More

    ಬೆನಕಟ್ಟಿಯಲ್ಲಿ ಶಾಸನ ಪತ್ತೆ

    ವಿಜಯಪುರ : ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದ ಶ್ರೀಮಾರುತಿ ದೇಗುಲದ ಹಿಂಬದಿಯಲ್ಲಿ ಶಾಸನ ಪತ್ತೆಯಾಗಿದೆ.

    ವಿಜಯಪುರದ ಸಂಶೋಧಕ ಎ.ಎಲ್.ನಾಗೂರ ಅವರು ದೇವಸ್ಥಾನದ ಅಜ್ಞಾತ ಸ್ಥಳದಲ್ಲಿ ಬಿದ್ದಿದ್ದ ಕನ್ನಡ ಭಾಷೆಯ ಶಾಸನವನ್ನು ಬೆಳಕಿಗೆ ತಂದಿದ್ದಾರೆ.

    ಶಾಸನದಲ್ಲಿ ಮೂರು ಸಾಲುಗಳಿವೆ. ಶಾಲಿವಾಹನ ಶಕೆ 1549, ಪ್ರಭವನಾಮ ಸಂವತ್ಸರ, ಕಾರ್ತಿಕ ಶುದ್ಧ ಪಾಡ್ಯದಲ್ಲಿ ಬೆನಕನಟ್ಟಿಯ ಗಿರಿಯಪ್ಪಗೌಡನ ಮಗ ವೀರಣ್ಣಗೌಡನು ದೇಗುಲ ಕಟ್ಟಿಸುವ ಕಾರ್ಯ ಆರಂಭಿಸಿದನು ಎಂದು ತಿಳಿಸುತ್ತದೆ. ಶಾಸನದಲ್ಲಿ ತಿಳಿಸಿರುವ ಕಾಲ ಕ್ರಿ.ಶ.1627ರ ನವೆಂಬರ್17ಕ್ಕೆ ಸರಿಹೊಂದುತ್ತಿದೆ. ಶಾಸನ ಬರೆಸುವ ಸಂದರ್ಭದಲ್ಲಿ ಮೊಹಮ್ಮದ್ ಆದಿಲ್‌ಶಾಹಿ ಅರಸನ ಆಳ್ವಿಕೆ ನಡೆದಿತ್ತು. ಶಾಸನದಲ್ಲಿ ಸ್ವಸ್ತಿಶ್ರೀ ಶಕ್ತಿ 1549 ಪ್ರಭಾವ..(ನಾಮ) ಕಾರ್ತಿಕ ಸುಧ ಪಾಡ್ಯ. ಬೆನಕನಟ್ಟಿಯ ಗಿರಿಯಪ್ಪ ಗೌಡನ ಮಗ ವೀರಣ್ಣ ಗೌಡನು. ದಿಯ ಆರಂಭವ ಮಾಡಿದನು. ಜಯ…ಉ.. ಮುಖ..ಣನು. ಎನ್ನುವ ಅಕ್ಷರಗಳಿವೆ ಎಂದು ಸಂಶೋಧಕ ನಾಗೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts