VIDEO| ಆಸ್ಟ್ರೇಲಿಯಾದಲ್ಲಿ ಫುಟ್‌ಬಾಲ್ ಪಂದ್ಯಕ್ಕೆ ಕಾಂಗರೂ ಅಡಚಣೆ!

blank

ಮೆಲ್ಬೋರ್ನ್: ಕ್ರೀಡಾ ಚಟುವಟುಟಿಕೆಗಳಿಗೆ ಮಳೆ, ಮಂದಬೆಳಕು ಮತ್ತಿತರ ಪ್ರತಿಕೂಲ ಹವಾಮಾನಗಳಿಂದ ಅಡಚಣೆಯಾಗುವುದು ಸಾಮಾನ್ಯ. ಕೆಲವೊಮ್ಮೆ ಪ್ರೇಕ್ಷಕರು ಕ್ರೀಡಾಂಗಣಕ್ಕೆ ನುಗ್ಗಿ ಪಂದ್ಯಗಳಿಗೆ ಅಡ್ಡಿ ಪಡಿಸುತ್ತಾರೆ. ಆದರೆ ಈಗ ಕರೊನಾ ಹಾವಳಿಯಿಂದಾಗಿ ಬಹುತೇಕ ಎಲ್ಲ ಕ್ರೀಡಾಸ್ಪರ್ಧೆಗಳು ಖಾಲಿ ಕ್ರೀಡಾಂಗಣಗಳಲ್ಲೇ ನಡೆಯುತ್ತಿವೆ. ಈ ನಡುವೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ನಡೆದ ಫುಟ್‌ಬಾಲ್ ಪಂದ್ಯವೊಂದಕ್ಕೆ ಅನಿರೀಕ್ಷಿತವಾಗಿ ಅಡಚಣೆ ಉಂಟಾಗಿದೆ. ಇದಕ್ಕೆ ಕಾರಣ ಕಾಂಗರೂಗಳು ಮೈದಾನಕ್ಕೆ ನುಗ್ಗಿದ್ದು!

blank

ಇದನ್ನೂ ಓದಿ: ಇಂಗ್ಲೆಂಡ್​ ವೇಗಿ ಜೋಫ್ರಾ ಆರ್ಚರ್ ನಿಯಮ ಉಲ್ಲಂಘಿಸಲು ಗರ್ಲ್​ಫ್ರೆಂಡ್​ ಕಾರಣ?

ಕಮ್ಯುನಿಟಿ ಫುಟ್‌ಬಾಲ್ ಪಂದ್ಯದ ವೇಳೆ ಕಾಂಗರೂಗಳು ಮೈದಾನಕ್ಕೆ ನುಗ್ಗಿದ ದೃಶ್ಯಗಳು ಕ್ಯಾಮರಾದಲ್ಲೂ ಸೆರೆಯಾಗಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ಆಸ್ಟ್ರೇಲಿಯನ್ ಫುಟ್‌ಬಾಲ್ ಲೀಗ್‌ನ ಟ್ವಿಟರ್ ಖಾತೆಯಲ್ಲೂ ಈ ದೃಶ್ಯದ ವಿಡಿಯೋ ಪ್ರಕಟಗೊಂಡಿದ್ದು, ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಈಗ ನಿರುದ್ಯೋಗಿ!

Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank