More

    ವಿಯೆನ್ನಾ ನಂ.1 ವಾಸಯೋಗ್ಯ ನಗರ; ಸಿರಿಯಾದ ರಾಜಧಾನಿ ಡಮಾಸ್ಕಸ್​ಗೆ ಕೊನೇ ಸ್ಥಾನ

    ಪ್ಯಾರಿಸ್: ಆಸ್ಟ್ರಿಯಾ ರಾಜಧಾನಿ ವಿಯೆನ್ನಾ ವಿಶ್ವದ ಅತ್ಯಂತ ವಾಸಯೋಗ್ಯ ನಗರವೆಂಬ ಹೆಗ್ಗಳಿಕೆಗೆ ಮತ್ತೆ ಪಾತ್ರವಾಗಿದೆ. ಕಳೆದ ವರ್ಷ ಅದು 12ನೇ ಸ್ಥಾನದಲ್ಲಿತ್ತು. ಯುದ್ಧದಿಂದ ಹಾನಿಗೊಳಗಾಗಿರುವ ಸಿರಿಯಾದ ರಾಜಧಾನಿ ಡಮಾಸ್ಕಸ್ ಕನಿಷ್ಠ ವಾಸಯೋಗ್ಯ ನಗರವೆಂಬ ಪಟ್ಟಿ ಹೊಂದಿದೆ.

    ಸ್ಥಿರತೆ, ಉತ್ತಮ ಮೂಲಭೂತ ಸೌಕರ್ಯ, ಆರೋಗ್ಯ, ಸಂಸ್ಕೃತಿ ಮತ್ತು ಮನರಂಜನೆಗಾಗಿ ಸಾಕಷ್ಟು ಅವಕಾಶಗಳನ್ನು ಹೊಂದಿರುವ ಕಾರಣಕ್ಕಾಗಿ ವಿಯೆನ್ನಾ ಮತ್ತೆ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಈವರೆಗೆ ಮೊದಲ ಸ್ಥಾನದಲ್ಲಿದ್ದ ಆಕ್ಲೆಂಡ್, ಕರೊನಾ ವೈರಸ್ ಸಾಂಕ್ರಾಮಿಕ ನಿರ್ಬಂಧಗಳಿಂದಾಗಿ 34ನೇ ಸ್ಥಾನಕ್ಕೆ ಜಾರಿದೆ ಎಂದು ಗುರುವಾರ ಪ್ರಕಟವಾದ ಎಕಾನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ (ಇಐಯು) ವಾರ್ಷಿಕ ವರದಿ ತಿಳಿಸಿದೆ. 2018 ಮತ್ತು 2019ರಲ್ಲಿಯೂ ವಿಯೆನ್ನಾ ಮೊದಲ ಸ್ಥಾನದಲ್ಲಿತ್ತು.

    ಡೆನ್ಮಾರ್ಕ್ ರಾಜಧಾನಿ ಕೋಪನ್ ಹೇಗನ್ 2ಮತ್ತು ಸ್ವಿಟ್ಜರ್ಲೆಂಡ್​ನ ಜ್ಯೂರಿಚ್ ಹಾಗೂ ಕೆನಡಾದ ಕ್ಯಾಲ್ಗರಿ ಜಂಟಿಯಾಗಿ 3, ಕೆನಡಾದ ಮತ್ತೊಂದು ನಗರ ವ್ಯಾಂಕೊವರ್ 5, ಸ್ವಿಸ್​ನ ಜಿನೀವಾ 6, ಜರ್ಮನಿಯ ಫ್ರಾಂಕ್​ಫರ್ಟ್ 7, ಕೆನಡಾದ ಟೊರಾಂಟೊ 8, ನೆದರ್​ಲೆಂಡ್​ನ ಆಮಸ್ಟರ್​ಡ್ಯಾಮ್ 9, ಜಪಾನ್​ನ ಒಸಾಕಾ ಮತ್ತು ಆಸ್ಟ್ರೇಲಿಯಾದ ಮೆಲ್ಬೋರ್ನ್ 10, ಫ್ರಾನ್ಸ್​ನ ಪ್ಯಾರಿಸ್ 19, ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ಕೆನಡಾದ ಮಾಂಟ್ರಿಯಲ್ ನಂತರದ 24ನೇ ಸ್ಥಾನದಲ್ಲಿದೆ. ಲಂಡನ್ 33, ಸ್ಪೇನ್​ನ ಬಾರ್ಸಿಲೋನಾ ಮತ್ತು ಮ್ಯಾಡ್ರಿಡ್ ಕ್ರಮವಾಗಿ 35 ಮತ್ತು 43, ಇಟಲಿಯ ಮಿಲಾನ್ 49, ಅಮೆರಿಕದ ನ್ಯೂಯಾರ್ಕ್ 51, ಚೀನಾದ ಬೀಜಿಂಗ್ 71ನೇ ಸ್ಥಾನದಲ್ಲಿದೆ.

    ರಷ್ಯಾ ರ‍್ಯಾಂಕಿಂಗ್ ಕುಸಿತ: ರಷ್ಯಾ ದಾಳಿ ಹಿನ್ನೆಲೆಯಲ್ಲಿ ಉಕ್ರೇನಿಯನ್ ರಾಜಧಾನಿ ಕಿಯೆವ್​ನ್ನು ಈ ಬಾರಿ ಪಟ್ಟಿಗೆ ಸೇರಿಸಲಾಗಿಲ್ಲ. ರಷ್ಯಾದ ನಗರಗಳಾದ ಮಾಸ್ಕೊ 15 ಮತ್ತು ಸೇಂಟ್​ಪೀಟರ್ಸ್ ಬರ್ಗ್ 13ನೇ ರ್ಯಾಂಕ್​ಗೆ ಕುಸಿದಿದೆ.

    ಸಾಕು ನಾಯಿಗೆ ಸೀಮಂತ ಮಾಡಿದ ರಂಗಭೂಮಿ ಕಲಾವಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts