More

    ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ

    ವಿಜಯಪುರ: ಹಲವಾರು ದಶಕಗಳಿಂದ ಜಗತ್ತಿನಾದ್ಯಂತ ಸಮಾಜ ಸೇವೆ ಮುಖ್ಯ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಲಯನ್ ಡಿಸ್ಟ್ರಿಕ್ಟ್ 317- ಗವರ್ನರ್ ಎಂಜೆಎ್ ಶ್ರೀಕಾಂತ್ ಮೋರೆ ಹೇಳಿದರು.ಇಲ್ಲಿನ ಲಯನ್ಸ್ ಕ್ಲಬ್ ಆ್ ಬಿಜಾಪುರ ಪರಿವಾರ ಕ್ಲಬ್‌ಗೆ ಗುರುವಾರ ಭೇಟಿ ನೀಡಿ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲಯನ್ಸ್ ಸಂಸ್ಥೆ ಸಾಮಾಜಿಕ ಕಳಕಳಿ ಹೊಂದಿದೆ. ನೆರವಿನ ಸೇವೆಗೆ ಸದಾ ಮುಂಚೂಣಿಯಲ್ಲಿದೆ. ಅಪರೂಪದ ಸೇವಾಭಾವ ಮೆರೆಯುತ್ತಿದೆ. ಸಾಕಷ್ಟು ಜನರ ಕಷ್ಟ ಕಾರ್ಪಣ್ಯ, ನೋವು, ನಲಿವುಗಳಿಗೆ ಸ್ಪಂದಿಸಿ ಉತ್ಕಟ ಕಾಯಕದಲ್ಲಿ ನಿರತವಾಗಿದೆ. ಸೇವೆಗೆ ಇಲ್ಲಿ ಆದ್ಯತೆ ನೀಡಲಾಗಿದ್ದು, ಇದರಿಂದ ಹಲವಾರು ಜನರಿಗೆ ಅನುಕೂಲವಾಗಿದೆ ಎಂದರು.

    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನುಗ್ರಹ ಕಣ್ಣಿನ ಆಸ್ಪತ್ರೆ ವೈದ್ಯ, ಲಯನ್ಸ್ ಕ್ಲಬ್ ಆ್ ಬಿಜಾಪುರ ಪರಿವಾರ ಅಧ್ಯಕ್ಷ ಡಾ. ಪ್ರಭುಗೌಡ ಪಾಟೀಲ, ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಲಯನ್ ಸತ್ಯಕಾಮ ಕಟ್ಟಿ, ಯಾಜ್ ಕಲಾದಗಿ, ಕಲಾವಿದ ಸೋಮಶೇಖರ ರಾಠೋಡ, ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಅನ್ನಪೂರ್ಣ ಭೋಸಲೆ ಹಾಗೂ ಅನುಶ್ರೀ ಸಮಗೊಂಡ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts