More

    ಆಯುರ್ವೇದದಿಂದ ಕರೊನಾ ನಿಯಂತ್ರಣ

    ವಿಜಯಪುರ: ವಿಶ್ವವನ್ನೇ ತಲ್ಲಣಗೊಳಿಸಿ, ಭಯಭೀತರನ್ನಾಗಿ ಮಾಡಿದ ಕರೊನಾ ಸಾಂಕ್ರಾಮಿಕ ರೋಗ ಎರಡನೇ ವರ್ಷಕ್ಕೆ ಕಾಲಿರಿಸಿದ್ದು, ಈ ರೋಗದ ನಿಯಂತ್ರಣ ಕುರಿತು ಜನರಲ್ಲಿ ಅರಿವು ಮೂಡಿಸಲು ಉಪನ್ಯಾಸಗಳು ತುಂಬಾ ಸಹಕಾರಿಯಾಗಲಿವೆ ಎಂದು ವಿಜಯಪುರ ಕ್ಷೇತ್ರ ಜನಸಂಪರ್ಕ ಇಲಾಖೆ ಸಂಯೋಜನ ಅಧಿಕಾರಿ ಸುರೇಶ ಸಿ.ಕೆ. ಅಭಿಪ್ರಾಯಪಟ್ಟರು. ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಕೇಂದ್ರ ಜನಸಂಪರ್ಕ ಕಾರ್ಯಾಲಯ ಮತ್ತು ನೆಹರು ಯುವ ಕೇಂದ್ರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರೊನಾ ನಿಯಂತ್ರಣ ಕುರಿತು ಉಪನ್ಯಾಸ ಕಾಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಆಯುರ್ವೇದ ಚಿಕಿತ್ಸೆಗೆ ಪ್ರಾಮುಖ್ಯತೆ ದೊರಕಿದ್ದು, ಸದ್ಯ ಕರೊನಾ ರೋಗಕ್ಕೆ ಆಯುರ್ವೇದ ಔಷಧಗಳ ಮೂಲಕ ನಿವಾರಣೆ ಮಾಡಲು ಸಾಧ್ಯ ಎಂದರು. ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ, ಪ್ರಾಧ್ಯಾಪಕ ಡಾ. ಸತೀಶ.ಎಸ್. ಪಾಟೀಲ ಉಪನ್ಯಾಸ ನೀಡಿದರು. ಡಾ. ಪ್ರಮೊದ ಬರಗಿ, ಡಾ.ಕೆ.ಎ. ಪಾಟೀಲ, ಡಾ. ಜೋತ್ಸ್ನಾ ಬರಗಿ, ಡಾ. ರವಿ ರಜಪೂತ, ಡಾ.ಜಾವೇದ ಬಾಗಾಯತ, ಡಾ. ಅಶ್ವಿನಿ ಜೀರಂಕಲಗಿ, ಡಾ. ವಿಜಯಲಕ್ಷ್ಮಿ ಹಾದಿಮನಿ, ಡಾ. ರಾಕೇಶ ಗುಜ್ಜರ, ನೆಹರು ಯುವಕೇಂದ್ರದ ರಾಹುಲ ಡೊಂಗ್ರೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts