More

    ಸದೃಢ ರಾಷ್ಟ್ರ ನಿರ್ಮಾಣ ಅಗತ್ಯ

    ವಿಜಯಪುರ: ಇಂದಿನ ಸರ್ಕಾರದ ದುರಾಡಳಿತ ಮತ್ತು ಏಕಚಕ್ರಾಧಿಪತ್ಯ ಆಡಳಿತವನ್ನು ಕೊನೆಗಾಣಿಸಲು ಯುವ ಜನತೆ ಮೇಲೆ ಮಹತ್ತರ ಜವಾಬ್ದಾರಿ ಇದೆ. ಅದಕ್ಕಾಗಿ ಸಂಘಟನಾತ್ಮಕವಾಗಿ ಹೋರಾಟ ಮಾಡುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.

    ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಯಪ್ರಕಾಶ ನಾರಾಯಣರ 118ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಜಯಪ್ರಕಾಶ ನಾರಾಯಣ ಅವರ ಸಾಧನೆಗಳು ಹಾಗೂ ಹೋರಾಟ ಎಲ್ಲರಿಗೂ ಮಾದರಿ ಆಗಬೇಕಿದೆ. ಜೆಪಿ ಕ್ರಾಂತಿ ಮೂಲಕ ದೇಶಕ್ಕೆ ಮಾದರಿಯಾಗಿದ್ದರು.ಇಂದಿನ ದಿನಗಳಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ವಾತಾವರಣ ರೂಪಗೊಂಡಿದ್ದು, ಅದಕ್ಕಾಗಿ ಲೋಕನಾಯಕ ಜಯಪ್ರಕಾಶ ನಾರಾಯಣ ಅವರಂತೆ ಮತ್ತೊಮ್ಮೆ ಕ್ರಾಂತಿ ಮೂಲಕ ದೇಶದ ಜನರನ್ನು ಜಾಗೃತಗೊಳಿಸಬೇಕಿದೆ ಎಂದರು.

    ಅಂದು ಜಯಪ್ರಕಾಶ ನಾರಾಯಣ ಅವರು ಸರ್ವಾಧಿಕಾರತ್ವವನ್ನು ಮಟ್ಟಹಾಕಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದ್ದರು. ಈಗ ಮತ್ತೊಮ್ಮೆ ದೇಶದಲ್ಲಿ ಜೆ.ಪಿ.ಮಾದರಿ ಚಳವಳಿ ಅವಶ್ಯಕವಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳು ಒಂದಾಗಿ ಮತ್ತೊಮ್ಮೆ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕಿದೆ ಎಂದು ತಿಳಿಸಿದರು.

    ಜೆಡಿಎಸ್ ಮುಖಂಡರಾದ ರಿಯಾಜ ಾರೂಕಿ, ದಿಲಾವರ ಖಾಜಿ, ಕೌಸರ ಶೇಖ, ಹುಸೇನ್ ಬಾಗಾಯತ, ಇಜಾಜ್ ಮುಕ್ಬಿಲ್, ರಾಜು ರಜಪೂತ, ಸುಭಾಷ ನಾಯಕ, ಸಾಹೇಬಹುಸೇನ ರಿಸಾಲ್ದಾರ, ಅಪ್ಪಾಸಾಬ ಯರನಾಳ, ಸ್ನೇಹಾ ಶೆಟ್ಟಿ, ಶಾಮನ ಇನಾಮದಾರ, ಎಸ್.ಎಸ್.ಖಾದ್ರಿ ಇನಾಮದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts