More

    ಬೇಡಿಕೆ ಈಡೇರಿದಿದ್ದರೆ ಆಮರಣಾಂತ ಉಪವಾಸ

    ವಿಜಯಪುರ: ಪಿಂಚಣಿ ಸೌಲಭ್ಯಕ್ಕೆ ಆಗ್ರಹಿಸಿ ಅನುದಾನಿತ ಶಾಲೆ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ಪ್ರಧಾನ ಸಂಚಾಲಕ ಎಲ್.ಎಸ್. ಕಿರನಳ್ಳಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಪಿಂಚಣಿ ಸೌಲಭ್ಯಕ್ಕಾಗಿ ಹೋರಾಟ ನಡೆಸುತ್ತ ಬಂದಿದ್ದು, ಈವರೆಗೂ ಸರ್ಕಾರ ಬೇಡಿಕೆ ಈಡೇರಿಸಿಲ್ಲ. ಸರ್ಕಾರಿ ಮತ್ತು ಅನುದಾನಿತ ನೌಕರರ ಮಧ್ಯೆ ಯಾವುದೇ ತಾರತಮ್ಯ ಇರಕೂಡದು. ಈ ತಾರತಮ್ಯ ಹೋಗಲಾಡಿಸಿ 2020 ಜ. 4 ರೊಳಗಾಗಿ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

    ಜಿಲ್ಲಾಧ್ಯಕ್ಷ ಬಿ.ಎಸ್. ಹಿರೇಮಠ ಮಾತನಾಡಿ, 2006 ಏ.1 ಕ್ಕೂ ಮೊದಲು ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ನೌಕರರಿಗೆ ಅನುದಾನಕ್ಕೂ ಪೂರ್ವದ ಸೇವೆಯನ್ನು ಕೇವಲ ಪಿಂಚಣಿ ಸೌಲಭ್ಯಕ್ಕೆ ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ನೀಡಬೇಕು. ನಂತರ ನೇಮಕವಾಗಿ ವೇತನ ಪಡೆಯುತ್ತಿರುವ ನೌಕರರಿಗೆ ಸರ್ಕಾರಿ ನೌಕರರಿಗೆ ಇರುವಂತೆ ನೂತನ ಪಿಂಚಣಿ ಯೋಜನೆಯನ್ನು 2006 ರಿಂದ ಅನ್ವಯವಾಗುವಂತೆ ಯಥಾವತ್ತಾಗಿ ಜಾರಿಗೆ ತರಬೇಕು. ಈ ಎರಡೂ ಬೇಡಿಕೆಗಳು ನ್ಯಾಯಯುತ ಮತ್ತು ಮಾನವೀಯತೆಯಿಂದ ಕೂಡಿದ್ದು, ಸರ್ಕಾರ ಕೂಡಲೇ ಈಡೇರಿಸಬೇಕೆಂದರು.

    ಮುಖಂಡರಾದ ಎಸ್.ಎಸ್. ಉಮ್ಮರಗಿ, ಎಂ.ಎ. ಲೋಣಿ, ಎಸ್.ಎನ್. ನಾಗೂರ, ಎಂ.ಆರ್. ಪಾಟೀಲ, ಪಿ.ಎಸ್. ಇಂಡಿ, ವಿ.ಎನ್. ಚವ್ಹಾಣ್, ಪಿ.ಬಿ. ಕುಂಟರಡ್ಡಿ, ಎಂ.ಎನ್. ಮೇರೆಕೋರ, ವಿ.ಪಿ. ಮೇಲ್ಮನಿ, ಎನ್.ಡಿ. ಇಟಗಿ, ಎಸ್.ಎನ್. ಯಾಳವಾರ, ಅಶೋಕ ಕಟ್ಟಿ, ಬಿ.ಸಿ. ಶಿರೋಳಕರ, ಎಸ್.ಸಿ. ಗುಡುಗುಂಟಿ, ಟಿ.ಬಿ. ಪುಟಜಾಲಿ, ಟಿ.ಎಚ್. ಮುಲ್ಲಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts