More

    ಪ್ರಜಾಪ್ರಭುತ್ವ ಉಳಿವಿಗಾಗಿ ಐಕ್ಯ ಹೋರಾಟ

    ವಿಜಯಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿದ ಸೌಥ ಇಂಡಿಯಾ ಫೆಡರೇಷನ್ ಆಫ್​ ಟ್ರೇಡ್ ಯೂನಿಯನ್ಸ (ಸಿಫ್ಟು) ಪದಾಧಿಕಾರಿಗಳು ಶುಕ್ರವಾರ ಪ್ರಜಾಪ್ರಭುತ್ವದ ಉಳಿವಿಗಾಗಿ ಐಕ್ಯ ಹೋರಾಟ ನಡೆಸಿದರು.
    ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪದಾಧಿಕಾರಿಗಳು ಹೋರಾಟದ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.
    ಮುಖಂಡ ಪ್ರಕಾಶ ಹಿಟ್ನಳ್ಳಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡುತ್ತಿವೆ. ಆ ಮೂಲಕ ಲಕ್ಷಾಂತರ ಕಾರ್ಮಿಕರ ಬದುಕನ್ನು ಕಿತ್ತುಕೊಂಡಿದ್ದಾರೆ. ಹೀಗಾಗಿ ಎಲ್ಲ ಕಾರ್ಮಿಕರು ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
    ಜನವಾದಿ ಮಹಿಳಾ ಸಂಘಟನೆ ಧುರೀಣೆ ಕಾಂ. ಸುರೇಖಾ ರಜಪೂತ ಮಾತನಾಡಿದರು. ಜಿಲ್ಲಾಧ್ಯಕ್ಷ ಕಾಂ. ಪ್ರಭುಗೌಡ ಪಾಟೀಲ, ಕಾಂ. ಈರ್ಫಾನ್ ಶೇಖ, ಕಾಂ. ಸದಾನಂದ ಮೋದಿ, ಕಾಂ. ಲಾಲಸಾಬ ಕುರುಬು, ಕಾಂ. ಮಹಾದೇವಿ ಕದ್ನಳ್ಳಿ, ಕಾಂ.ಮಹಾಬೂಬಿ ಪಾಂಡಗೋಳ, ಕಾಂ. ವರ್ಷಾ ಇಲಕಲ, ಕಾಂ. ಸುಶಿಲಾಬಾಯಿ ಪವರ, ಕಾಂ. ಸಂಗೀತಾ ಪೂಜಾರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts