More

    ವಾಹನಗಳನ್ನು ನಿಮ್ಮ ಮನೆ ಸದಸ್ಯರಂತೆ ಕಾಣಿ

    ವಿಜಯಪುರ: ಮನುಷ್ಯನಿಗೆ ಹೇಗೆ ಆಗಾಗ ವೈದ್ಯಕೀಯ ತಪಾಸಣೆ ಅವಶ್ಯಕತೆ ಇದೆಯೋ ಹಾಗೆ ನಮ್ಮ ಮನೆಯ ವಾಹನಗಳಿಗೂ ಆಗಾಗ ಸರ್ವಿಸಿಂಗ್ ಅವಶ್ಯಕ ಎಂದು ಲೋಕಾಯುಕ್ತ ಇಲಾಖೆ ಉಪ ಅಧೀಕ್ಷಕ ಬಸವರಾಜ ಯಲಿಗಾರ ಹೇಳಿದರು.

    ನಗರದ ಸಂತೋಷ ಆಟೋ ವಿಂಗ್ಸ್ ನಿಂದ ಸೋಮವಾರ ಹಮ್ಮಿಕೊಂಡಿದ್ದ ಮಹಿಂದ್ರಾ ವಾಹನಗಳ ಉಚಿತ ಸೇವಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ವಾಹನಗಳನ್ನು ನಿಮ್ಮ ಮನೆ ಸದಸ್ಯರಂತೆ ಕಂಡು ವಾಹನಗಳಲ್ಲಿ ಸರಿಯಾದ ಸಮಯಕ್ಕೆ ಅಧಿಕೃತ ಸೇವಾ ಕೇಂದ್ರಗಳಲ್ಲಿ ದುರಸ್ತಿಗೊಳಿಸಿಕೊಳ್ಳಬೇಕು. ವಾಹನಗಳು ಸರಿಯಾಗಿದ್ದಾಗ ಮಾತ್ರ ಅಪಘಾತಗಳು ಕಡಿಮೆಯಾಗಲು ಸಾಧ್ಯ ಎಂದವರು ಹೇಳಿದರು.

    ಸಂತೋಷ ಸಮೂಹ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವಕೀಲ ಶ್ರೀಕಾಂತ ಶಿರಡೋಣ ಮಾತನಾಡಿ, ಗ್ರಾಹಕರು ಈ ಉಚಿತ ಸೇವಾ ಶಿಬಿರದ ಸಂಪೂರ್ಣ ಉಪಯೋಗ ಪಡೆಯಬೇಕೆಂದು ಹೇಳಿದರು.

    ಸಂತೋಷ ಆಟೋ ವಿಂಗ್ಸ್‌ನ ಪ್ರಧಾನ ವ್ಯವಸ್ಥಾಪಕ ಅಮಿತ ಐನಾಪುರ ಮಾತನಾಡಿ, ಸೇವಾ ಶಿಬಿರದಲ್ಲಿ ಸರ್ವಿಸ್ ತೆಗೆದುಕೊಳ್ಳುವ ಗ್ರಾಹಕರಿಗೆ ಬಿಡಿ ಭಾಗಗಳ ಮೇಲೆ ಶೇ.5ರಷ್ಟು, ಲೇಬಲ್ ಸೇವೆ ಮೇಲೆ ಶೇ.10 ರಷ್ಟು ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದರು.

    ಸಂತೋಷ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಮೇಶ ಶಿರಡೋಣ, ಭೀಮರಾಯ ಶಿರಡೋಣ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts