More

    ಲಿಂಗ ತಾರತಮ್ಯ ಅಳಿಸುವಲ್ಲಿ ವೈದ್ಯರ ಪಾತ್ರ ಪ್ರಮುಖ

    ವಿಜಯಪುರ: ಉತ್ತಮ ಸಮಾಜ ನಿರ್ಮಾಣದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರ ಪಾತ್ರವೂ ಸಮನಾಗಿದೆ. ಈ ನಿಟ್ಟಿನಲ್ಲಿ ಲಿಂಗ ತಾರತಮ್ಯ ಮಾಡುವ ಜನರ ಮನೋಭಾವವನ್ನು ಬದಲಾಯಿಸುವಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಬಿಬಿಬಿಪಿ ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿ ಸದಸ್ಯ ನ್ಯಾಯಾಧೀಶ ರವೀಂದ್ರ ಕಾರಬಾರಿ ಹೇಳಿದರು.
    ಜಿಲ್ಲಾ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಜಿಪಂ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ಪಿಸಿ ಮತ್ತು ಪಿಎನ್‌ಡಿಟಿ ಅಡಿಯಲ್ಲಿ ನೋಂದಾಯಿತ ಸಂಸ್ಥೆಯ ತಜ್ಞವೈದ್ಯರಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
    ಲಿಂಗಪತ್ಯೆ ನಿಷೇಧ ಕಾಯ್ದೆ 1994ರಲ್ಲಿ ಅದನ್ನು 2003ರಲ್ಲಿ ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದ್ದು, ಈ ಕಾಯ್ದೆಯಡಿ ಲಿಂಗಪತ್ತೆ ಮಾಡುವವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದರು.
    ದೇಶದಲ್ಲಿ ಬಡತನ, ಮೂಢನಂಬಿಕೆ, ಗಂಡು ಮಗುವಿನ ಅಪೇಕ್ಷೆಯ ಕಾರಣದಿಂದಾಗಿ ಲಿಂಗ ಜನ್ಯ ವ್ಯತ್ಯಾಸ ಕಂಡು ಬಂದಿದೆ. 2011ರ ಜನಗಣತಿಯ ಪ್ರಕಾರ ಜಿಲ್ಲೆಯ ಲಿಂಗಾನುಪಾತ 934 ರಷ್ಟು ಇದೆ, ಲಿಂಗ ಸಮಾನತೆ ತರುವ ದೃಷ್ಠಿಯಿಂದ ಕೇಂದ್ರ ಸರ್ಕಾರವು 2015 ರಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಅನುಷ್ಟಾನ ಮಾಡಿದೆ. ವೈದ್ಯರು ದೇವರ ಸಮಾನ, ಲಿಂಗ ಪತ್ತೆಯನ್ನು ನಿರಾಕರಿಸಿ ಹೆಣ್ನು ಮಕ್ಕಳನ್ನು ಉಳಿಸಬೇಕು ಎಂದು ಅವರು ಹೇಳಿದರು.
    ರಾಷ್ಟ್ರ ಮಟ್ಟದಲ್ಲಿ ಸಾವಿರ ಪುರುಷರಿಗೆ 925 ಮಹಿಳೆಯರಿದ್ದು, ಲಿಂಗ ಅಸಮಾನತೆಯಿಂದ ಅತ್ಯಾಚಾರದಂತಹ ಪ್ರಕರಣಗಳು ನಡೆದು ಸಮಾಜದ ಸ್ವಾಸ್ಥೃ ಹದಗೆಡುತ್ತಿದೆ. ಹಾಗಾಗಿ ಜನರ ಮನೋಭಾವ ಬದಲಾಗಬೇಕು, ಹೆಣ್ಣು ಗಂಡೆಂಬ ಬೇಧ ಭಾವ ಮಾಡದೆ, ಹೆಣ್ಣು ಮಗುವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರದಾಗಿದೆ ಎಂದು ಹೇಳಿದರು.
    ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಮಹೇಂದ್ರ ಕಾಪಸೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನೂನು ಸಲಹೆಗಾರ್ತಿ ಅಖೀಲಾ, ಡಾ. ರಾಮಚಂದ್ರ ಬೈರಿ, ತುಳಸಿರಾಮ ಸೂರ್ಯವಂಶಿ, ಡಾ. ರಾಜೇಶ್ವರಿ ಎನ್.ಗೊಲಗೇರಿ, ಸಾಮಾಜಿಕ ಕಾರ್ಯಕರ್ತ ಪೀಟರ್ ಅಲೆಕ್ಸಾಂಡರ್, ಚಿಕ್ಕ ಮಕ್ಕಳ ತಜ್ಞ ಡಾ.ಎಲ್.ಎಚ್ ಬಿದರಿ ಮತ್ತಿತರರಿದ್ದರು. ಸವಿತಾ ಅಳ್ಳಗಿ ಪ್ರಾರ್ಥಿಸಿದರು. ಸುರೇಶ ಹೊಸಮನಿ ಸ್ವಾಗತಿಸಿ, ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts