More

    ಸಮಾಜ ಸುಧಾರಕ ಸಂತ ಸೇವಾಲಾಲ


    ವಿಜಯಪುರ : ಮಾನವೀಯ ಮೌಲ್ಯಗಳನ್ನು ಸಾರಿದ ಸಮಾಜ ಸುಧಾರಕ ಮಹಾನ್ ಸಂತ ಸೇವಾಲಾಲ ಮಹಾರಾಜರು. ಅವರ ಕೊಡುಗೆ ಅಪಾರ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಸುಭಾಷ್ ನಾಯಕ ಹೇಳಿದರು.

    ನಗರದ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ ಮಹಾರಾಜ ಅವರ 282ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಹಿಂದುಳಿದ ಬಂಜಾರ ಸಮಾಜದಲ್ಲಿ ಜನಿಸಿದ ಸೇವಾಲಾಲರು ದೇವಿಯ ಆರಾಧನೆ ಮೂಲಕ ಆತ್ಮಜ್ಞಾನ ಪಡೆದು ಸಮಾಜದ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದವರು. ಅಂತಹ ಮಹಾನ್ ಪುರುಷರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದರೆ ಮಾನವ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

    ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ನಗರ ಅಧ್ಯಕ್ಷ ವಿನೋದ ಕೋಟ್ಯಾಳ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಹಲವು ಸಂತ-ಮಹಾಂತರು ಜನಿಸಿ ಧಾರ್ಮಿಕ, ಆಧ್ಮಾತಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಂಪರೆ ಬೆಳಗಿದ್ದಾರೆ. ಅಂತಹ ಸಂತ ಪರಂಪರೆಯ ಸಾಲಿನಲ್ಲಿ ನಿಲ್ಲುವ ದಿವ್ಯ ವ್ಯಕ್ತಿತ್ವ ಹೊಂದಿದವರಲ್ಲಿ ಸಂತ ಸೇವಾಲಾಲ ಮಹಾರಾಜರು ಒಬ್ಬರಾಗಿದ್ದಾರೆ. ಅವರ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

    ಮುಖಂಡರಾದ ವೆಂಕಟೇಶ ಜಾಧವ, ಶಿವಾನಂದ ಹಿರೇಕುರಬರ, ಮನೋಜ ಬಿರಾದಾರ, ಸುನೀಲ ರಾಠೋಡ, ಸಾಜಿದ ರಿಸಾಲದಾರ, ಇಜಾಜ ಮುಕಬಿಲ್, ಮಹಮ್ಮದಹುಸೇನ ಬಾಗಾಯತ, ಹಾಸಿಂಪೀರ ಸೌದಾಗರ, ಜಯಕಾಂತ ವಾಗಮೊರೆ, ಆದಿ ಗೊಡಕೆ, ಸುರೇಶ ಚಲವಾದಿ ಮತ್ತಿತರರಿದ್ದರು.

    ಲಂಬಾಣಿಗರ ಆರಾಧ್ಯ ದೈವ
    ಶ್ರೀ ಸಂತ ಸೇವಾಲಾಲ ಮಹಾರಾಜರು ಲಂಬಾಣಿಗರ ಆರಾಧ್ಯ ದೈವ, ಅವರು ಸಮಾಜದ ಒಳಿತಿಗಾಗಿ ಅನೇಕ ಪವಾಡಗಳನ್ನು ಮಾಡುವ ಮೂಲಕ ಗಮನ ಸೆಳೆದಿರುವುದು ಶ್ಲಾಘನೀಯ ಎಂದು ಕರವೇ ಜಿಲ್ಲಾಧ್ಯಕ್ಷ ಶೇಷರಾವ್ ಮಾನೆ ಹೇಳಿದರು.

    ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ನವ ನಿರ್ಮಾಣ ವೇದಿಕೆ ಹಾಗೂ ರಿಪಬ್ಲಿಕ್ ಸೇನಾ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ 282ನೇ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಅಪ್ಪಟ ಮಾನವತಾವಾದಿ. ಸಂಘಟನಾ ಚತುರ. ಸಮಾಜ ಸುಧಾರಕ. ಲಂಬಾಣಿ ಜನಾಂಗದ ಆರಾಧ್ಯ ದೈವ ಸೇವಾಲಾಲರ ಜಯಂತಿಯನ್ನು ಆಚರಿಸುತ್ತಿರುವುದು ಖುಷಿ ಎನಿಸಿದೆ. ಮಹಾನ್ ನಾಯಕರ ಜಯಂತಿ, ಉತ್ಸವಗಳನ್ನು ಸರ್ಕಾರಗಳು ತಪ್ಪದೆ ಆಚರಿಸುವಂತಾಗಬೇಕು ಎಂದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ರಿಪಬ್ಲಿಕನ್ ಸೇನಾ ಜಿಲ್ಲಾಧ್ಯಕ್ಷ ಲಕ್ಷ್ಮ್ಮಣ ದೇವಾಪುರ, ಎಸ್.ಪಿ. ಕಡ್ಲೇವಾಡ, ಮುಖಂಡರಾದ ಬಾಸು ರಾಠೋಡ, ಶಂಕರ ರಾಠೋಡ, ರಾಜಕುಮಾರ ವಾಗ್ಮೋರೆ, ಬಾಬು ರಾಠೋಡ, ಸಂಗಪ್ಪ ವಡ್ಡರ, ಗೋಪಾಲ ಮೇಲಗಡೆ, ಕೆ.ಎನ್. ಹಿರೇಮಠ, ಲಕ್ಷ್ಮ್ಮಣ ಸಿದ್ದಪ್ಪ, ನದೀಮ ಇನಾಮದಾರ, ವಸಂತ ಕುಲಕರ್ಣಿ, ಸಾಹೇಬಲಾಲ ದಳವಾಯಿ, ಮಾಧುರಿ ರಾಠೋಡ, ಕೃಷ್ಣಾಜಿ ಕುಲಕರ್ಣಿ, ಸಿ.ಜಿ. ಜಂಬಗಿ, ಬಾಬು ಲಮಾಣಿ ಇತರರಿದ್ದರು.

    ಕಾಂಗ್ರೆಸ್‌ನಿಂದ ಆಚರಣೆ
    ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೇವಾಲಾಲರ ಜಯಂತಿ ಆಚರಿಸಲಾಯಿತು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ವಿಜಯಪುರ ನಗರ ಬ್ಲಾಕ್ ಅಧ್ಯಕ್ಷ ಜಮೀರ ಅಹ್ಮದ ಬಕ್ಷೀ, ಜಲನಗರ ಬ್ಲಾಕ್ ಅಧ್ಯಕ್ಷೆ ಆರತಿ ಶಹಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬ್ಬೀರ ಜಾಗೀರದಾರ, ವಸಂತ ಹೊನಮೊಡೆ, ಭಗವಂತ ನಾಯಕ, ಧನಸಿಂಗ ರಾಠೋಡ, ಜಯಶ್ರೀ ಭಾರತೆ, ಶಮೀಮ ಅಕ್ಕಲಕೋಟ, ಮಹಾದೇವ ಜಾಧವ, ದಾವಲಸಾಬ ಬಾಗವಾನ, ದೇವರಾಜ ರಾಠೋಡ, ತುಕಾರಾಮ ಜಾಧವ, ಸಂಜೀವ ರಾಠೋಡ, ಗೋಪಾಲ ರಾಠೋಡ, ರಾಜೀವ ರಾಠೋಡ, ಯುವರಾಜ ರಾಠೋಡ, ಸರಿತಾ ನಾಯಕ, ಸುನೀಲ ರಾಠೋಡ, ವಿಜಯ ರಾಠೋಡ, ಅರುಣ ನಾಯಕ, ಮಹಾಂತೇಶ ಲಮಾಣಿ, ಗಗನ ಲಮಾಣಿ, ವಿನೋದ ರಾಠೋಡ, ಅಪ್ಪು ರಾಠೋಡ, ಶಿವಾಜಿ ರಾಠೋಡ, ಅರುಣ ಜಾಧವ ಇತರರಿದ್ದರು.

    ಜಿಲ್ಲಾಡಳಿತದಿಂದ ಪುಷ್ಪ ನಮನ
    ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಸಂತ ಸೇವಾಲಾಲರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

    ಕೋವಿಡ್ ಹಿನ್ನೆಲೆ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಈರಪ್ಪ ಆಶಾಪುರ, ನ್ಯಾಯವಾದಿ ವಿದ್ಯಾವತಿ ಅಂಕಲಗಿ, ಮುಖಂಡರಾದ ರಾಜಪಾಲ್ ಚವ್ಹಾಣ, ರಾಮು ಹೊಸಪೇಟೆ, ಸೋಮನಗೌಡ ಕಲ್ಲೂರ, ಉಮೇಶ ರಾಠೋಡ ಹಾಗೂ ಸಮಾಜ ಮುಖಂಡರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts