More

    ಮೊದಲ ದಿನವೇ ಕಳೆಗುಂದಿದ ಕೃಷಿ ಮೇಳ !

    ಹೀರಾನಾಯ್ಕ ಟಿ. ವಿಜಯಪುರ
    ನಿರೀಕ್ಷಿತ ಮಟ್ಟದಲ್ಲಿ ಜನರು ಆಗಮಿಸದೆ ಇರುವುದರಿಂದ ಮೊದಲ ದಿನದಂದು ಕೃಷಿ ಮೇಳ ಕಳೆಗುಂದಿತ್ತು…!
    ಕೃಷಿ ಮಹಾವಿದ್ಯಾಲಯದಲ್ಲಿ ಶನಿವಾರದಿಂದ ಮೂರು ದಿನ ನಡೆಯುತ್ತಿರುವ ಕೃಷಿ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸದೆ ಇರುವುದರಿಂದ ಮೊದಲ ದಿನ ನಡೆದ ಜಾನುವಾರು ಪ್ರದರ್ಶನಕ್ಕೆ ಕಳೆ ಬರಲಿಲ್ಲ. ಜೆರ್ಸಿ, ಕಿಲಾರಿ, ಕಾಂಕ್ರೆಟ್, ದೇವಣಿ ಆಕಳು, ಮುರ‌್ರಾ ಎಮ್ಮೆ ಹಾಗೂ ಗಿರ್ ತಳಿಯ ಜಾನುವಾರುಗಳು ಪ್ರದರ್ಶನದಲ್ಲಿದ್ದವು.

    ಕಮರ್ಷಿಯಲ್ ಮಳಿಗೆಗಳೇ ಹೆಚ್ಚು

    ಕೃಷಿ ಮೇಳದಲ್ಲಿ ರೈತರಿಗೆ ಉಪಯೋಗವಾಗುವ ಮಾಹಿತಿ, ಉಪಕರಣ, ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡುವ ಮಳಿಗೆಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. ಒಟ್ಟು 130 ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಕಮರ್ಷಿಯಲ್ ಮಳಿಗೆಗಳೇ ಹೆಚ್ಚಾಗಿದ್ದವು. ಕೆಲ ಮಳಿಗೆಗಳಲ್ಲಿ ರೈತರಿಗೆ ಉಪಯೋಗವಾಗುವ ಸಾವಯವ ಕೃಷಿ ಸಂಬಂಧಿಸಿದ, ಕೃಷಿ ಉಪಕರಣಗಳ ವಸ್ತು ಪ್ರದರ್ಶನ ಬಿಟ್ಟರೆ ಉಳಿದೆಲ್ಲ ತಿಂಡಿ, ತಿನಿಸು, ಬಟ್ಟೆ ಮಳಿಗೆ, ಮನೆ ಉಪಕರಣಗಳ ಮಾರಾಟಗಳಿಗೆ ಅವಕಾಶ ಕಲ್ಪಿಸಿದ್ದೇ ಹೆಚ್ಚಾಗಿತ್ತು.

    ಫಲ ಪುಷ್ಪ, ಮತ್ಸೃ ಮೇಳಕ್ಕೆ ಸೀಮಿತ

    ಕೃಷಿ ಮೇಳ ವೀಕ್ಷಣೆಗೆ ಆಗಮಿಸಿದ್ದ ಜನರು ಕೇವಲ ಲ ಪುಷ್ಪ ಹಾಗೂ ಮತ್ಸೃ ಮೇಳ ವೀಕ್ಷಣೆಗಷ್ಟೇ ಸೀಮಿತಗೊಂಡಿದ್ದರು. ಲ ಪುಷ್ಪ ಪ್ರದರ್ಶನ, ತರಹೇವಾರಿ ತರಕಾರಿಗಳು, ಔಷಧ ಸಸ್ಯಗಳನ್ನು ಪ್ರದರ್ಶನದಲ್ಲಿಡಲಾಗಿತ್ತು.
    ಹೂವುಗಳಲ್ಲಿ ರೆಡ್ ಜಿಂಜರ್, ಲಿಲ್ಲಿ, ಲಿಮೊನಿಯಂ, ಸ್ವರ್ಗದ ಹಕ್ಕಿ ಹೂ, ಸೇವಂತಿ, ಜಿಪ್ಸೊಫಿಲಾ, ಗುಲಾಬಿ (ಸ್ಟಾರ್), ಗುಲಾಬಿ (ಬಾಂಕ್ವೆಟ್), ಗುಲಾಬಿ (ಕಾಪೆಟಿ), ಗುಲಾಬಿ (ಪೀಚ್), ಸುಗಂಧ ರಾಜ, ಕಾರ್ನೆಶನ್, ಗೋಲ್ಡನ್ ರಾಡ್, ನೀಲಿ ಡೈಸಿ, ಪ್ಲಾವರಿಂಗ್ ಕ್ಯಾಬೇಜ್, ಕಾಲಾಲಿಲ್ಲಿ, ಗ್ಲ್ಯಾಡಿಯೋಲಸ್, ಕುಫಿಯಾ, ಜರ್ಬೆರಾ, ಡ್ರಾಸೆನಾ, ಆರ್ಕಿಡ್ (ಸೀತಾಳೆ), ಮೊರಿಮೊನೊ, ಇಕಾಬನಾ, ಸಾಂಗ್ ಆ್ ಜಮೈಕಾ, ಡೈಸಿ, ಹೆಲಿಕೊನಿಯಾ ವಿವಿಧ ತಳಿಯ ಪುಷ್ಪಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

    ತರಹೇವಾರಿ ಹಣ್ಣು, ತರಕಾರಿ ಪ್ರದರ್ಶನ

    ಅನಾನಸ್, ಹಾರ್ಡ್ ಪಿಯರ್, ರಾಮಫಲ, ಚಕ್ಕೊತ್ತಾ, ಸೀತಾಫಲ, ಬಿಲ್ವಪತ್ರೆ, ಮರ ಸೇಬು, ಬೆಣ್ಣೆ ಹಣ್ಣು, ಮಾವು, ದಾಳಿಂಬೆ, ಸಿಹಿ ಚೆರ‌್ರಿ, ಥಾಯ್ ಸಿಬೆ, ಹಲಸು, ಪಪ್ಪಾಯ, ಕಿವಿ ಹಣ್ಣು, ಮಿಶ್ರೀ ಸೇಬು, ಹಸಿರು ಸೇಬು, ಅಂಜೂರ, ಡ್ರ್ಯಾಗನ್ ಫ್ರೂಟ್ ಪ್ಲಮ್, ಕೋರಿಯನ್ ಪಿಯರ್, ಸೋರಸುಪ್, ಬ್ಲೂ ಚೆರ‌್ರಿ, ಸ್ಟಾರ್ ಫ್ರೂಟ್ಸ್, ದ್ರಾಕ್ಷಿ (ಥಾಮ್ಸನ್ ಸೀಡ್‌ಲೆಸ್), ದ್ರಾಕ್ಷಿ (ರೆಡ್‌ಗ್ಲೋಬ್), ದ್ರಾಕ್ಷಿ (ಶರದ್ ಸೀಡ್‌ಲೆಸ್), ದ್ರಾಕ್ಷಿ (ಆನಬ್‌ಇ ಶಾಹಿ), ನಿಂಬೆ ಹಣ್ಣು, ಗೋಲ್ಡನ್ ಪಿಯರ್ (ಮರಸೇಬು), ಬಾಳೆಹಣ್ಣು ಪ್ರದರ್ಶನಕ್ಕಿಡಲಾಗಿತ್ತು.
    ಸಿಹಿ ಹುಣಸೆ, ಹತ್ತರಕಿ ಎಲೆ, ಕೆಂಪು ಎಲೆಕೋಸು, ಗೊಂಡೆ ಈರುಳ್ಳಿ, ಆಜ್ಮೋದ, ಪಾರಸ್ಲಿ, ಪಾಚೋಯಿ, ಕೋಸುಗಡ್ಡೆ, ಹಳದಿ ಡೊಣ್ಣ ಮೆಣಸಿನಕಾಯಿ, ಕೆಂಪು ಡೊಣ್ಣ ಮೆಣಸಿನಕಾಯಿ, ಕಂದರಿ ಮೆಣಸಿನಕಾಯಿ, ಚೀನಾ ಎಲೆಕೋಸು, ಸಮರ್‌ಸ್ಕ್ವಾಶ್, ಬೀಟ್‌ರೂಟ್, ಮರಗೆಣಸು, ಬದನೆ, ಹಸಿ ಮೆಣಸಿನಕಾಯಿ, ಉದ್ದನೆ ಹುರಳೆ, ಶತಾವರಿ, ಬೇಬಿ ಆಲುಗಡ್ಡೆ, ಸೀಮೆ ಬದನೆಕಾಯಿ, ಟಿಂಡಾ, ಸೋರೆಕಾಯಿ, ಸೌತೆಕಾಯಿ, ಆರ್ವಿ, ಮುಳ್ಳು ಗೆಣಸು, ಗುಲಾಬಿ ಮೂಲಂಗಿ, ನವಿಲು ಕೋಸು, ಬೆಳ್ಳುಳ್ಳಿ, ಈರುಳ್ಳಿ, ಕರಜೂರ, ಸೊರೆಕಾಯಿ, ತೊಂಡೆಕಾಯಿ, ಪಡವಲಕಾಯಿ ಗಮನ ಸೆಳೆದವು.

    ಗಮನ ಸೆಳೆದ ಔಷಧ ಸಸ್ಯಗಳು

    ಗುಲಗಂಜಿ, ಮಾಕಂದಿ ಬೇರು, ಮರುಗ, ಡೇರೆ, ಲಾವಂಚ ಬೇರು, ಅಮೃತಬಳ್ಳಿ, ರಂಗಮಾಲೆ, ಪುದಿನಾ, ಬೇರುಗಡ್ಡೆ, ಅಶ್ವಗಂಧ, ಒಂದೆಲಗ, ಚಕ್ರಮುನಿ, ದೊಡ್ಡಪತ್ರೆ, ಪಚ್ಚೆ ತೆನೆ, ಮುಂಗರವಲ್ಲಿ, ಕಾಡು ಬಸಳೆ, ನಂದಿ ಬಟ್ಟಲು, ಮದರಂಗಿ, ಬಸಳೆ, ಬಜೆ, ಆಡುಸೋಗೆ, ತುಳಸಿ, ಅರೆಬಿಯನ್ ಮಲ್ಲಿಗೆ, ಸ್ಟಿವಿಯಾ, ನಿಂಬೆ ಹುಲ್ಲು, ಶ್ರೀಗಂಧ, ಹಿಪ್ಪಲ್ಲಿ, ದಾಸವಾಳ, ಲೋಳೆರಸ, ಕರಿಬೇವು, ಫುಲ್ಚರಿಯಾದಂತಹ ಔಷಧ ಸಸ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

    ಮತ್ಸ್ಯ ಲೋಕ ಅನಾವರಣ

    ಕೃಷಿ ಮೇಳದಲ್ಲಿ ಮತ್ಸೃ ಪ್ರದರ್ಶನ ಗಮನ ಸೆಳೆಯಿತು. ಸಕ್ಕರೆ ಮೀನು, ಎಂಜೆಲ್ ಮೀನು, ಗೆಂಡೆ, ತಿಲಾಪಿಯಾ, ಗೊಲ್ಡನ್‌ಫಿಶ್, ನೀಲಿ ಗೌರಮಿ, ಕಪ್ಪು ಮೊಲ್ಲಿ, ಟೈಗರ್ ಫಿಶ್, ಎಸ್.ಕೆ.ಗೋಲ್ಡ್, ಬ್ಲಾಕ್‌ಮೋರ್, ರೆಡ್ ಕ್ಯಾಪ್, ಮಿಲ್ಕಿ ಕೋಯಿ ತಳಿಯ ಮೀನುಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

    ಕಲ್ಲಂಗಡಿಯಲ್ಲಿ ಅರಳಿದ ಶ್ರೀಗಳು !

    ಪೇಜಾವರ ಶ್ರೀಗಳು, ಸಿದ್ಧಗಂಗಾ ಶ್ರೀಗಳ ಕಲಾಕೃತಿ ಕಲ್ಲಂಗಡಿ ಹಣ್ಣಿನಲ್ಲಿ ಅರಳಿದ್ದು ವಿಶೇಷವಾಗಿತ್ತು. ವಿಶ್ವವಿಖ್ಯಾತ ಗೋಳಗುಮ್ಮಟ, ಮಹಾತ್ಮ ಗಾಂಧೀಜಿ ಅಲ್ಲದೆ ವಿವಿಧ ತರಕಾರಿಯಲ್ಲಿ ಬಾತುಕೋಳಿ, ಡೈನೋಸಾರ್, ನಾಟಿಕೋಳಿ, ಹುಂಜ, ಮೀನು, ನವಿಲು, ಮೊಸಳೆ, ಮೂಡಿ ಬಂದಿದ್ದು ವೀಕ್ಷಕರ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts