More

    ಅಪ್ಪನ ಕಾರನ್ನು ಗಂಟೆಗೆ 308 ಕಿ.ಮೀ ವೇಗದಲ್ಲಿ ಚಲಾಯಿಸಿದ ಮಗನ ಸ್ಥಿತಿ ಹೇಳತೀರದು..!

    ಒಟ್ಟಾವ: ಕರೊನಾ ಲಾಕ್​ಡೌನ್​ನಿಂದಾಗಿ ವಿಶ್ವದ ಬಹುತೇಕ ಕಡೆಗಳಲ್ಲಿ ರಸ್ತೆಗಳು ಖಾಲಿ ಖಾಲಿಯಾಗಿವೆ. ಇದನ್ನೇ ಬಂಡವಾಳವಾಗಿಸಿಕೊಂಡ ಕೆನಡಾ ಯುವಕನೊಬ್ಬ ಅಪಾಯಾಕಾರಿ ವೇಗದಲ್ಲಿ ಕಾರು ಚಾಲನೆ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

    ಇದನ್ನೂ ಓದಿ: ತಂದೆಯನ್ನೇ ಬರ್ಬರವಾಗಿ ಹತ್ಯೆಗೈದಿದ್ದ ಮೂವರು ಸಹೋದರಿಯರ ಬೆನ್ನಿಗೆ ನಿಂತ ಕೋರ್ಟ್​, ತನಿಖಾ ಸಮಿತಿ!

    ಕೆನಡಾದ ಒಂಟಾರಿಯೋ ಪ್ರಾಂತ್ಯದ ಕ್ವೀನ್​ ಎಲಿಜಬೆತ್​ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ನಿಗದಿಗಿಂತ ಮೂರುಪಟ್ಟು ವೇಗದಲ್ಲಿ ಕಾರು ಚಾಲನೆ ಮಾಡಿದ್ದಕ್ಕೆ 18 ವರ್ಷದ ಯುವಕನ ಮೇಲೆ ಅಪಾಯಕಾರಿ ಚಾಲನೆ, ಸ್ಟ್ರೀಟ್​ ರೇಸಿಂಗ್​ ಅಥವಾ ಸ್ಟಂಟ್​ ಡ್ರೈವಿಂಗ್​ ಕೇಸ್​ಗಳು ದಾಖಲಾಗಿವೆ.

    ಕಾರು ತಡೆದು ಪರಿಶೀಲಿಸಿದ ಒಂಟಾರಿಯೋ ಪ್ರಾಂತ್ಯದ ಪೊಲೀಸರಿಗೆ ಯುವಕ ಗಂಟೆಗೆ ಬರೋಬ್ಬರಿ 308 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿರುವುದು ಗೊತ್ತಾಗಿದೆ. ಆದರೆ, ವೇಗದ ಮಿತಿ ಇರುವುದು 110 ಕಿ.ಮೀ ಮಾತ್ರ.

    ಇದನ್ನೂ ಓದಿ: VIDEO| ಅಥಣಿಯಲ್ಲಿ ಕ್ವಾರಂಟೈನ್​ ಇಂಕ್​​ ಕಂಡು ಕಂಗಾಲಾದ ಜನ

    ಯುವಕನನ್ನು ನೊಹಾ ಲೌರಿಸೆಲ್ಲಾ ಎಂದು ಗುರುತಿಸಲಾಗಿದ್ದು, ತಂದೆಯ ಮರ್ಸಿಡೆಸ್ ಸಿ63 ಎಎಂಜಿ ಕಾರನ್ನು ಚಲಾಯಿಸಿರುವುದು ತಿಳಿದುಬಂದಿದೆ. ಕಾರಿನಲ್ಲಿ ಚಾಲಕನ ವಯಸ್ಸಿನ ಮತ್ತೊಬ್ಬ ಯುವಕನಿ​ದ್ದ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಾಗಿರುವುದಲ್ಲದೇ, 7 ದಿನಗಳವರೆಗೆ ಡ್ರೈವಿಂಗ್​ ಲೈಸೆನ್ಸ್​ ಕೂಡ ರದ್ದು ಮಾಡಲಾಗಿದೆ. (ಏಜೆನ್ಸೀಸ್​)

    ಬೇಲಿ ಹಾರಿ ರಸ್ತೆಗೆ ಬಂದ ಮೇಕೆಗಳು… ಮುಂದೇನಾಯಿತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts