More

    ಕೃತಕ ಬುದ್ಧಿ ಒಂದು ವಿಭಿನ್ನ ಅನ್ವೇಷಣೆ

    ವಿಜಯಪುರ: ಕೃಷಿ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳು ಉದಯೋನ್ಮುಖ ವಲಯಗಳಾಗಿದ್ದು, ತಂತ್ರಜ್ಞಾನದ ಸಹಾಯದಿಂದ ಇಂದು ಜಗತ್ತಿನ ಅಂದಾಜು 64 ಪ್ರತಿಶತ ಆಹಾರವನ್ನು ಉತ್ಪಾದಿಸುವ ಹಾಗೂ ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿವೆ. ಇತ್ತೀಚಿನ ಅವಿಷ್ಕಾರಗಳಲ್ಲಿ, ಕೃತಕ ಬುದ್ಧಿಮತ್ತೆಯು ಒಂದು ವಿಭಿನ್ನ ತಂತ್ರಜ್ಞಾನದ ಅನ್ವೇಷಣೆಯಾಗಿದ್ದು, ಅನೇಕ ವಲಯಗಳಿಗೆ ಇದು ಹೊಸ ಕಳೆಯನ್ನು ತಂದುಕೊಟ್ಟಿದೆ ಎಂದು ಮಹಿಳಾ ವಿವಿ ಕುಲಪತಿ ಪ್ರೊ. ಬಿ.ಕೆ.ತುಳಸಿಮಾಲಾ ಹೇಳಿದರು.

    ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಆಹಾರ ಸಂಸ್ಕರಣಾ ಮತ್ತು ಪೋಷಣೆ ಅಧ್ಯಯನ ವಿಭಾಗ ಮತ್ತು ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕ್ಯೂರಿ-ಎಐ ಸಹಯೋಗದೊಂದಿಗೆ ಗುರುವಾರದಿಂದ ಮೂರು ದಿನ ಆಯೋಜಿಸಿರುವ ರೋಬೋಟಿಕ್ಸ್ ಮತ್ತು ಇಂಟರ್‌ನೆಟ್ ಆಫ್ ಥಿಂಗ್ಸ್ ಕುರಿತ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕೃಷಿ ಮತ್ತು ಆಹಾರೋದ್ಯಮಗಳಲ್ಲಿ ಬೆಳೆ ಬೆಳೆಯುವ ವಿಧಾನ, ಉತ್ಪಾದನೆ ಹಾಗೂ ಸಂಸ್ಕರಣೆ ವಿಧಾನಗಳಲ್ಲಿ ಕೃತಕ ಬುದ್ಧಿಮತ್ತೆಯ ಪರಿಚಯದಿಂದ ಹಲವಾರು ಬದಲಾವಣೆಗಳನ್ನು ಕಾಣಬಹುದಾಗಿದೆ. ಗಣಕಯಂತ್ರಗಳು ಕೇವಲ ಆಹಾರದ ಚಿತ್ರವನ್ನು ತೋರಿಸುವ ಯಂತ್ರಗಳಾಗಿರದೆ ಆ ಆಹಾರದಲ್ಲಿರುವ ಪೋಷಕಾಂಶಗಳ ಮಾಹಿತಿಯನ್ನು ಕೂಡ ಒದಗಿಸುವ ಸಾಧನಗಳಾಗಿವೆ. ಪ್ರಸ್ತುತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಆಹಾರ ಸರಪಳಿಯ ಪ್ರತಿ ಹಂತದಲ್ಲೂ ಬಳಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

    ಬೆಂಗಳೂರಿನ ಎಕ್ಷ್‌ಟ್ರೋಜೆನೆಸಿಸ್ ಟೆಕ್ನಾಲಜಿ ಸಂಸ್ಥಾಪಕ ನಿರ್ದೇಶಕ ಆಯುಷ್ ಬಸವೇಶ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಿಎಸ್‌ಟಿ ಕ್ಯೂರಿ-ಎಐ ಯೋಜನೆಯ ಸಂಯೋಜಕ ಪ್ರೊ. ಅಜೀಜ್ ಮಕಾನದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಹಾರ ಸಂಸ್ಕರಣಾ ಮತ್ತು ಪೋಷಣೆ ವಿಭಾಗದ ಮುಖ್ಯಸ್ಥೆ ಡಾ. ರೇಣುಕಾ ಮೇಟಿ ಸ್ವಾಗತಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಿಸ್. ಜನ್ನೀಫರ್ ಸೌಲಮ್ ಪರಿಚಯಿಸಿದರು. ಡಾ. ನಟರಾಜ್ ದುರ್ಗಣ್ಣವರ್ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts