More

    VIDEO| ಬಾಲಿವುಡ್​ ಹೀರೋ ಇಮ್ರಾನ್​ ಹಶ್ಮಿ ಜಿಮ್​ ವರ್ಕೌಟ್​ ನೋಡಿ!

    ಮುಂಬೈ: ಬಾಲಿವುಡ್​ ನಟ ಇಮ್ರಾನ್ ಹಶ್ಮಿ ಫಿಟ್​ ಅಂಡ್​ ಫೈನ್​ ಆಗಲು ಜಿಮ್​​ಗೆ ಲಗ್ಗೆ ಇಟ್ಟಿದ್ದಾರೆ. ವಿವಿಧ ಕ್ಲಿಷ್ಟಕರ ವ್ಯಾಯಾಮಗಳನ್ನು ಮಾಡುತ್ತಾ ಬೆವರು ಸುರಿಸುತ್ತಿರುವ ತಮ್ಮ ದೇಹವನ್ನು ಪ್ರದರ್ಶಿಸುವ ವಿಡಿಯೋ ಒಂದನ್ನು ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

    ತಮ್ಮ ವರ್ಕ್​ಔಟ್​ ವಿಡಿಯೋ ಹಾಕಿರುವ ಪೋಸ್ಟ್​ಗೆ ಹಶ್ಮಿ ಅವರು, “ಡಿಯರ್​ ಫ್ಯಾಟ್​, ಪ್ರಿಪೇರ್​ ಟು ಡೈ” ಎಂದು ಟಿಪ್ಪಣಿ ಬರೆದಿದ್ದಾರೆ. ಇದಕ್ಕೆ ಸಿನಿನಿರ್ದೇಶಕ ಮೋಹಿತ್​ ಸೂರಿ, “ವೇ ಟು ಗೋ ಟೈಗರ್ರ್..!” ಎಂದು ಕಾಮೆಂಟ್​ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ, “ಇದು ನನಗೆ ತಕ್ಷಣ ಹೋಗಿ ಜಿಮ್​ ಸೇರಿಕೊಳ್ಳಲು ಪ್ರೇರಣೆ ನೀಡುತ್ತಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

     

    View this post on Instagram

     

    A post shared by Emraan Hashmi (@therealemraan)

    ಈ ವರ್ಕ್​ಔಟ್​ಅನ್ನು ಹಶ್ಮಿ ತಮ್ಮ ಮುಂದಿನ ಸಿನಿಮಾಗಾಗಿ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ ಈ ರೀತಿ ಜಿಮ್​ ಬಾಡಿ ಬೇಕಾಗಿರುವ ಆ ಸಿನಿಮಾ ಯಾವುದೆಂದು ಇನ್ನೂ ಅವರು ತಿಳಿಸಿಲ್ಲ. ಸಲ್ಮಾನ್​ ಖಾನ್​ರ ಟೈಗರ್​ 3 ಚಿತ್ರದಲ್ಲಿ ಎಮ್ರಾನ್ ಹಶ್ಮಿ ಅವರಿಗೂ ಪಾತ್ರ ನೀಡಲಾಗಿದೆ ಎಂಬ ಊಹೆಗಳು ಹರಿದಾಡುತ್ತಿವೆ. (ಏಜೆನ್ಸೀಸ್)

    ಯಾರ ಮೇಲೆ ನಂಬಿಕೆ ಇದೆಯೋ ಅವರನ್ನೇ ಆಯ್ಕೆ ಮಾಡಲಿ: ರಾಜೀನಾಮೆ ನೀಡಿದ ಕ್ಯಾಪ್ಟನ್​ ಉದ್ಗಾರ

    “ನನ್ನ ಬರ್ತ್​ಡೇಗೆ ದಾಖಲೆ ಲಸಿಕೆ ನೀಡಿದ್ದಕ್ಕೆ ಒಂದು ರಾಜಕೀಯ ಪಕ್ಷಕ್ಕೆ ಜ್ವರ ಬಂತು”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts