More

    ಇನ್ನು ಕೆಲವೇ ದಿನಗಳಲ್ಲಿ ಭಾರತದ ಜೈಲು ಸೇರಲಿದ್ದಾರೆ ವಿಜಯ್​ ಮಲ್ಯ

    ನವದೆಹಲಿ: ಭಾರತದ ಬ್ಯಾಂಕ್​ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿ ಬ್ರಿಟನ್​ನಲ್ಲಿ ಅಡಗಿಕೊಂಡಿದ್ದ ವಾಣಿಜ್ಯೋದ್ಯಮಿ ವಿಜಯ್​ ಮಲ್ಯ ಇನ್ನು 28 ದಿನಗಳಲ್ಲಿ ಭಾರತದ ಜೈಲು ಸೇರುವುದು ಬಹುತೇಕ ಖಚಿತವಾಗಿದೆ.

    ಬ್ರಿಟನ್​ನ ಹೈಕೋರ್ಟ್​ 2018ರಲ್ಲಿ ವಿಜಯ್​ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಹೈಕೋರ್ಟ್​ನ ಮತ್ತೊಂದು ಪೀಠಕ್ಕೆ ಅವರು ಮೇಲ್ಮನವಿ ಸಲ್ಲಿಸಿದ್ದರು.

    ಇದನ್ನೂ ಓದಿ: ಅಪ್ಪನ ಕಾರನ್ನು ಗಂಟೆಗೆ 308 ಕಿ.ಮೀ ವೇಗದಲ್ಲಿ ಚಲಾಯಿಸಿದ ಮಗನ ಸ್ಥಿತಿ ಹೇಳತೀರದು..!

    ಆದರೆ ಆ ನ್ಯಾಯಪೀಠ ಕೂಡ ಇವರ ಮೇಲ್ಮನವಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ವಿಜಯ್​ ಮಲ್ಯ ಬ್ರಿಟನ್​ನ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಪ್ರಯತ್ನಿಸಿದ್ದರು. ಈ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ವಿಜಯ್​ ಮಲ್ಯ ಅವರ ಮೇಲ್ಮನವಿಯನ್ನು ಸ್ವೀಕರಿಸಲು ಗುರುವಾರ ನಿರಾಕರಿಸಿದ್ದು, ಅವರ ಈ ಪ್ರಯತ್ನವೂ ವಿಫಲವಾದಂತಾಗಿದೆ.

    ಈ ಹಿನ್ನೆಲೆಯಲ್ಲಿ ಅಪರಾಧಿಗಳ ವಿನಿಮಯದ ಭಾರತದೊಂದಿಗೆ ಹೊಂದಿರುವ ಒಪ್ಪಂದದನ್ವಯ ಕಿಂಗ್​ ಆಫ್​ ಗುಡ್​ ಟೈಮ್ಸ್​ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಆದೇಶಕ್ಕೆ ಬ್ರಿಟನ್​ನ ಗೃಹ ಸಚಿವಾಲಯದ ಅಧಿಕಾರಿ ಪ್ರೀತಿ ಪಟೇಲ್​ ಶೀಘ್ರದಲ್ಲೇ ಸಹಿ ಹಾಕಲಿದ್ದಾರೆ. ಇದಾಗಿ 28 ದಿನಗಳ ಒಳಗಾಗಿ ವಿಜಯ್​ ಮಲ್ಯ ಮುಂಬೈನ ಜೈಲು ಸೇರುವುದು ಖಚಿತವಾಗಿದೆ.

    ಬ್ರಿಟನ್​ ಹೈಕೋರ್ಟ್​ನ ಆದೇಶದ ವಿರುದ್ಧ ಬ್ರಿಟನ್​ನ ಸುಪ್ರೀಂಕೋರ್ಟ್​ಗೆ ಯಾವುದೇ ಮೇಲ್ಮನವಿ ಸಲ್ಲಿಸಬೇಕೆಂದಾದರೆ ಏನಾದರೂ ಕಾನೂತ್ಮಕ ಅಂಶಗಳಿರಬೇಕು. ಹಾಗೂ ಹೈಕೋರ್ಟ್​ನ ಆದೇಶ ಹೊರಬಿದ್ದ 14 ದಿನಗಳೊಳಗಾಗಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ, ವಿಜಯ್​ ಮಲ್ಯ ಸಲ್ಲಿಸಿರುವ ಮೇಲ್ಮನವಿಯಲ್ಲಿ ಯಾವುದೇ ಕಾನೂನಾತ್ಮಕ ಅಂಶಗಳಿಲ್ಲ. ಅಲ್ಲದೆ, ಸಲ್ಲಿಸುವಲ್ಲಿ ತಡವಾಗಿದೆ. ಹಾಗಾಗಿ ಅವರು ಭಾರತಕ್ಕೆ ಹಸ್ತಾಂತರಗೊಳ್ಳುವುದು ನಿಶ್ಚಿವಾಗಿದೆ ಎಂದು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: 4ಜಿ ಸ್ಮಾರ್ಟ್​ಫೋನ್​ ಬಳಕೆದಾರರೇ ಇನ್ನೆರಡು ವರ್ಷ ನಿಮಗಿಲ್ಲ ಚಿಂತೆ..!

    ಪ್ರಧಾನಿ ಮೋದಿ ದಿಗ್ವಿಜಯ: ಹಲವು ಬ್ಯಾಂಕ್​ಗಳಿಂದ ಸಾಲ ಪಡೆದು ಮರಳಿಸದೆ ವಂಚಿಸಿದ್ದ ಹಲವು ಉದ್ಯಮಿಗಳು ಭಾರತದಿಂದ ಪರಾರಿಯಾಗಿದ್ದರು. ಅವರಲ್ಲಿ ವಿಜಯ್​ ಮಲ್ಯ ಮತ್ತು ವಜ್ರೋದ್ಯಮಿ ನೀರವ್​ ಮೋದಿ ಪ್ರಮುಖರಾಗಿದ್ದರು. ಅನ್ಯರಾಷ್ಟ್ರಗಳಿಗೆ ಪರಾರಿಯಾಗಲು ಇವರೆಲ್ಲರಿಗೂ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯುತ್ತಿದ್ದವು.

    ಇದೀಗ ವಂಚಕ ವಿಜಯ್​ ಮಲ್ಯ ಅವರನ್ನು ಭಾರತಕ್ಕೆ ಮರಳಿ ಕರೆತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಅವರ ಪಾಲಿಗೆ ಬಹುದೊಡ್ಡ ದಿಗ್ವಿಜಯ ಎಂದು ಬಣ್ಣಿಸಲಾಗುತ್ತಿದೆ.

    LIVE| ವಿಶೇಷ ಆರ್ಥಿಕ ಪ್ಯಾಕೇಜ್​ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ: ವಲಸೆ ಕಾರ್ಮಿಕರಿಗೆ ಬಂಪರ್ ಕೊಡುಗೆ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts