More

    ಕಾಳಿದಾಸರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ

    ವಿಜಯಪುರ: ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಕಾಳಿದಾಸರ ಸಂದೇಶಗಳನ್ನು ಜನರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
    ಇಲ್ಲಿನ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕವಿರತ್ನ ಕಾಳಿದಾಸರ ಕಾವ್ಯ ರಸಾಸ್ವಾದ-5 ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ನಮ್ಮ ದೇಶದ ಸಂಸ್ಕೃತಿ ಭವ್ಯವಾದದ್ದು, ಅದಕ್ಕೆ ಅಭೂತಪೂರ್ವ ಮಹನಿಯರು ಕೊಡುಗೆ ನೀಡಿದ್ದಾರೆ. ಅವರ ಮಹತ್ತರ ಕಾರ್ಯ ಮೆಚ್ಚುವಂತಹದ್ದು. ಕಾಳಿದಾಸರ ಸಂಸ್ಕೃತ, ಆಧ್ಯಾತ್ಮಿಕ, ವಿಜ್ಞಾನದ ವೈಭವ ಸಂಸ್ಕೃತ ಸಾಹಿತ್ಯದಲ್ಲಿ ಕಾಣಬಹುದು. ಹಿಂದಿನ ರಾಜರ ಆಡಳಿತ ವೈಖರಿಯ ವರ್ಣನೆ ಕಾಳಿದಾಸರ ಕೃತಿಯಲ್ಲಿ ಕಾಣಬಹುದಾಗಿದೆ ಎಂದರು.
    ಸರ್ವಜ್ಞ ವಿಹಾರ ವಿದ್ಯಾಪೀಠ ಕುಲಪತಿ ಪಂಡಿತ ಮಧ್ವಾಚಾರ್ಯ ಮೋಕಾಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಳಿದಾಸರ ವರ್ಣಾತೀತ ವ್ಯಕ್ತಿಯಾಗಿದ್ದರು. ಅವರ ತತ್ವಾದರ್ಶಗಳನ್ನು ಕಾಳಿದಾಸ ಶಿಕ್ಷಣ ಸಂಸ್ಥೆಯು ಅಳವಡಿಸಿಕೊಂಡಿರುವುದು ಉತ್ತಮ ಕಾರ್ಯವಾಗಿದೆ ಎಂದರು.
    ಸಂಸ್ಥೆ ಅಧ್ಯಕ್ಷ ಎಸ್.ಎ. ಜಿದ್ದಿ ಮಾತನಾಡಿದರು. ಕಾಳಿದಾಸರ ಮಹಾಕಾವ್ಯ ಕುರಿತು ಸಿಕ್ಯಾಬ ಸಂಸ್ಥೆಯ ಸಂಸ್ಕೃತ ಪ್ರಾಧ್ಯಾಪಕ ಡಾ. ಶ್ರೀಕೃಷ್ಣ ಕಾಖಂಡಕಿ ಹಾಗೂ ಜಿ.ಆರ್. ಅಂಬಲಿ ಉಪನ್ಯಾಸ ನೀಡಿದರು. ಜಿಪಂ ಮಾಜಿ ಸದಸ್ಯ ಗುರನಗೌಡ ಪಾಟೀಲ, ಅಶೋಕ ಜಿದ್ದಿ, ವಿ.ಡಿ. ವಸದ, ಕಂಠೀರವ ಕುಲ್ಲಳ್ಳಿ, ಆರ್.ಎಸ್. ವಾಡೇದ, ಕೆ.ಆರ್. ನಾಗೋಡ, ಕೆ.ಆರ್. ಜಾಧವ, ದೀಪಕ ಸಾಳುಂಕೆ, ಎಚ್.ಎಸ್. ಮುಳವಾಡ, ಡಿ.ಕೆ. ನಾಗೋಡ, ಎ.ಎಂ. ಬಗಲಿ, ಎಂ.ಎನ್. ಕಣಮೇಶ್ವರ, ಎಸ್.ಪಿ. ಬಿರಾದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts