More

    ಜಲದಾನ ಜೀವದಾನಕ್ಕೆ ಸಮಾನ

    ವಿಜಯಪುರ: ಬೇಸಿಗೆಯಲ್ಲಿ ಕುಡಿವ ನೀರು ದಾನ ಮಾಡುವುದು ಶ್ರೇಷ್ಠ ದಾನ. ಜಲ ದಾನ ಜೀವದಾನಕ್ಕೆ ಸಮ ಎಂದು ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ವಿಶ್ವಪ್ರಸನ್ನತೀರ್ಥ ಶ್ರೀಗಳು ಹೇಳಿದರು.
    ನಗರದ ಶ್ರೀಮಠದ ವಿದ್ಯಾರ್ಥಿನಿಲಯಕ್ಕೆ ದಾನವಾಗಿ ಬಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಗುರುವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
    ಆಹಾರವಿಲ್ಲದೇ ಬದುಕಬಹುದು. ಆದರೆ, ನೀರಿಲ್ಲದೇ ಬದಕಲು ಸಾಧ್ಯವಿಲ್ಲ ಎಂದ ಅವರು ಇತ್ತೀಚಿನ ದಿನಗಳಲ್ಲಿ ಕಲುಷಿತ ನೀರು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.

    ವಾದಿರಾಜರ ಆರಾಧನೆ- ರಥ ಸಮರ್ಪಣೆ

    ಶ್ರೀಮಠದಲ್ಲಿ ವಾದಿರಾಜರ ಆರಾಧನೆ ನಿಮಿತ್ತ ಶ್ರೀಕೃಷ್ಣ ದೇವರಿಗೆ ಸ್ವರ್ಣ ಕಿರೀಟ ಅಲಂಕಾರ ಮತ್ತು ವಾದಿರಾಜರ ವಿಗ್ರಹಕ್ಕೆ ಪುಷ್ಪಾಲಂಕಾರ ಮಾಡಲಾಗಿತ್ತು. ಭಕ್ತರು ಕಾಣಿಕೆಯಾಗಿ ನೀಡಿದ ನೂತನ ರಥ ಸಮರ್ಪಣೆಯನ್ನು ಶ್ರೀಗಳು ನೆರವೇರಿಸಿದರು.
    ಸಂಸ್ಥಾನ ಪೂಜೆ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಶ್ರೀಮಠದ ಗೌರವಾಧ್ಯಕ್ಷ ಗೋಪಾಲ ನಾಯಕ, ಶ್ರೀಕೃಷ್ಣ-ವಾದಿರಾಜ ಮಠದ ಅಧ್ಯಕ್ಷ ಡಾ.ಆರ್.ಜೆ. ಮಂಗಲಗಿ, ವ್ಯವಸ್ಥಾಪಕ ಪಂ. ವಾಸುದೇವಾಚಾರ್ಯ, ಕಾರ್ಯದರ್ಶಿ ಹಾಗೂ ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ ಕೃಷ್ಣ ಪಡಗಾನೂರ, ಆರ್.ಬಿ. ಕುಲಕರ್ಣಿ, ಡಾ.ಉಪೇಂದ್ರ ನರಸಾಪುರ, ಪ್ರಕಾಶ ಅಕ್ಕಲಕೋಟ, ವಿ.ಸಿ. ಕುಲಕರ್ಣಿ, ಶ್ರೀನಿವಾಸ ಬೆಟಗೇರಿ ಇದ್ದರು. ವಿದ್ಯಾರ್ಥಿನಿಲಯಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಕೊಟ್ಟ ಪ್ರವೀಣ ಬದಾಮಿ ಅವರನ್ನು ಶ್ರೀಗಳು ಸನ್ಮಾನಿಸಿದರು. ಭಕ್ತಾದಿಗಳಿಗೆ ಲ ಮಂತ್ರಾಕ್ಷತೆ ನೀಡಿ ಶ್ರೀಗಳು ಉಡುಪಿಗೆ ಪ್ರಯಾಣ ಬೆಳೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts