More

    ಮೊಂಡುತನ ಬಿಟ್ಟು ನ್ಯಾಯ ಸಮ್ಮತ ಬೇಡಿಕೆ ಈಡೇರಿಸಿ

    ವಿಜಯಪುರ: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಕೂಡಲೇ ನೌಕರರ ಬೇಡಿಕೆ ಈಡೇರಿಸಲು ಆಗ್ರಹಿಸಿ ಸೋಮವಾರ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಜಿಲ್ಲಾಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿ 13 ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಆದರೂ ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿ ಸ್ಪಂದಿಸುತ್ತಿಲ್ಲ. ಬದಲಾಗಿ ಉಡಾಫೆಯ ಉತ್ತರಗಳನ್ನು ನೀಡುತ್ತಿದ್ದಾರೆ. ಈ ಮೊದಲು ಡಿ. 13 ರಂದು ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಾಗ 3 ತಿಂಗಳ ಅವಧಿಯಲ್ಲಿ ಬಗೆಹರಿಸುವುದಾಗ ಭರವಸೆ ನೀಡಲಾಗಿತ್ತು. ಆದರೀಗ ಸೌಜನ್ಯಕ್ಕೂ ಮಾತನಾಡುತ್ತಿಲ್ಲವೆಂದರು.


    ವಿಕಾಸ ಸೌಧದಲ್ಲಿ ನಡೆದ ಸಂಧಾನ ಸಭೆಯಲ್ಲಿ ಪ್ರಮುಖ 10 ಬೇಡಿಕೆಗಳ ಪೈಕಿ 9ನ್ನು ಈಡೇರಿಸುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದ್ದರು. ಈ 9 ಬೇಡಿಕೆಗಳನ್ನು ಈಡೇರಿಸುವಲ್ಲಿಯೂ ಸಾರಿಗೆ ಸಚಿವರು ಎಡವಿದ್ದಾರೆ. ಸರ್ಕಾರದ ಅಸಡ್ಡೆತನದಿಂದಾಗಿ ರಾಜ್ಯದಲ್ಲಿ ಕಳೆದ 13 ದಿನಗಳಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಸಾರಿಗೆ ನೌಕರರಿಂದ ಸಾರ್ವಜನಿಕರಿಗೆ ತೊಂದರೆಯಾಗಿಲ್ಲ. ಬದಲಾಗಿ ಸರ್ಕಾರದ ಧೋರಣೆಯಿಂದ ತೊಂದರೆಯಾಗುತ್ತಿದೆ ಎಂದರು.

    ಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಸರ್ಕಾರ ಕೊಡುವ ಪುಡಿಗಾಸಿನ ಸಂಬಳದಲ್ಲಿ ಹೆಂಡತಿ ಮಕ್ಕಳನ್ನು ಸಲುವುದು ಸಾರಿಗೆ ನೌಕರರಿಗೆ ಅಸಾಧ್ಯದ ಮಾತಾಗಿದೆ. ಸದರಿ ಸಂಬಳದಲ್ಲಿ ಮನೆ ಬಾಡಿಗೆ, ಒಪ್ಪತ್ತಿನ ಊಟಕ್ಕೂ ಸಾಲುತ್ತಿಲ್ಲ. ಹೀಗಿರುವಾಗ ಮಕ್ಕಳ ಶಿಕ್ಷಣ, ಆರೋಗ್ಯ, ತಂದೆ-ತಾಯಿಗಳನ್ನು ಸಲುವುದಾದರೂ ಹೇಗೆ? ಮಾರ್ಚ್ ತಿಂಗಳಿನ ಸಂಬಳವನ್ನು ಸರ್ಕಾರ ನೀಡದ ಹಿನ್ನೆಲೆ ಯುಗಾದಿ ಹಬ್ಬವನ್ನೂ ಆಚರಿಸಲಾಗಲಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ನೌಕರರ ಬೇಡಿಕೆಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು.

    ಲಕ್ಷ್ಮಿಬಾಯಿ ಹಿಪ್ಪರಗಿ, ಶೋಭಾ ನಂದಿಕೋಲ, ದಾನಮ್ಮ ತೆಗ್ಗಳ್ಳಿ, ಲಕ್ಷ್ಮಿಬಾಯಿ ಗವಿಮಠ, ಸಂತೋಷ ಹಂಗರಗಿ, ಕೃಷ್ಣಾ ಬೊಂದ್ರೆ, ಸಂತೋಷ ಹಂಚಿನಾಳ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts