More

    ಕೃಷಿ ಕ್ಷೇತ್ರ ಇನ್ನಷ್ಟು ಬಲಗೊಳ್ಳಲಿ

    ವಿಜಯಪುರ: ಆಧುನಿಕ ಯುಗದಲ್ಲಿ ಕೃಷಿ ಕ್ಷೇತ್ರವನ್ನು ಬಲಗೊಳಿಸಿ ರಾಷ್ಟ್ರದ ಬೆನ್ನೆಲುಬು ರೈತರ ಜೀವನಮಟ್ಟ ಎತ್ತರಿಸುವ ಕಾರ್ಯವಾಗಬೇಕೆಂದು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಎಚ್.ಆರ್.ಬಿರಾದಾರ ಹೇಳಿದರು.

    ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯ ಹಾಗೂ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಬುಧವಾರ ನಡೆದ ಸುಧಾರಿತ ಕಬ್ಬು ಬೇಸಾಯ ಕ್ರಮಗಳು ಕುರಿತ ವಿಚಾರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಬಿ.ದೊಡಮನಿ, ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

    ಕೃಷಿ ವಿಜ್ಞಾನಿ ಡಾ.ಎಸ್.ಎಂ.ವಸದ ಸಸ್ಯಗಳಿಗೆ ತಗಲುವ ರೋಗ ರುಜಿನಗಳ ಬಗ್ಗೆ ಪರಿಹಾರೋಪಾಯಗಳ ಕುರಿತು ಮಾತನಾಡಿದರು. ಡಾ.ಬಿ.ಟಿ. ನಾಡಗೌಡ ಅವರು ಕಬ್ಬು ಲಾವಣಿ ಹಾಗೂ ಅಭಿವೃದ್ಧಿಪಡಿಸುವ ವಿಧಾನಗಳನ್ನು ರೈತರಿಗೆ ಹೇಳಿದರು.

    ಕಾರ್ಖಾನೆ ನಿರ್ದೇಶಕ ಜಿ.ಕೆ.ಕೋನಪ್ಪನ್ನವರ, ಮಾಜಿ ನಿರ್ದೇಶಕ ಐ.ಜಿ.ಪುರಾಣಿಕಮಠ, ಪ್ರಗತಿಪರ ರೈತರಾದ ವೆಂಕನಗೌಡ ಪಾಟೀಲ, ಪಾಂಡು ತುಂಗಳ, ಕಬ್ಬು ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗದ ನಿರ್ದೇಶಕ ಪಿ.ಎಸ್.ಬಿರಾದಾರ, ಆತ್ಮ ಯೋಜನೆಯ ಉಪನಿರ್ದೇಶಕ ಡಾ.ಎಂ.ಜಿ.ಪಟ್ಟಣಶೆಟ್ಟಿ, ಕಬ್ಬು ಅಭಿವೃದ್ಧಿ ಮುಖ್ಯ ಅಧಿಕಾರಿ ಎಂ. ಎಲ್. ಪಚ್ಚನ್ನವರ , ಮಲ್ಲಿಕಾರ್ಜುನ ಶಿರೋಳ, ಮುರಳಿಧರ ಜಾಲಪ್ಪನವರ ಹಾಗೂ ಚಿಕ್ಕಗಲಗಲಿ, ಗಲಗಲಿ, ಯಡಹಳ್ಳಿ, ಕಣಬೂರ, ಶಿರಬೂರ, ಹೊಸೂರ, ಜಂಬಗಿ(ಎಚ್), ಸುತಗುಂಡಿ, ದೇವಾಪೂರ, ಲಿಂಗನೂರ, ಬಬಲಾದಿ, ದೇವರಗೆಣ್ಣೂರ, ಬಿದರಿ, ಕೆಂಗಲಗುತ್ತಿ ಗ್ರಾಮಗಳ ರೈತರು ಭಾಗವಹಿಸಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts