ಬುರ್ಜ್ ಖಲೀಫಾ ಮುಂದೆ ನಟಿ ನಯನತಾರಾಗೆ ಮುತ್ತು! ಫೋಟೋ, ವಿಡಿಯೋ ವೈರಲ್…

6

ಸೌತ್​ನ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಹಾಗೂ ಅವರ ಬಾಯ್​ಫ್ರೆಂಡ್ ವಿಘ್ನೇಶ್ ಶಿವನ್ ಇಬ್ಬರು ಡೇಟಿಂಗ್ ಮಾಡುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಜತೆಗೆ, ಇವರಿಬ್ಬರು ಟ್ರಿಪ್​​ಗಳನ್ನು ಎಂಜಾಯ್ ಮಾಡಲು ಬೇರೆ ಬೇರೆ ಕಡೆ ಆಗಾಗ ಹೋಗುತ್ತಾರೆ. ತಮ್ಮ ಸಂತಸದ ಸಮಯಗಳನ್ನು, ಒಂದಿಷ್ಟು ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಸದ್ಯ, ನಟಿ ಮತ್ತು ವಿಘ್ನೇಶ್ ತಾವು ದುಬೈನಲ್ಲಿ ಹೊಸ ವರ್ಷವನ್ನು ಸ್ವಾಗತಿಸಿರುವ ವಿಷಯ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇನ್ನು, ಹೊಸ ವರ್ಷದಂದು ಅವರಿಬ್ಬರು ಜಗತ್ತಿನ ಅತಿ ದೊಡ್ಡ ಕಟ್ಟಡ ಎನಿಸಿಕೊಂಡಿರುವ ದುಬೈನ ಬುರ್ಜ್ ಖಲೀಫಾ ಮುಂದೆ ನಿಂತು ಎಂಜಾಯ್ ಮಾಡುತ್ತಿರುವ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. 

ಬುರ್ಜ್ ಖಲೀಫಾ ಮುಂದೆ ನಟಿ ನಯನತಾರಾಗೆ ಮುತ್ತು! ಫೋಟೋ, ವಿಡಿಯೋ ವೈರಲ್... ಬುರ್ಜ್ ಖಲೀಫಾ ಮುಂದೆ ನಟಿ ನಯನತಾರಾಗೆ ಮುತ್ತು! ಫೋಟೋ, ವಿಡಿಯೋ ವೈರಲ್...

ದುಬೈನ ಬುರ್ಜ್ ಖಲೀಫಾ ಕಟ್ಟಡದಲ್ಲಿ ಎಲ್.ಇ.ಡೀ ಲೈಟಿಂಗ್ ಮೂಲಕ ಹೊಸ ವರ್ಷದ ಶುಭಾಶಯಗಳು ತಿಳಿಸುವುದರ ಜೊತೆಗೆ ಪಟಾಕಿಗಳು ಹೊಡೆಯಲಾಗುತ್ತೆ. ಈ ಸಂತೋಷ ಸಂದರ್ಭದಲ್ಲಿ ಈ ಜೋಡಿ ಬುರ್ಜ್ ಖಲೀಫಾ ಮುಂದೆ ನಿಂತು ಲೈಟಿಂಗ್ ನೋಡಿ ಎಂಜಾಯ್ ಮಾಡುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ನಟಿ ನಯನತಾರಾ ಹಣೆಗೆ ಬಾಯ್​ಫ್ರೆಂಡ್ ವಿಘ್ನೇಶ್ ಶಿವನ್ ಮುತ್ತು ಕೊಡುವುದು ಕಾಣಿಸಿದೆ. ಹೀಗಾಗಿ, ಈ ವಿಡಿಯೋ ಕ್ಲಿಪ್ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಈಗಾಗಲೇ, ವಿಡಿಯೋಗೆ 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಲಭಿಸಿದ್ದು, ಈ ಜೋಡಿ ಶೇರ್ ಮಾಡಿರುವ ಫೋಟೋಗಳು ಕೂಡ ಸಖತ್ ಮೆಚ್ಚುಗೆ ಪಡೆಯುತ್ತಿವೆ.

ಬಡವ ರಾಸ್ಕಲ್ ಚಿತ್ರದ ಭರ್ಜರಿ ಕಲೆಕ್ಷನ್ ಎಷ್ಟು? ಡಾಲಿ ಧನಂಜಯ್ ತಂಡ ದಿಲ್ ಖುಷ್!