More

    ಶೀಘ್ರದಲ್ಲೇ ಜಿಲ್ಲಾಡಳಿತ ಭವನ ನಿರ್ಮಾಣ

    ವಿಜಯಪುರ: ನಗರದಲ್ಲಿ ಶೀಘ್ರದಲ್ಲೇ ಜಿಲ್ಲಾಡಳಿತ ಭವನ ನಿರ್ಮಾಣಗೊಳ್ಳಲಿದ್ದು ಸಾರ್ವಜನಿಕರಿಗೆ ಒಂದೇ ಕಡೆ ಎಲ್ಲ ಸೇವೆಗಳು ಲಭ್ಯವಾಗಲಿವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
    ನಗರದ ಬಿಎಸ್‌ಎನ್‌ಎಲ್ ಕಚೇರಿ ಹತ್ತಿರ ಅತಿಕ್ರಮಣ ತೆರವುಗೊಳಿಸಿದ ಜಾಗದಲ್ಲಿ ಪ್ರವಾಸೊದ್ಯಮ ಇಲಾಖೆಯಿಂದ ಮಂಜೂರಿಸಿದ ಒಟ್ಟು 51 ಲಕ್ಷ ರೂ. ಮೊತ್ತದ ಪಾತವೇ ಹಾಗೂ ಚೈನ್‌ಲಿಂಗ್ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
    ಇನ್ನೇನು ಕೆಲವೇ ದಿನಗಳಲ್ಲಿ 260 ಕೋಟಿ ರೂ.ಮೊತ್ತದಲ್ಲಿ ಅಂಡರ್‌ಗ್ರೌಂಡ ಕೇಬಲ್ ಅಳವಡಿಕೆ ಮಾಡಲಾಗುವುದು. ವಿದ್ಯುತ್ ಕಂಬಗಳಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸಲು ಇದು ಅನುಕೂಲವಾಗಲಿದೆ. 27000 ಎಲ್‌ಇಡಿ ವಿದ್ಯುತ್ ದ್ವೀಪಗಳು ಮಂಜೂರಾಗಿದ್ದು ನಗರದಲ್ಲಿ ಅಳವಡಿಕೆ ಮಾಡುವ ಮೂಲಕ ಹೆಚ್ಚು ವಿದ್ಯುತ್ ವ್ಯತ್ಯಯಾಗುವುದನ್ನು ತಪ್ಪಿಸಲಾಗುತ್ತದೆ ಎಂದರು.
    ಬಳಿಕ ವಾರ್ಡ್ ನಂ.3 ರ ಜೋರಾಪೂರ ಪೇಠದಲ್ಲಿ ಸರ್ಕಾರಿ ಶಾಲೆ ನಂ.10 ಹತ್ತಿರ ಮಹಾನಗರ ಪಾಲಿಕೆಯಿಂದ ಮಂಜೂರಿಸಿದ ಒಟ್ಟು 8 ಲಕ್ಷ ರೂ. ಮೊತ್ತದ ಸಿಸಿ ರಸ್ತೆ ಭೂಮಿ ಪೂಜೆ ನೆರವೇರಿಸಿದರು. ನಗರ ನೀರು ಸರಬರಾಜು ಮಂಡಳಿಯ ವಾರ್ಡ್ ನಂ. 2 ಮತ್ತು ವಾರ್ಡ ನಂ.35 ವ್ಯಾಪ್ತಿಗೆ ಒಳಪಡುವ ಎಲ್ಲ ಕಾಲನಿ, ಬಡಾವಣೆಗಳಿಗೆ 24/7 ನೀರು ಸರಬರಾಜು ಮಾಡುವ ಕಾಮಗಾರಿ ಪೂರ್ಣಗೊಂಡಿದ್ದು ಈ ಜೂನಲ್ ನಂ.7ಕ್ಕೆ ಚಾಲನೆ ನೀಡಿದರು.
    ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಲಕ್ಷ್ಮಣ ಜಾಧವ, ಚಂದ್ರು ಚೌಧರಿ, ಗುರು ಗಚ್ಚಿನ ಮಠ, ಬಸಯ್ಯ ಹಿರೇಮಠ, ಉಮೇಶ ವಂದಾಲ, ರಾಜೇಶ ದೇವಗಿರಿ, ಸಂತೋಷ ಪಾಟೀಲ, ಪ್ರಕಾಶ ಚವಾಣ, ಮಡಿವಾಳ ಯಳವಾರ, ಪಾಂಡು ಸಾಹುಕಾರ ದೊಡ್ಡಮನಿ, ಮಧು ಕಲಾದಗಿ, ಆಶೋಕ ಬೆಲ್ಲದ, ಬಸವರಾಜ ಹೇರಲಗಿ, ಕಿರಣ ಕಾಳೆ, ರಾಮು ಭಜಂತ್ರಿ, ರಾಜಶೇಖರ ಭಜಂತ್ರಿ, ಬಸವರಾಜ ಗೊಳಸಂಗಿ, ದತ್ತಾ ಗೊಲಾಂಡೆ, ಸಿದ್ರಾಮ ಹಳ್ಳದ, ಚಂದ್ರಶೇಖರ ಇಂಗಳೇಶ್ವರ, ಚಂದ್ರಕಾಂತ ನಿಂಬರಗಿ, ಶರಣು ನಿಡಗುಂದಿ, ಪ್ರವೀಣ ಬಾಗಾವಿ, ಪ್ರವೀಣ ಶಿವಣಕರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts