More

    ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ವಿರೋಧ


    ವಿಜಯಪುರ : ನೂತನ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಗುರುವಾರ ರೈತ-ಕೃಷಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

    ಮುಖಂಡ ಭರತಕುಮಾರ ಎಚ್.ಟಿ ಮಾತನಾಡಿ, ರೈತ ವಿರೋಧಿ, ಕಾರ್ಪೋರೇಟ್ ಕಂಪನಿಗಳ ಪರವಾಗಿ ಜಾರಿಯಾದ
    ನೂತನ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು. ರೈತರ ಬೆನ್ನಿಗೆ ರಾಜ್ಯ ಸರ್ಕಾರ ಚೂರಿ ಹಾಕಿದೆ. ರೈತರ ಮೇಲೆ ಆಣೆ ಪ್ರಮಾಣ ಮಾಡುವ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತ ಬಂದಿವೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯಿಂದ ದೇಶದ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಈ ಕಾಯ್ದೆ ರೈತರರಿಗೆ ಮರಣ ಶಾಸನ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಮ್ಮನ್ನಾಳುವ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ರೈತರನ್ನು ಬಲಿಕೊಟ್ಟು ಕಾಯ್ದೆಗಳ ಪರವಾಗಿ ವಿಧಾನಸಭೆಯಲ್ಲಿ ಮತ ಹಾಕುವ ಮೂಲಕ ಆ ಪಕ್ಷಗಳು ಜನತೆಯ ಮುಂದೆ ಬೆತ್ತಲೆಯಾಗಿವೆ. ಮಣ್ಣಿನ ಮಕ್ಕಳ ಪಕ್ಷವಾದ ಜೆಡಿಎಸ್ ಡೋಂಗಿತನ ಪ್ರದರ್ಶಿಸಿದೆ. ಸದನದಲ್ಲಿ ಮತ ಚಲಾಯಿಸಿ ಹೊರಗಡೆ ರೈತರ ಕಣ್ಣೀರು ಒರೆಸುವ ನಾಟಕವಾಡುತ್ತಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ಸದನದಲ್ಲಿ ತಮ್ಮ ಸಂಪೂರ್ಣ ಬೆಂಬಲದೊಂದಿಗೆ ಈ ಕಾನೂನು ವಿರೋಧಿಸುವಲ್ಲಿ ವಿಲವಾಗಿದೆ. ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ ವಿಧಾನ ಸಭೆಗಳಲ್ಲಿ ಯಾವುದೇ ಚರ್ಚೆಯನ್ನೂ ನಡೆಸದೆ ಎಲ್ಲವನ್ನು ಕಾಯ್ದೆಯಾಗಿ ಜಾರಿ ಮಾಡಲು ಹವಣಿಸುತ್ತಿವೆ. ಕಾರ್ಪೋರೇಟ್ ಕಂಪನಿಗಳ ಗುಲಾಮರಾಗಿರುವ ಸರ್ಕಾರಗಳು, ದೇಶದ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಸುಬುದಾರರನ್ನು ಗುಲಾಮರನ್ನಾಗಿ ಮಾಡಲು ಇಂತಹ ಕಾಯ್ದೆ ತಿದ್ದುಪಡ್ಡಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಜಿಲ್ಲೆಯ ತಾಜಪುರ, ಸೋಮದೇವರ ಹಟ್ಟಿ, ಕವಲಗಿ, ಹೊನ್ನುಟಗಿ, ಕುಮಟಗಿ, ಕಗ್ಗೊಡ, ಹಡಲಗಿ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಮುಖಂಡರಾದ ಸಿದ್ಧಲಿಂಗ ಬಾಗೇವಾಡಿ, ಮಲ್ಲಿಕಾರ್ಜುನ ಎಚ್.ಟಿ, ಬಾಳೂ ಜೇವೂರ, ಸುನಿಲ ಸಿದ್ರಾಮಶೆಟ್ಟಿ, ಆಕಾಶ ರಾಮತಿರ್ಥ, ಶೋಭಾ ಯರಗುದ್ರಿ, ಕಾವೇರಿ ರಜಪೂತ, ದುಂಡೇಶ ಬಿರಾದಾರ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts