More

    ವಿಧಾನಸೌಧ ಸಚಿವಾಲಯದ ಚಿತ್ತ ಬೆಳಗಾವಿತ್ತ

    ಬೆಂಗಳೂರು:
    ವಿಧಾನಸೌಧ ಸಚಿವಾಲಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಚಿತ್ತ ಬೆಳಗಾವಿಯತ್ತ ಹರಿದಿದೆ. ಜ.4ರಿಂದ ಪ್ರಾರಂಭವಾಗಲಿರುವ ಚಳಿಗಾಲದ ಅಧಿವೇಶನಕ್ಕೆ ತೆರಳಲು ಸಿದ್ಧತೆಗಳು ನಡೆದಿದ್ದು, ಆಫೀಸ್‌ನಲ್ಲಿ ಅಗತ್ಯವಿರುವುದನ್ನು ಪ್ಯಾಕಿಂಗ್ ಮಾಡಲಾಗುತ್ತಿದೆ.
    ಬೆಳಗಾವಿಗೆ ಏನೇನು ತೆಗೆದುಕೊಂಡು ಹೋಗಬೇಕು ಎನ್ನುವುದನ್ನು ಎರಡೆರಡು ಬಾರಿ ಖಚಿತಪಡಿಸಿಕೊಂಡು ಮೇಲಾಧಿಕಾರಿಗಳ ಅನುಮತಿ ಪಡೆದು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
    ಬೆಳಗಾವಿಗೆ ಕಡತಗಳನ್ನು ಸಾಗಿಸಲು ಅನುಕೂಲವಾಗುವಂತೆ ಟ್ರಂಕ್‌ಗಳನ್ನು ಮಾಡಿಸಿದ್ದು, ಆ ಮೂಲಕವೇ ಪ್ಯಾಕಿಂಗ್ ಮಾಡಲಾಗುತ್ತಿದೆ ಎಂದು ವಿಧಾನಸಭಾಧ್ಯಕ್ಷರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ವಿಭಾಗಕ್ಕೂ ಪ್ರತ್ಯೇಕ ಪ್ಯಾಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಂಟೈನರ್ ಮೂಲಕ ಶನಿವಾರ ಅಲ್ಲಿಗೆ ತಲುಪುವ ಹಾಗೆ ಬೆಳಗಾವಿಗೆ ಸಾಗಿಸಲಾಗುವುದು. ಡಿ.3ರೊಳಗೆ ಸುವರ್ಣ ಸೌಧದಲ್ಲಿ ಎಲ್ಲವನ್ನ ಜೋಡಿಸಿ ಪೂರ್ಣ ಪ್ರಮಾಣದಲ್ಲಿ ಕಚೇರಿ ನಡೆಸುವುದಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಅಧಿವೇಶನದಲ್ಲಿ ಚರ್ಚೆಗೆ ಬರಬಹುದಾದ ಬಹಳ ಮುಖ್ಯವಾದ ಕಡತಗಳನ್ನು ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡು, ಕಾರಿನಲ್ಲಿಯೇ ತರುವಂತೆ ಸೂಚನೆಯನ್ನು ನೀಡಲಾಗಿದೆ. ಅಗತ್ಯವಿರುವ ಕಂಪ್ಯೂಟರ್‌ಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಸಿಬ್ಬಂದಿಗಳು ಖಚಿತಪಡಿಸಿದ್ದಾರೆ.
    ಸ್ಪೀಕರ್ ವ್ಯಾಪ್ತಿಯಲ್ಲಿರುವ ವಿಧಾನಸೌಧದ 194 ಸಿಬ್ಬಂದಿಗಳನ್ನು ಅಧಿವೇಶನ ಮುಗಿಯುವ ತನಕ ಬೆಳಗಾವಿಗೆ ನಿಯೋಜಿಸಲಾಗಿದೆ.

    ಪ್ರಶ್ನೋತ್ತರಕ್ಕೆ ಪ್ರತ್ಯೇಕ ವ್ಯವಸ್ಥೆ
    ಶಾಸಕರು ಮತ್ತು ಸಚಿವರು ಅಧಿವೇಶನದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಗಳನ್ನು ಬೆಳಗಾವಿಯಲ್ಲಿಯೇ ನೀಡಬೇಕು ಎಂದು ಸಂಬಂದಿಸಿದ ಇಲಾಖೆಗೆ ಸೂಚನೆಗಳನ್ನು ನೀಡಲಾಗಿರುವ ಹಿನ್ನೆಲೆಯಲ್ಲಿ ಇಲ್ಲಿಂದ ಮತ್ತಷ್ಟು ಪ್ರಶ್ನೋತ್ತರ ಬಂಡಲ್‌ಗಳನ್ನು ಸಾಗಿಸುವುದು ತಪ್ಪಿದೆ. ಪ್ರಶ್ನೆಗಳಿಗೆ ಉತ್ತರಗಳನ್ನು ಅಲ್ಲಿಯೇ ಮುದ್ರಣ ಮಾಡಿ ಶಾಸಕರಿಗೆ ಕೊಡಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts