More

  ರಾಜ್ಯ ಸೈಕ್ಲಿಂಗ್ ತಂಡಕ್ಕೆ ಮೂರು ಪದಕ

  ವಿಜಯಪುರ: ಆಸ್ಸಾಂನ ಗುವಾಹಟಿಯಲ್ಲಿ ಭಾನುವಾರ ಪ್ರಾರಂಭಗೊಂಡ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ರಾಜ್ಯ ಸೈಕ್ಲಿಂಗ್ ತಂಡ ಒಂದು ಬೆಳ್ಳಿ ಹಾಗೂ ಮೂರು ಕಂಚಿನ ಪದಕ ಪಡೆದುಕೊಂಡಿದೆ.

  21ವರ್ಷದೊಳಗಿನ ಪುರುಷರ ವಿಭಾಗದಲ್ಲಿ 30 ಕಿ.ಮೀ. ವೈಯಕ್ತಿಕ ಟೈಂ ಟ್ರಯಲ್‌ನಲ್ಲಿ ಭಾರತೀಯ ರೈಲ್ವೆ ಉದ್ಯೋಗಿ ರಾಜು ಭಾಟಿ 41 ನಿಮಿಷ 05.179 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ರಾಜ್ಯಕ್ಕೆ ಮೊದಲ ಕಂಚಿನ ಪದಕ ದೊರಕಿಸಿಕೊಟ್ಟರು.

  ಮಹಿಳೆಯರ ವಿಭಾಗದಲ್ಲಿ ಭಾರತೀಯ ರೈಲ್ವೆ ಉದ್ಯೋಗಿ ಮೇಘಾ ಗೂಗಾಡ 20 ಕಿ.ಮೀ. ವೈಯಕ್ತಿಕ ಟೈಂ ಟ್ರಯಲ್‌ನಲ್ಲಿ 31.ನಿ. 05.423 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದರು. ವಿಜಯಪುರ ಸೈಕ್ಲಿಂಗ್ ಕ್ರೀಡಾನಿಲಯದ ಸೌಮ್ಯ ಅಂತಾಪುರ 31ನಿ. 33.206 ಸೆಕೆಂಡ್ಸ್‌ನಲ್ಲಿ ಕ್ರಮಿಸಿ ಕಂಚಿನ ಪದಕಕ್ಕೆ ತೃಪ್ತರಾದರು.

  17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವಿಜಯಪುರ ಸೈಕ್ಲಿಂಗ್ ಕ್ರೀಡಾನಿಲಯದ ಸಂಪತ್ ಪಾಸ್ಮೇಲ 20 ಕಿ.ಮೀ. ವೈಯಕ್ತಿಕ ಟೈಂ ಟ್ರಯಲ್‌ನಲ್ಲಿ 27 ನಿ. 55.685 ಸೆಕೆಂಡ್ಸ್ ನಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ ಎಂದು ಸೈಕ್ಲಿಂಗ್ ಸಂಸ್ಥೆ ರಾಜ್ಯ ಗೌರವ ಕಾರ್ಯದರ್ಶಿ ಶ್ರೀಶೈಲ ಕುರಣಿ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts