More

    ರೂ.9.30 ಲಕ್ಷ ಮೌಲ್ಯದ 20 ಬೈಕ್ ವಶ

    ವಿಜಯಪುರ: ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿ 20 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

    ಇಂಡಿ ತಾಲೂಕಿನ ಜೀರಂಕಲಗಿ ಗ್ರಾಮದ ರೇವಣಸಿದ್ದ ಗುರಪ್ಪ ಬಿರಾದಾರ(21) ಹಾಗೂ ಕೂಡಗಿ ಗ್ರಾಮದ ಸುರೇಶ ರಾವುತರಾಯ ಬಿರಾದಾರ(30) ಬಂಧಿತರು ಎಂದು ಎಸ್‌ಪಿ ಎಚ್.ಡಿ. ಆನಂದಕುಮಾರ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಹಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಹೀಗಾಗಿ ಇಂಡಿ ಡಿವೈಎಸ್‌ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಸದರಿ ತಂಡ ಚುರುಕಿನ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಪತ್ತೆ ಹಚ್ಚಿದ್ದಾರೆ. ವಶಪಡಿಸಿಕೊಂಡ ಮೋಟಾರ್ ಸೈಕಲ್‌ಗಳ ಮೊತ್ತ 9.30 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

    ತಂಡದಲ್ಲಿದ್ದ ಸಿಪಿಐ ಎಸ್.ಎಂ. ಪಾಟೀಲ, ಪಿಎಸ್‌ಐ ಎಂ.ಎ. ಸತಿಶಗೌಡರ ಮತ್ತಿತರ ಸಿಬ್ಬಂದಿಗೆ ಸೂಕ್ತ ಬಹುಮಾನ ಘೋಷಿಸಲಾಗಿದೆ ಎಂದು ಎಸ್‌ಪಿ ಎಚ್‌ಡಿ ಆನಂದಕುಮಾರ ತಿಳಿಸಿದರು. ಎಎಸ್‌ಪಿ ಡಾ.ರಾಮ ಅರಸಿದ್ದಿ ಮತ್ತಿತರರು ಇದ್ದರು.

    ಸಲಾದಹಳ್ಳಿ ಜೋಡಿ ಕೊಲೆ ಪ್ರಕರಣ
    ಕಲಕೇರಿ ಠಾಣೆ ವ್ಯಾಪ್ತಿಯ ಸಲಾದಹಳ್ಳಿ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಎಸ್‌ಪಿ ಎಚ್.ಡಿ. ಆನಂದಕುಮಾರ ತಿಳಿಸಿದರು.

    ಸಲಾದಹಳ್ಳಿ ನಿವಾಸಿ ಬಂದಗಿಸಾಬ ಕಾಶಿಮಸಾಬ ತಂಬದ ಪ್ರಮುಖ ಆರೋಪಿಯಾಗಿದ್ದು, ಅವನನ್ನು ಸೇರಿ ಒಟ್ಟು ಐವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಬಂದಗಿಸಾಬ ಈ ಮೊದಲು ಐದನೇ ಆರೋಪಿಯಾಗಿದ್ದ. ಇದೀಗ 1 ನೇ ಆರೋಪಿಯಾಗಿಸಲಾಗಿದೆ ಎಂದರು.

    ಸಲಾದಹಳ್ಳಿಯಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಬಸವರಾಜ ಮಡಿವಾಳಪ್ಪ ಬಡಿಗೇರ ಊರ್ಫ ಮಾದರ(21) ಹಾಗೂ ಅದೇ ಗ್ರಾಮದ 15 ವರ್ಷದ ಬಾಲಕಿ ಕೊಲೆಯಾಗಿತ್ತು. ವಶಕ್ಕೆ ಪಡೆದ ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಪ್ರಕರಣದಲ್ಲಿ ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಅಧಿಕಾರಿಗಳ ಕಾರ್ಯವನ್ನು ಎಸ್‌ಪಿ ಶ್ಲಾಘಿಸಿದರು.

    ಹೆಚ್ಚುತ್ತಿರುವ ಸಂಚಾರ ದಟ್ಟಣೆ, ಅಪಘಾತ ಪ್ರಕರಣ ತಡೆಗೆ ಪ್ರಯತ್ನಿಸಲಾಗುವುದು. ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿಸಲು ಪ್ರಯತ್ನಿಸುವೆ. ಈ ಹಿಂದೆ ಇದೇ ಜಿಲ್ಲೆಯಲ್ಲಿ ಕೆಲವು ಪ್ರಮುಖ ಪ್ರಕರಣಗಳ ತನಿಖೆ ನಡೆಸಿದ್ದು, ಇಲ್ಲಿನ ವ್ಯವಸ್ಥೆ ಬಗ್ಗೆ ಸಂಪೂರ್ಣ ಅರಿವಿದೆ. ಹೀಗಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವೆ. ಜನರು ಯಾವುದೇ ಸಮಸ್ಯೆಯಿದ್ದಲ್ಲಿ ನಿರ್ಭಿಡೆಯಿಂದ ಸಂಪರ್ಕಿಸಲಿ.
    ಎಚ್.ಡಿ. ಆನಂದಕುಮಾರ, ಎಸ್‌ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts