More

    VIDEO| ಜಾಮಿಯಾ ವಿವಿ ವಿದ್ಯಾರ್ಥಿ-ಪೊಲೀಸರ ನಡುವಿನ ಗಲಾಟೆ ರಾಜಕೀಯ ಪ್ರೇರಿತವೇ? ಬಯಲಾದ ವಿಡಿಯೋದಲ್ಲೇನಿದೆ?

    ನವದೆಹಲಿ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿಸೆಂಬರ್​ 15ರಂದು ಪ್ರತಿಭಟನೆ ನಡೆಯುವ ವೇಳೆ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಉಂಟಾದ ಗಲಾಟೆ ರಾಜಕೀಯ ಪ್ರೇರಿತ ಎಂಬುದನ್ನು ಸೂಚಿಸುತ್ತಿದೆ.

    ವಿಡಿಯೋದಲ್ಲಿ ಏನಿದೆ?: ವಿಡಿಯೋವನ್ನು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳ ಒಂದು ಗುಂಪು ವಿಶ್ವವಿದ್ಯಾಲಯದ ಹಳೆಯ ಅಧ್ಯಯನ ಕೇಂದ್ರದಲ್ಲಿ ಕುಳಿತಿರುತ್ತಾರೆ. ತಕ್ಷಣ ಒಳ ನುಗ್ಗುವ ಪೊಲೀಸ್​ ಪೇದೆಗಳು ಲಾಠಿ ಮೂಲಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಾರೆ. ಪೊಲೀಸರ ಆಗಮನಕ್ಕೂ ಮುನ್ನವೇ ಅಧ್ಯಯನ ಕೇಂದ್ರದ ಒಳಗೆ ಗದ್ದಲ ಉಂಟಾಗಿರುತ್ತದೆ.

    ಈ ವಿಡಿಯೋದಿಂದ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತನ್ನಷ್ಟಕ್ಕೆ ತಾನೇ ಅಂತರ ಕಾಯ್ದುಕೊಂಡಿದ್ದು, ವಿಡಿಯೋ ವಿದ್ಯಾರ್ಥಿಗಳಿಂದ ಅಪ್​ಲೋಡ್​ ಆಗಿದೆ ಎಂದು ಹೇಳಿ ಸುಮ್ಮನಾಗಿದೆ.

    ವಿಡಿಯೋ ಹೊರಬರುತ್ತಲೇ ಸರಣಿ ಟ್ವೀಟ್​ ಮಾಡಿರುವ ಬಿಜೆಪಿ ಮಾಹಿತಿ ಕೇಂದ್ರದ ಉಸ್ತುವಾರಿ ಅಮಿತ್​ ಮಾಳವೀಯ, ವಿಡಿಯೋದಿಂದ ವಿದ್ಯಾರ್ಥಿಗಳೇ ಅಂತರ ಕಾಯ್ದುಕೊಂಡಿದ್ದಾರೆ. ವಿದ್ಯಾರ್ಥಿಗಳಯ ಲೈಬ್ರರಿ ಒಳಗೆ ಮಾಸ್ಟ್​ ಧರಿಸಿ ಬಂದಿದ್ದಾರೆ. ಪುಸ್ತಕವನ್ನು ಮುಚ್ಚಿ ಓದುತ್ತಿದ್ದಾರೆ. ಅಧ್ಯಯನ ಕಡೆಗೆ ಗಮನ ನೀಡಿದೇ ಏನು ನಡೆಯುತ್ತದೆ ಎಂಬ ಆತಂಕದಿಂದ ಪ್ರವೇಶ ದ್ವಾರದ ಕಡೆ ನೋಡುತ್ತಿದ್ದಾರೆ. ಇದನೆಲ್ಲಾ ನೋಡಿದರೆ ಪೊಲೀಸರ ಮೇಲೆ ಕಲ್ಲು ತೂರಿದ ಜಾಮಿಯಾ ದಂಗೆಕೋರರು ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿರಬಹುದೇ? ಎಂದು ಪ್ರಶ್ನಿಸಿದ್ದಾರೆ.

    ಇತ್ತ ಪೊಲೀಸರ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್​ ಇದೊಂದು ಸಾಕ್ಷಿಯಾಗಿದೆ. ಶಸ್ತ್ರಾಸ್ತ್ರವಿಲ್ಲದ ವಿದ್ಯಾರ್ಥಿಗಳ ಮೇಲೆ ಪೊಲೀಸರ ಕ್ರೌರ್ಯ ಇದಾಗಿದೆ. ಲೈಬ್ರರಿಗೆ ತೆರಳುತ್ತಿರುವ ಪ್ರತಿಭಟನಕಾರರನ್ನು ಗುರಿಯಾಗಿರಿಸಿ ದಾಳಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ದೆಹಲಿ ಪೊಲೀಸರು ಇದನ್ನು ಅಲ್ಲಗೆಳೆದಿದ್ದು, ಕಲ್ಲು ತೂರಿದಾಗ ಅವರನ್ನು ಹಿಂಬಾಲಿಸಿ ಹೋದಾಗ ಲೈಬ್ರರಿ ಒಳಗೆ ತೆರಳಿದೆವು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts