞಾನಿಕ ಮನೋಭಾವದಿಂದ ವರದಿ ಮಾಡಬೇಕು. ಅಂದಾಗ ಮಾತ್ರ ಸಮಾಜದ ಸುಧಾರಣೆ ಸಾಧ್ಯ ಎಂದರು.

    ಪತ್ರಕರ್ತರೂ ಜನರ ಸಮಸ್ಯೆಗಳ ಬಗ್ಗೆ ಅವರ ಜೀವನಶೈಲಿ ಬಗ್ಗೆ ಬರೆಯುವಾಗ ನೋವಾಗದಂತೆ ವರದಿ ಮಾಡಬೇಕು. ವರದಿಗಾರ ಯಾವಾಗಲು ಸಮಾಜವೇ ನನ್ನ ಮನೆ ಎಂದು ತಿಳಿದುಕೊಂಡು ಬರೆಯಬೇಕು. ಸದಾ ಸಮಾಜ ಸುಧಾರಣೆಯ ಚಿತ್ತ ಅವನದ್ದಾಗಿರಬೇಕು. ಏಕೆಂದರೆ ಪತ್ರಿಕೆಗಳು ಸಮಾಜದ ಧ್ವನಿ ಇದ್ದಂತೆ. ಆ ಪತ್ರಿಕೆಯಲ್ಲಿ ಬರುವ ವರದಿಗಳು ಬಹು ಬೇಗನೆ ಓದುಗುನನ್ನ ತಲುಪುವ ಮೂಲಕ ಪರಿಣಾಮವನ್ನು ಬೀರುತ್ತವೆ. ಹೀಗಾಗಿ ವರದಿಗಾರ ಪ್ರತಿಯೊಂದು ಸೂಕ್ಷ್ಮತೆಗಳನ್ನು ಅರಿತು ವರದಿ ಮಾಡಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, ನಾವು ಕಷ್ಟ ಪಟ್ಟಾಗಲೇ ನಮಗೆ ಅತ್ಯುತ್ತಮ ಫಲ ಸಿಗಲು ಸಾಧ್ಯ. ಯಾವುದೂ ಸರಳವಾಗಿ ಸಿಗಲು ಸಾಧ್ಯವಿಲ್ಲ. ಹೀಗಾಗಿ ಇಲ್ಲಿ ನಿಮಗೆ ಕಲಿಯಲು ಒಳ್ಳೆಯ ವಾತಾವರಣವಿದೆ. ಅದಕ್ಕೆ ಬೇಕಾದ ಎಲ್ಲ ಸೌಕರ್ಯಗಳು ಇವೆ. ಅವುಗಳನ್ನು ಸಮಗ್ರವಾಗಿ ಬಳಸಿಕೊಳ್ಳುವ ಮೂಲಕ ನಿಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.

    ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನಾ ಕೋಲಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅರ್ಚನಾ ಸೂರ್ಯವಂಶಿ ಸ್ವಾಗತಿಸಿದರು. ಶುಭಲಕ್ಷ್ಮಿ ಹೊಸಮನಿ ಪರಿಚಯಿಸಿದರು. ವಿನುತಾ ಹವಾಲ್ದಾರ್ ವಂದಿಸಿದರು. ಮಾಯಾ ಹೊಸಟ್ಟಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts