More

    87 ಲಕ್ಷ ರೂ. ದಂಡ ವಸೂಲಿ

    ವಿಜಯಪುರ: ಜಿಲ್ಲೆಯಲ್ಲಿ 2016 ರಿಂದ ಈವರೆಗೆ ಬಿಪಿಎಲ್ ಕಾರ್ಡ್ ಹೊಂದಿದ ಒಟ್ಟು 1,121 ಸರ್ಕಾರಿ ನೌಕರರರ ಮೇಲೆ ಕ್ರಮ ಕೈಗೊಂಡು, 87 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ ಹೇಳಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧ್ಯಕ್ಷತೆಯಲ್ಲಿ ಗುರುವಾರ ಹಮ್ಮಿಕೊಂಡ ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಗಳ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
    2019-20ನೇ ಸಾಲಿನಲ್ಲಿ 6,700 ಬಿಪಿಎಲ್ ಕಾರ್ಡ್ ಪಡೆದ ಅನರ್ಹರರನ್ನು ಪತ್ತೆ ಹಚ್ಚಿ 55 ಸಾವಿರ ರೂ. ದಂಡ ವಿಧಿಸಲಾಗಿದ್ದು, 5,500 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆ ಮಾಡಲಾಗಿದೆ ಎಂದು ತಿಳಿಸಿದರು.
    ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಅನರ್ಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವ ಕೆಲಸ ಇನ್ನಷ್ಟು ಚುರುಕುಗೊಳಿಸಬೇಕು ಎಂದು ಸೂಚಿಸಿದರು.
    ಸರ್ಕಾರದ ಆದೇಶದನ್ವಯ ಪಡಿತರ ಚೀಟಿದಾರರು ಸಂಬಂಧಿಸಿದ ಆಯಾ ನ್ಯಾಯ ಬೆಲೆ ಅಂಗಡಿಗೆ ಕುಟುಂಬದ ಎಲ್ಲ ಸದಸ್ಯರೊಂದಿಗೆ ಬಯೋಮೆಟ್ರಿಕ್ ನೀಡಿ, ಇ-ಕೆವೈಸಿ ಮಾಡಿಸಲು ಸೂಚಿಸಿದ್ದು, ಈವರೆಗೆ ಕೇವಲ 2,90,646 ಪಡಿತರ ಚೀಟಿದಾರರು ಕೆವೈಸಿ ಮಾಡಿದ್ದು, ಬರುವ ಮಾರ್ಚ್ 31ರ ವರೆಗೆ ಎಲ್ಲರೂ ಬಯೋಮೆಟ್ರಿಕ್ ನೀಡಬೇಕು. ಈ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದರು.

    ಕೆಲವೊಂದು ಪಡಿತರ ಚೀಟಿದಾರರು ಅಕ್ಕಿಯನ್ನು ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಅಂತಹ ಅಕ್ಕಿ ಮಾರಾಟ ಮಾಡುವವರ ಬಗ್ಗೆ ಪತ್ತೆ ಹಚ್ಚಬೇಕು. ಅಂತಹ ಪಡಿತರ ಚೀಟಿದಾರರ ವಿರುದ್ಧ ಪ್ರಕರಣ ದಾಖಲಿಸುವ ಜತೆಗೆ ಪಡಿತರ ಚೀಟಿ ರದ್ದು ಪಡಿಸಲು ಮತ್ತು ಕಾನೂನು ರೀತಿ ಕ್ರಮ ಕೈಗೊಳ್ಳಲು ಸೂಚಿಸಿದರು. ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

    87 ಲಕ್ಷ ರೂ. ದಂಡ ವಸೂಲಿ
    87 ಲಕ್ಷ ರೂ. ದಂಡ ವಸೂಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts