More

    ಬಿಕೊ ಎನ್ನುತ್ತಿವೆ ಹಳ್ಳಿಗಳ ದಾರಿ

    ವಿಜಯಪುರ: ಪ್ರತಿದಿನ ಹಳ್ಳಿಗಳಿಗೆ ತೆರಳುವ ರಸ್ತೆಗಳಲ್ಲಿ ವಾಹನಗಳ ಸದ್ದು ಇಲ್ಲದಂತಾಗಿದೆ. ರಸ್ತೆಗಳೆಲ್ಲವೂ ಬಿಕೊ ಎನ್ನುವಂತಿವೆ. ಗ್ರಾಮೀಣ ಭಾಗದಲ್ಲಿ ಲಾಕ್‌ಡೌನ್ ಹಿನ್ನೆಲೆ ಗ್ರಾಮಕ್ಕೆ ಬೇರೆಯವರು ಪ್ರವೇಶಿಸದಂತೆ ಮುಳ್ಳುಕಂಟಿ ಜಡಿದು, ಜಕ್ಕಡಿಗಳನ್ನು ರಸ್ತೆ ಮೇಲಿಟ್ಟು ಒಳಗೆ ಯಾರೂ ಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

    ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರಕ್ಕೆ ಬರುವ ವಾಹನ ಸವಾರರನ್ನು ಗ್ರಾಮದ ಹೊರಗಡೆಯೇ ನಿಲ್ಲಿಸಿ ಅವರನ್ನು ವಿಚಾರಿಸಲಾಗುತ್ತಿದೆ. ಬಹುತೇಕ ಹಳ್ಳಿಗಳಲ್ಲಿಯೂ ಅದೇ ರೀತಿ ವ್ಯವಸ್ಥೆವಿದ್ದು, ಬೇರೆ ಗ್ರಾಮದ ಜನರನ್ನು ತಮ್ಮ ಗ್ರಾಮಕ್ಕೆ ಪ್ರವೇಶಿಸಲು ನಿರ್ಬಂಧ ಹೇರಿರುವ ದೃಶ್ಯಗಳು ಕಂಡುಬಂದಿವೆ.

    ಕೇಂದ್ರಸ್ಥಾನ ಖಾಲಿ ಖಾಲಿ
    ಜಿಲ್ಲಾ ಕೇಂದ್ರ ವಿಜಯಪುರ ಜಿಲ್ಲೆಯ ಪ್ರಮುಖ ರಸ್ತೆ, ಬಸ್ ನಿಲ್ದಾಣ, ಅಂಗಡಿ, ಮಾರುಕಟ್ಟೆ, ಬಜಾರ್‌ಗಳೆಲ್ಲವೂ ಜನರಿಲ್ಲದೆ ಖಾಲಿ ಖಾಲಿಯಾಗಿದೆ.

    ಪ್ರತಿನಿತ್ಯ ಸಾವಿರಾರು ಜನರು ವಿವಿಧ ಗ್ರಾಮಗಳಿಂದ, ಪಟ್ಟಣಗಳಿಂದ ನಗರಕ್ಕೆ ಬರುವುದು ಹೆಚ್ಚು. ಆದರೆ ಲಾಕ್‌ಡೌನ್ ಹಿನ್ನೆಲೆ ಸಂಪೂರ್ಣ ವಿಜಯಪುರ ನಗರದ ರಸ್ತೆಗಳು ಬಿಕೊ ಎನ್ನುತ್ತಿದ್ದು, ವಾಹನ ಸಂಚಾರ ಇಲ್ಲದೆ ನಗರ ಸಂಪೂರ್ಣ ಸ್ತಬ್ಧಗೊಂಡಿದೆ.

    ರಾಸುಗಳಿಗೆ ಸಿಗುತ್ತಿಲ್ಲ ಆಹಾರ
    ನಗರ, ಪಟ್ಟಣಗಳಲ್ಲಿ ಅಂಗಡಿ, ಮುಂಗ್ಗಟ್ಟು, ಹೋಟೆಲ್ ಉದ್ಯಮ ಎಲ್ಲವೂ ಸಂಪೂರ್ಣ ಬಂದ್ ಆಗಿದ್ದು, ಇದರಿಂದ ರಸ್ತೆಯಲ್ಲಿ ತಿರುಗಾಡುತ್ತಿದ್ದ ರಾಸುಗಳಿಗೆ ಆಹಾರದ ಕೊರತೆ ಎದುರಾಗಿದೆ.

    ನಿತ್ಯ ಜನರು, ಹೋಟೆಲ್‌ನವರು ಜಾನುವಾರುಗಳಿಗೆ ಆಹಾರ ನೀಡುತ್ತಿದ್ದರೂ, ಆದರೆ ಅವುಗಳಿಗೆ ಆಹಾರ ಇಲ್ಲದೆ ರಸ್ತೆ ಬದಿಯಲ್ಲಿ ಗುಂಪು-ಗುಂಪಾಗಿ ಕುಳಿತುಕೊಂಡಿರುವ ದೃಶ್ಯಗಳು ಕಂಡು ಬರುತ್ತಿವೆ.

    ಬಿಡಾಡಿ ದನಗಳಿಗೆ ಆಹಾರ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಿದ್ದು, ಈ ಬಗ್ಗೆ ಪಾಲಿಕೆ ಅಧಿಕಾರಿಗಳು, ರಾಸುಗಳ ಮಾಲೀಕರು ಮಾನವೀಯತೆ ತೋರಬೇಕು ಎಂದು ಸಾರ್ವಜನರಿಕರು ಆಗ್ರಹಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts