More

    ಗ್ರಾಪಂ ಅಧಿಕಾರಿ ಮೇಲೆ ಕ್ರಮಕ್ಕೆ ಆಗ್ರಹ

    ವಿಜಯಪುರ: ಅರಕೇರಿ ಗ್ರಾ.ಪಂ. ವ್ಯಾಪ್ತಿಯ ಕುಡಿಯುವ ನೀರಿನ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು ಕೂಡಲೇ ಕ್ರಮ ಕೈಗೊಳ್ಳಲು ಆಗ್ರಹಿಸಿ ಅರಕೇರಿ ತಾಂಡಾ ನಂ.1 ರ ಸದಸ್ಯರು ಹಾಗೂ ಸಾರ್ವಜನಿಕರು ಬುಧವಾರ ಸಿಇಒ ಗೋವಿಂದ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
    ಗ್ರಾ.ಪಂ. ಸದಸ್ಯೆ ಮೇನಕಾ ಮಹಾದೇವ ರಾಠೋಡ ಮಾತನಾಡಿ, ಅರಕೇರಿ ತಾಂಡಾ ನಂ.1ರಲ್ಲಿ ಹಲವಾರು ವರ್ಷಗಳಿಂದ ಕುಡಿಯುವ ನೀರಿನ ತೊಂದರೆ ಇದೆ. ಸಾರ್ವಜನಿಕರಿಗೆ ಉಪಯೋಗ ಆಗುವಂತೆ ಸ್ಮಶಾನ ಭೂಮಿಯಲ್ಲಿ ಬೋರ್‌ವೆಲ್ ಹಾಕಿದ್ದು, ಅಲ್ಲಿಂದ ಬರುವ ನೀರನ್ನು ತಾಂಡೆಯ ಪಕ್ಕ ಹಾಯ್ದು, ಅರಕೇರಿ ಗ್ರಾಮಕ್ಕೆ ಹೋಗುವ ರಸ್ತೆ ಬದಿ ತಾಂಡೆಯ ಎಲ್ಲಾ ಮಹಿಳೆಯರು ನೀರು ತುಂಬಿಕೊಳ್ಳುತ್ತಿದ್ದರು.
    ಆಗ ಅರಕೇರಿ ಗ್ರಾಮದ ಅಥವಾ ಪೊಲೀಸ್ ಬಟಾಲಿಯನ್ ಕಡೆ ಜಿಲ್ಲಾಧಿಕಾರಿಗಳು ಹಾಯ್ದು ಹೋಗುವ ಸಂದರ್ಭದಲ್ಲಿ ರಸ್ತೆ ಬದಿ ನೀರು ತುಂಬಿಕೊಳ್ಳುತ್ತಿರುವುದನ್ನು ಕಂಡು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಅರಕೇರಿ ತಂಡಾ ನಂ.1 ರಲ್ಲಿ ಮನೆ ಮನೆ ನಳ ಅಳವಡಿಸಲು ಸೂಚಿಸಿದರು. ಅದರನ್ವಯ 2.64 ಲಕ್ಷ ರೂ. ಅಂದಾಜು ಪತ್ರಿಕೆ ಪ್ರಕಾರ 14ನೇ ಹಣಕಾಸಿನಲ್ಲಿ ಖರ್ಚು ಹಾಕಿ ಪಿಡಿಒ ಮತ್ತು ಕಾರ್ಯದರ್ಶಿಗಳು ಕೂಡಿ ತಾಂಡೆಯ ಸಿಸಿ ರಸ್ತೆಯನ್ನು ಒಡೆದು ಪೈಪ್‌ಲೈನ್ ಹಾಕಿದ್ದಾರೆ. ಇದು ಸಂಪೂರ್ಣ ಕಳಪೆಯಿಂದ ಕೂಡಿದೆ. ಸದರಿ ಕಾಮಗಾರಿಯಲ್ಲಿ ಬಳಕೆ ಮಾಡಲಾದ ಪೈಪ್ ಕಳಪೆಯಾಗಿದ್ದು ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
    ಗ್ರಾಮಸ್ಥರಾದ ಇಂದುಬಾಯಿ ಸಿಕೇಂದ್ರ ರಾಠೋಡ, ಶಾಂತಾಬಾಯಿ ರಾಠೋಡ, ಸೋಮಾಬಾಯಿ ರಾಠೋಡ, ಕಸ್ತೂರಿಬಾಯಿ ರಾಠೋಡ, ಶಾಂತಾಬಾಯಿ ರಾಠೋಡ, ಪುತಳಾಬಾಯಿ ರಾಠೋಡ, ಸುಸಲಾಬಾಯಿ ರಾಠೋಡ, ಬೇಬಿಬಾಯಿ ರಾಠೋಡ, ಸುನಿತಾ ರಾಠೋಡ, ದೋಂಡಿಬಾಯಿ ರಾಠೋಡ, ಶಾರುಬಾಯಿ ರಾಠೋಡ, ರಾಮಿಬಾಯಿ ರಾಠೋಡ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts