More

  ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ

  ವಿಜಯಪುರ: ನಗರದ ವಾರ್ಡ್ ನಂ. 2ರ ಪ್ರಗತಿ ಕಾಲನಿಯಲ್ಲಿ ಸಿಸಿ ರಸ್ತೆ ಕಾಮಗಾರಿ ಹಾಗೂ ದರ್ಗಾದಲ್ಲಿಯ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಒಳಚರಂಡಿ ಕಾಮಗಾರಿಗೆ ಶನಿವಾರ ಶಾಸಕ ಬಸನಗೌಡ ಪಾಟೀಲ ಭೂಮಿಪೂಜೆ ನೆರವೇರಿಸಿದರು.
  ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಲ್ಲಿ 24 ಲಕ್ಷ ರೂ. ಮೊತ್ತದ ಒಳಚರಂಡಿ ಕಾಮಗಾರಿಗೆ ಹಾಗೂ 60 ಲಕ್ಷ ರೂ. ಮೊತ್ತದ ಸಿ.ಸಿ ರಸ್ತೆ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನಗರದ ಎಲ್ಲ ಕಡೆ ಸಿಸಿ ರಸ್ತೆ, ಒಳಚರಂಡಿ ಕಾಮಗಾರಿಗಳು ಪ್ರಾರಂಭವಾಗಿವೆ. ಅಭಿವೃದ್ಧಿ ಕಾಮಗಾರಿಗಳಿಗೆ ಜನರು ಸಹಕಾರ ಕೊಡಬೇಕು ಎಂದರು.
  ಸಿದ್ಧೇಶ್ವರ ಬ್ಯಾಂಕ್ ನಿರ್ದೇಶಕ ಸಾಯಿಬಣ್ಣ ಭೋವಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ ಲಕ್ಷ್ಮ್ಮಣ ಜಾಧವ್, ವಿಕ್ರಮ್ ಗಾಯಕವಾಡ, ಚಂದ್ರು ಚೌಧರಿ, ಬಸವರಾಜ ಗೊಳಸಂಗಿ, ಪ್ರಕಾಶ ಚವಾಣ್, ಪ್ರವೀಣ ಕಾಮಗೊಂಡ, ರಮೇಶ ಬಿರಾದಾರ, ರಾಹುಲ್ ಔರಂಗಬಾದ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts