More

    ಉದ್ಯಮಿ ವಿಜಯ್ ಮಲ್ಯರಿಂದ ಎಲ್ಲದಕ್ಕೂ ಶುಭಾಶಯ; ಕಾಲೆಳೆಯುತ್ತಿರುವ ನೆಟ್ಟಿಗರು!

    ಬೆಂಗಳೂರು: ಬ್ಯಾಂಕ್​ನಿಂದ ಸಾಲ ಪಡೆದು ತೀರಿಸದೆ ಭಾರತದಿಂದ ಹೊರಗೆ ಇರುವ ಉದ್ಯಮಿ ವಿಜಯ್ ಮಲ್ಯ, ಪ್ರತಿ ಹಬ್ಬಕ್ಕೂ ತಪ್ಪದೇ ಶುಭಾಶಯ ಹೇಳುವುದನ್ನು ಮಾತ್ರ ಬಿಟ್ಟಿಲ್ಲ. ಹೀಗೆ ಶುಭಾಶಯ ಕೋರುತ್ತಿರುವ ಮಲ್ಯರನ್ನು ನೆಟ್ಟಿಗರು ತಮಾಷೆ ಮಾಡುತ್ತಿರುವುದು ಕೂಡ ನಡೆಯುತ್ತಿದೆ.

    ಉದ್ಯಮಿ ವಿಜಯ್ ಮಲ್ಯರ ಹೆಸರಿನಲ್ಲಿರುವ ವೆರಿಫೈಡ್ ಟ್ವಿಟರ್​ ಖಾತೆಯಿಂದ ಸಾಮಾನ್ಯವಾಗಿ ಪ್ರತಿ ಹಬ್ಬಕ್ಕೂ ಶುಭಾಶಯ ಹೇಳಲಾಗುತ್ತಿದೆ. ಆದರೆ ವಿಜಯ್ ಮಲ್ಯ ಅದೇ ಕಾರಣಕ್ಕೆ ಟೀಕೆ ಹಾಗೂ ತಮಾಷೆಗೆ ಒಳಗಾಗುತ್ತಿದ್ದಾರೆ. ವಿಶೇಷವೆಂದರೆ, ಮಲ್ಯರ ಖಾತೆಯಿಂದ ಶುಭಾಶಯದ ಹೊರತಾಗಿ ಬೇರೆ ಟ್ವೀಟ್​ಗಳಿರುವುದು ಅತಿ ಕಡಿಮೆ.

    ಹಬ್ಬಕ್ಕೆ ವಿಷ್ ಮಾಡುವ ಮಲ್ಯರನ್ನು ಕೆಲವರು, ಭಾರತಕ್ಕೆ ಬನ್ನಿ ಒಟ್ಟಿಗೆ ಸೆಲೆಬ್ರೇಟ್ ಮಾಡೋಣ ಎಂದು ಕಾಲೆಳೆದರೆ, ಇನ್ನು ಕೆಲವರು ಬ್ಯಾಂಕ್ ರಜೆ ಇರುವ ಸಮಯದಲ್ಲಿ ಮಾತ್ರ ನೀವು ವಿಷ್ ಮಾಡುವುದಾ? ಎಂದೂ ತಮಾಷೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನೆಟ್ಟಿಗರು ಏನೇ ಅಂದರೂ ಹಬ್ಬದಂದು ಮಲ್ಯ ವಿಷ್ ಮಾಡುವುದು ಮಾತ್ರ ನಿಂತಿಲ್ಲ.

    ಪತ್ನಿ ಗರ್ಭಿಣಿ, ಪತಿಗೆ ಅನುಮಾನ; ಹೊರಬಿತ್ತು ಕೊಲೆ ಹಿಂದಿನ ಕಾರಣ

    ‘ಹೆಂಡ್ತಿಯನ್ನು ಚೆನ್ನಾಗಿ ನೋಡಿಕೊ’ ಎಂದ ಸಂಬಂಧಿಕರಿಬ್ಬರಿಗೂ ಇರಿದ; ಒಬ್ಬನ ಸಾವು, ಇನ್ನೊಬ್ಬನ ಪರಿಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts