More

    ಶೀಘ್ರದಲ್ಲೇ ಕರ್ನಾಟಕ ಡ್ರಗ್ಸ​​ ಮುಕ್ತ

    ವಿಜಯಪುರ: ಕರ್ನಾಟಕವನ್ನು ಶೀಘ್ರದಲ್ಲಿಯೇ ಡ್ರಗ್ಸ ಮುಕ್ತ ರಾಜ್ಯವನ್ನಾಗಿಸುವ ಸಂಕಲ್ಪ ಮಾಡಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ಹೇಳಿದರು.
    ಬೆಂಗಳೂರು ಸಿಟಿ ಸೇರಿದಂತೆ ಜಿಲ್ಲೆಗಳಲ್ಲಿ ಡ್ರಗ್ಸ್ ಚಟುವಟಿಕೆಗೆ ಸಂಪೂರ್ಣ ಕಡಿವಾಣ ಹಾಕಲು ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಆಯಾ ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇನ್ನು ಮಹಾರಾಷ್ಟ್ರ, ಆಂಧ್ರದ ಗಡಿಗೆ ಹೊಂದಿಕೊಂಡ ಜಿಲ್ಲೆಗಳ ಗಡಿಯಲ್ಲಿ ಡ್ರಗ್ಸ್ ಸಾಗಣೆಯಾಗದಂತೆ ತಡೆಯಲು ಹಾಗೂ ಡ್ರಗ್ಸ್ ಸಂಪೂರ್ಣ ನಿಯಂತ್ರಣಕ್ಕಾಗಿ ಚರ್ಚೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ಸುದೀರ್ಘ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಗಳೊಂದಿಗೆ ಅವರು ಮಾತನಾಡಿದರು.
    ಕರೊನಾ ಕಾಲಘಟ್ಟದಲ್ಲಿ ಪೊಲೀಸ್ ಕಾರ್ಯವೈಖರಿ ಬದಲಾಗುತ್ತಿದೆ. ಪೊಲೀಸ್ ಕಾರ್ಯಚಟುವಟಿಕೆಗೆ ಹೊಸ ಸ್ವರೂಪ ಒದಗಿಸಲಾಗುತ್ತಿದ್ದು, ವಿವಿಧ ಪ್ರಕರಣಗಳಲ್ಲಿ ಬಂಧಿತ ಆರೋಪಿಗಳನ್ನು ವಿಡಿಯೋ ಸಾಕ್ಷಿ ಮೂಲಕ ಕೋರ್ಟ್‌ಗೆ ಹಾಜರುಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ವಿಡಿಯೋ ಮೂಲಕವೇ ಸಾಕ್ಷಿದಾರರ ಹೇಳಿಕೆ ರೆಕಾರ್ಡ್ ಮಾಡುವ ಕಾಲ ಬರಬಹುದು. ಕರೊನಾ ಪರಿಸ್ಥಿತಿಯಿಂದಾಗಿ ತಾಂತ್ರಿಕತೆ ಹೆಚ್ಚು ಬಳಕೆಯಾಗುತ್ತಿರುವುದು ಹೊಸ ಬೆಳವಣಿಗೆ ಎಂದರು.
    ಕರೊನಾ ವಾರಿಯರ್ಸ್ ಆಗಿರುವ ಪೊಲೀಸರು ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ 44 ಆರಕ್ಷಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರಿಗೆ ಈಗಾಗಲೇ ಸರ್ಕಾರದಿಂದ ತಲಾ 30 ಲಕ್ಷ ರೂ. ಪರಿಹಾರ, ಅವರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪ ಆಧಾರಿತ ನೌಕರಿ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

    ಸಹಾಯವಾಣಿ ಡೈಲ್ 112

    ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ಹಲವಾರು ಆಡಳಿತಾತ್ಮಕ ವಿಚಾರಗಳನ್ನು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ವಸತಿ ಗೃಹಕ್ಕೆ ಮೂಲ ಸೌಕರ್ಯ, ಠಾಣೆಗಳಿಗೆ ಮೂಲ ಸೌಲಭ್ಯ, ಖಾಲಿ ಇರುವ ಹುದ್ದೆ ಭರ್ತಿ ಹೀಗೆ ಅನೇಕ ರೀತಿಯ ಮಹತ್ವದ ವಿಷಯಗಳನ್ನು ಚರ್ಚೆ ಮಾಡಿದ್ದೇನೆ ಎಂದರು.
    ಅದೇ ತೆರನಾಗಿ ಬೆಂಗಳೂರು ಮಹಾನಗರದಲ್ಲಿ ಈಗಾಗಲೇ ತುರ್ತು ಸಂದರ್ಭದಲ್ಲಿ ರಕ್ಷಣೆಯ ಸಹಾಯವಾಣಿ ಡೈಲ್-112 ಕಾರ್ಯನಿರ್ವಹಿಸುತ್ತಿದೆ. ಅದೇ ಮಾದರಿಯಲ್ಲಿ ವಿಜಯಪುರದಲ್ಲೂ ತುರ್ತು ಸಂದರ್ಭದಲ್ಲಿ ಸ್ಪಂದಿಸಿ ಸಹಾಯ ದೊರಕಿಸುವ ಡೈಲ್ 112ನ್ನು ಮೂರ‌್ನಾಲ್ಕು ತಿಂಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts