More

    ರಕ್ತದಾನ ಸಾವನ್ನು ಜಯಿಸುವ ಸಂಜೀವಿನಿ

    ವಿಜಯಪುರ: ಒತ್ತಡದ ಜಗತ್ತಿನಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಪ್ರಾಣಾಪಾಯದಿಂದ ತತ್ತರಿಸುವ ಜೀವವನ್ನು ಬದುಕಿಸಲು ದಾನಿಗಳು ನೀಡುವ ರಕ್ತ ಸಂಜೀವಿನಿಯಾಗುತ್ತದೆ ಎಂದು ವಿಜಯಪುರ ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಶಿವಾನಂದ ಗುಂಡಳ್ಳಿ ಹೇಳಿದರು.
    ನಗರದ ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಮತ್ತು ಬಿಸಿಎ ಮಹಾವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಬೆಳಗಾವಿ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಹಾಗೂ ರೆಡ್ ರಿಬನ್ ಕ್ಲಬ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
    ತನಗಾಗಿ ಬದುಕುವುದು ಜೀವನವಾದರೆ ಇತರರಿಗಾಗಿ ಬದುಕುವುದು ಮಹಾಜೀವನವಾಗುತ್ತದೆ. ತಾಯಿ ಜನ್ಮ ನೀಡಿದರೆ ರಕ್ತದಾನಿ ಪುನರ್ ಜನ್ಮ ನೀಡುತ್ತಾನೆ. ಹಾಗಾಗಿ ಎಲ್ಲರೂ ರಕ್ತದಾನ ಮಾಡುವ ಮೂಲಕ ಬಲಿಯಾಗುವ ಜೀವಗಳನ್ನು ಬದುಕಿಸಿಕೊಡಬೇಕು. ಆಗ ನಮ್ಮ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಹೇಳಿದರು.
    ಪ್ರಾಚಾರ್ಯ ಜಿ.ಎಚ್. ಮಣ್ಣೂರ ಮಾತನಾಡಿ, ಇಂದು ವಿಜ್ಞಾನ ತಂತ್ರಜ್ಞಾನ ಸಾಕಷ್ಟು ಆವಿಷ್ಕಾರಗಳನ್ನು ಮಾಡಿದೆ. ಕೃತಕ ಅಂಗಾಂಗಗಳನ್ನು ಸೃಷ್ಟಿಸಿ ಮಾನವನ ಬದುಕಿಗೆ ನೆರವಾದರೂ ಕೂಡ ಕೃತಕ ರಕ್ತ ಸೃಷ್ಟಿಸಲು ಸಾಧ್ಯವಾಗಿಲ್ಲ. ಆ ಕಾರಣದಿಂದ ರಕ್ತದ ಅಗತ್ಯ ಇರುವವರಿಗೆ ನಾವು ನೀಡುವ ರಕ್ತವೇ ಸಂಜೀವಿನಿಯಾಗುತ್ತದೆ ಎಂದು ಹೇಳಿದರು.
    ಎನ್‌ಎಸ್‌ಎಸ್ ಘಟಕಾಧಿಕಾರಿ ಪ್ರೊ. ರಾಜು ಕಪಾಲಿ, ಸಾಂಸ್ಕೃತಿಕ ಕಾರ್ಯದರ್ಶಿ ಸುನೀಲ ಯಾದವ ಅವರು ರಕ್ತದ ಅಗತ್ಯತೆ ಹಾಗೂ ರಕ್ತದಾನ ಮಹತ್ವ ಕುರಿತು ಮಾತನಾಡಿದರು.
    ಎನ್‌ಎಸ್‌ಎಸ್ ಘಟಕಾಧಿಕಾರಿ ಸೀಮಾ ಪಾಟೀಲ, ರೆಡ್ ಕ್ರಾಸ್ ಯುವ ಘಟಕದ ಘಟಕಾಧಿಕಾರಿ ಯು.ಎಸ್. ಹಿರೇಮಠ ಸೇರಿದಂತೆ ಎಲ್ಲ ಉಪನ್ಯಾಸಕರು ಹಾಜರಿದ್ದರು. ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಭೀಮಾಶಂಕರ ಕೆಂಬೋಗಿ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts