More

    ಭೂಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಲು ಆಗ್ರಹ

    ವಿಜಯಪುರ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
    ಜಿಲ್ಲಾಧ್ಯಕ್ಷ ಶಕ್ತಿಕುಮಾರ ಉಕುಮನಾಳ ಮಾತನಾಡಿ, 1961ರಲ್ಲಿ ಬಿ.ಡಿ. ಜತ್ತಿ ಶಿಾರಸಿನ ಆಧಾರದಲ್ಲಿ ಅವಿಭಕ್ತ ಕುಟುಂಬಕ್ಕೆ 256 ಎಕರೆ ಮಿತಿಗೊಳಿಸಿ ಭೂಸುಧಾರಣೆ ಕಾಯ್ದೆ ಜಾರಿಯಾಯಿತು. ಇದು ಅಷ್ಟೆನ್ನು ಉಪಯೋಗವಾಗದಿದ್ದರೂ ಗೇಣಿ ಸಮಸ್ಯೆಗೊಂದಷ್ಟು ಪರಿಹಾರ ಸಿಕ್ಕಿ ಭೂಹೀನ ಬಡವರು ಹಾಗೂ ದಲಿತ ಸಮುದಾಯಕ್ಕೆ ದರಖಾಸ್ತು ಮೂಲಕ ಭೂ ಹಂಚಿಕೆ ಚಾಲನೆ ದೊರೆಯಿತು.
    ದೇವರಾಜ ಅರಸ್ ಅವರು ಮುಖ್ಯಮಂತ್ರಿಯಾಗಿದ್ದಾಗ 1974ರ ಭೂ ಸುಧಾರಣೆ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ತಂದು ಉಳುವವರನೇ ಭೂಮಿ ಒಡೆಯನೆಂದು ಘೋಷಿಸಿದ್ದರು. ಸದ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರ ಸರ್ಕಾರವು ಈ ಕಾಯ್ದೆಯನ್ನು ಮೊಟಕುಗೊಳಿಸಿ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಈಗಿನ ಸರ್ಕಾರ ಜಾರಿಗೆ ತರಲಿರುವ ಭೂಸುಧಾರಣೆ ಕಾಯ್ದೆಯನ್ನು ಖಾಸಗೀಕರಣಗೊಳಿಸಿ ರೈತರ ಜಮೀನುಗಳನ್ನು ಕಬಳಿಸುವ ಹುನ್ನಾರಕ್ಕೆ ಕೈಹಾಕಿದೆ. ಈ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಮರಣಶಾಸನವಾಗಿ ಪರಿಣಮಿಸಲಿದೆ. ಆದ್ದರಿಂದ ಈ ಭೂಸುಧಾರಣೆ ಕಾಯ್ದೆಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.
    ಗೌರವಾಧ್ಯಕ್ಷ ಯಾಜ್ ಕಲಾದಗಿ ಮಾತನಾಡಿದರು. ಆಶಾರಾಣಿ ಬಿಜಾಪುರ, ಮಹಾದೇವಿ ತಳಕೇರಿ, ದತ್ತಾತ್ರಯ ಹಿಪ್ಪರಗಿ, ಬಾಳಾಸಾಹೇಬ ಇಂಡಿ, ಲಿಂಗರಾಜ ಬಿದರಕುಂದಿ, ಗಂಗಾಧರ ಬೋಳೆಗಾಂವಿ, ಪರಶುರಾಮ ಬಿಜಾಪುರ, ವೀರೇಶ ಅಗಸರ, ಲಕ್ಷ್ಮಣರಾವ ಪಡನೀಸ್, ಬಸವರಾಜ ಎಳ್ಳೂರ, ಬಸವರಾಜ ಗಬಸಾವಳಗಿ, ಶರಣಬಸು ನಾವಿ, ರಮೇಶ ವಾಲಿಕಾರ, ರಾಜೇಸಾಬ ಪಿಂಜಾರ್, ಸುಭದ್ರಮ್ಮ ಕರಜಗಿ, ಲಕ್ಷ್ಮಣ ಕೊಡಬಿ, ಋಷಿಕೇಶ ಮಾಶ್ಯಾಳಕರ, ಅಬ್ದುಲ್‌ಮಜೀದ್ ಇಂಡಿಕರ, ಸಾಗರ ಅಜೂರ, ರಮೇಶ ವಾಲಿಕಾರ ಇನ್ನಿತರರು ಉಪಸ್ಥಿತರಿದ್ದರು.

    ಭೂಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಲು ಆಗ್ರಹ
    ಭೂಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಲು ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts