More

    ಕಾಂಗ್ರೆಸ್‌ನಿಂದ ಜನರ ದಿಕ್ಕು ತಪ್ಪಿಸುವ ಯತ್ನ

    ವಿಜಯಪುರ: ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.
    ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಬಿಜೆಪಿಯಿಂದ ಗುರುವಾರ ಆಯೋಜಿಸಿದ್ದ ಪೌರತ್ವ ಕಾಯ್ದೆ ಬೆಂಬಲಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಸಹಿ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
    ಪೌರತ್ವ ಕಾಯ್ದೆಯಿಂದ ದೇಶವಾಸಿಗಳಿಗೆ ಯಾವುದೇ ತೆರನಾದ ತೊಂದರೆಯಿಲ್ಲ. ಕಾಂಗ್ರೆಸ್ ವಿನಾ ಕಾರಣ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಮೂಲಕ ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಭಾರತಿಯರ ಸುರಕ್ಷತೆ ದೃಷ್ಟಿಯಿಂದ ಸಿಎಎ ಜಾರಿಗೆ ತರಲಾಗಿದೆ ಎಂದರು.
    ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಕಾರ್ಯಕ್ರಮ ಆಯೋಜಿಸಿದೆ. ಲೋಕಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಲಾಗಿದೆ. ಈ ಕಾಯ್ದೆ ಯಾರ ಹಕ್ಕನ್ನೂ ಕಸಿದುಕೊಳ್ಳುವುದಿಲ್ಲ. ವಿರೋಧ ಪಕ್ಷಗಳು ಸುಳ್ಳು ಮಾಹಿತಿ ನೀಡುವ ಮೂಲಕ ದೇಶದಲ್ಲಿರುವ ಅಲ್ಪಸಂಖ್ಯಾತರಲ್ಲಿ ಬಿಜೆಪಿ ಕುರಿತು ದ್ವೇಷ ಭಾವನೆ ಮೂಡಿಸುತ್ತಿವೆ ಎಂದರು
    ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಪ್ರಕಾಶ ಅಕ್ಕಲಕೋಟ, ವಿವೇಕಾನಂದ ಡಬ್ಬಿ, ಮಳುಗೌಡ ಪಾಟೀಲ, ಭೀಮಾಶಂಕರ ಹದನೂರ, ಶಿವರುದ್ರ ಬಾಗಲಕೋಟ, ರಾಜು ಮಗಿಮಠ, ರವೀಂದ್ರ ಲೋಣಿ, ಪ್ರಕಾಶ ಮಿರ್ಜಿ, ಸುರೇಶ ಬಿರಾದಾರ, ಡಾ. ಬಾಬು ನಾಗೂರ, ಅಶೋಕ ನ್ಯಾಮಗೊಂಡ, ರಾಹುಲ ಜಾಧವ, ಗೀತಾ ಕುಗನೂರ, ಈರಣ್ಣಾ ರಾವೂರ, ರಜನಿ ಸಂಬಣ್ಣಿ, ಕೃಷ್ಣಾ ಗುನ್ಹಾಳಕರ, ಸಂತೋಷ ಚವಾಣ್, ಭರತ ಕೋಳಿ, ಜಗದೀಶ ಮುಚ್ಚಂಡಿ, ಕಾಂತು ಸಿಂಧೆ, ಪಾಪುಸಿಂಗ ರಜಪೂತ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts