More

    ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

    ವಿಜಯಪುರ: ಕವಿಗಳು ಸದಾ ಕ್ರಿಯಾಶೀಲರಾಗಿರಬೇಕು. ಅದಕ್ಕೆ ಪುಸ್ತಕ ಓದುವ ಹವ್ಯಾಸ ಹೊಂದಿರುವ ಜತೆಗೆ ಸಮರ್ಪಣಾಭಾವ ಬೆಳೆಸಿಕೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.
    ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ ಹಾಗೂ ಲಿಂ. ಮಡಿವಾಳಪ್ಪ ತುಳಜಪ್ಪ ಸಾಸನೂರ ಲಿಂ, ಬಸನಗೌಡ ಸೋಮನಗೌಡ ಪಾಟೀಲ, ಲಿಂ. ಬಸಪ್ಪ ಅಡಿವೆಪ್ಪ ಬಿಜ್ಜರಗಿ, ಲಿಂ. ಪ್ರಭಾವತಿ ಪಟ್ಟಣಶೆಟ್ಟಿ ಅವರ ಸ್ಮರಣಾರ್ಥ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಸಾಹಿತ್ಯ ಓದುವುದು ಮನಸ್ಸಿಗೆ ಸಂತೋಷ ಕೊಡುತ್ತದೆ. ಅದನ್ನು ಅನುಭವಿಸುವ ಸಾಹಿತಿಗಳು ಅಭಿನಂದನಾರ್ಹರು. ಸಮಾಜದಲ್ಲಿರುವ ಪ್ರತಿಯೊಬ್ಬರೂ ಪ್ರೀತಿ, ಗೌರವ ಹಾಗೂ ವಿಶ್ವಾಸದಿಂದ ಬಾಳಬೇಕು, ಅದನ್ನು ಸಾಹಿತ್ಯ ಕಲಿಸುತ್ತದೆ ಎಂದರು.
    ಸಾಹಿತಿ, ವೈದ್ಯೆ ಡಾ. ರೇಖಾ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕವಿಯನ್ನು ಕಾವ್ಯಲೋಕದ ಸಾರ್ವಭೌಮ ಎಂದು ಕರೆಯಲಾಗುತ್ತದೆ. ಆತ ಒಬ್ಬ ಅಪರೂಪದ ಕಲ್ಪನಾಕಾರ. ಕವಿತೆಯಲ್ಲಿ ಅದ್ಭುತ ಶಕ್ತಿ ಅಡಗಿದೆ. ದೇಶ ವಿಭಜನೆಯ ಕಾಲದಲ್ಲಿ ಬರೆದ ಕವಿತೆಗಳು ದೊಡ್ಡ ಕ್ರಾಂತಿಯನ್ನು ಹುಟ್ಟಿಸಿದ್ದು ಇತಿಹಾಸ ಎಂದರು.
    ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಾಜಕುಮಾರ ಜೋಲ್ಲೆ ಮಾತನಾಡಿ, ವೈದ್ಯಕೀಯ, ತಂತ್ರಜ್ಞಾನ, ಕೃಷಿ ಕ್ಷೇತ್ರದಲ್ಲಿ ಓದುತ್ತಿದ್ದರೂ, ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಓದಬೇಕು. ಕವಿ ಮತ್ತು ಸಾಹಿತಿಗಳು ಗ್ರಾಮೀಣ ಸಂಸ್ಕೃತಿ ಕಟ್ಟಿಕೊಡುವಂತಹ ಕವಿತೆಗಳನ್ನು ರಚಿಸಬೇಕು. ಆಗ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಹುಟ್ಟುತ್ತದೆ ಎಂದರು.
    ಸಾಹಿತಿ ದಾಕ್ಷಾಯಿಣಿ ಹುಡೇದ ನ್ಯಾಯವಾದಿ ವಿದ್ಯಾವತಿ ಅಂಕಲಗಿ, ವಸಂತ ಕೊರ್ತಿ, ಸುನಂದಾ ಕಾಖಂಡಕಿ, ಎಂ.ಐ. ಬೇಪಾರಿ, ಸಾಗರ ಕುಲಕರ್ಣಿ, ಸಿದ್ದನಗೌಡ ಅರಿಶಿನಕುಂಟೆ, ಕೆ.ಎ್. ಅಂಕಲಗಿ, ಎಸ್.ಎಸ್. ಖಾದ್ರಿ ಇನಾಮದಾರ, ಬಸವರಾಜ ಕುಂಬಾರ, ಮಹಾದೇವಿ ತೆಲಗಿ, ಶರಣಗೌಡ ಪಾಟೀಲ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts