More

    VIDEO| ಇರಾನ್​ ಸೇನಾ ನಾಯಕ ಹತ್ಯೆಗೆ ಸಂಬಂಧಿಸಿದ ಡ್ರೋನ್​ ದಾಳಿ ವಿಡಿಯೋ ಹಿಂದಿನ ಅಸಲಿಯತ್ತೇ ಬೇರೆ

    ನವದೆಹಲಿ: ಅಮೆರಿಕ ಸೇನೆ ನಡೆಸಿದ ಡ್ರೋನ್​ ದಾಳಿಯಲ್ಲಿ ಇರಾನಿಯನ್​ ಸೇನಾ ನಾಯಕ ಜನರಲ್​ ಖಾಸಿಮ್​ ಸುಲೈಮಾನಿ​ ಹತರಾಗಿದ್ದು, ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಕದನ ಕಾರ್ಮೋಡ ಆವರಿಸಿದೆ. ಇದರ ಬೆನ್ನಲ್ಲೇ ಸಾಕಷ್ಟು ನಕಲಿ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಅದರ ಭಾಗವಾಗಿ ಅಮೆರಿಕ ನಡೆಸಿದ ಡ್ರೋನ್​ ದಾಳಿ ವಿಡಿಯೋ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನಕಲಿ ಎಂಬುದು ಫ್ಯಾಕ್ಟ್​ಚೆಕ್​ನಲ್ಲಿ ಪತ್ತೆಯಾಗಿದೆ.

    ಜಾಲತಾಣದಲ್ಲಿ ಹರಿದಾಡುತ್ತಿರುವ ಡ್ರೋನ್​ ದಾಳಿಯ ವಿಡಿಯೋ ನಕಲಿಯಾಗಿದ್ದು, ಎಸಿ-130 ಗನ್​ಶಿಪ್​ ಸಿಮುಲೇಟರ್​: ಸ್ಪೆಷಲ್​ ಆಪರೇಷನ್​ ಸ್ಕ್ವಾಡ್ರನ್( AC-130 Gunship Simulator: Special Ops Squadron) ಎಂಬುದು ಗೇಮ್​ನ ಹೆಸರಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಫುಟೇಜ್​ ಅನ್ನು ಗೇಮ್​ ಡೆವಲಪರ್​ ಬೈಟ್​ ಕನ್ವೇಯರ್​ ಸ್ಟುಡಿಯೋ ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿದ್ದು, ಇದನ್ನು ಅಮೆರಿಕ ಡ್ರೋನ್​ ದಾಳಿಗೆ ತಳುಕು ಹಾಕಲಾಗಿದೆ.

    ನಕಲಿ ವಿಡಿಯೋದಲ್ಲಿ ಬೆಂಗಾವಲು ವಾಹನಗಳ ಮೇಲೆ ಗುಂಡಿನ ದಾಳಿ ನಡೆಸುವ ಏರಿಯಲ್​ ದೃಶ್ಯ ಕಾಣುತ್ತದೆ. ಒಂದರ ಹಿಂದೆ ಒಂದು ಕಾರು ಗುಂಡಿನ ದಾಳಿಯಿಂದ ಸ್ಫೋಟಗೊಳ್ಳುವುದನ್ನು ನೋಡಬಹುದಾಗಿದೆ. ಅಲ್ಲದೆ, ರೆಡಿಯೋ ಮೂಲಕ ನಿರ್ದೇಶನ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ಇದೇ ವಿಡಿಯೋವನ್ನು ಹಲವರು ತಮ್ಮ ಟ್ವಿಟರ್​ ಖಾತೆಗಳಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದಾರೆ.

    ಇದೇ ವಿಡಿಯೋವನ್ನು ಫ್ಯಾಕ್ಟ್​ಚೆಕ್​ ವೆಬ್​ಸೈಟ್​ ಬೂಮ್​ ವಾಟ್ಸ್​ಆ್ಯಪ್​ಗೆ ಕಳುಹಿಸಲಾಗಿತ್ತು. ವಿಡಿಯೋಗೆ ಸುಲೈಮಾನಿ ಮೇಲೆ ಡ್ರೋನ್​ ದಾಳಿ ಎಂಬ ಅಡಿಬರಹವನ್ನು ನೀಡಲಾಗಿತ್ತು. ಅಲ್ಲದೆ ಇದೇ ವಿಡಿಯೋ ಫೇಸ್​ಬುಕ್​ ಮತ್ತು ಟ್ವಿಟರ್​ನಲ್ಲಿ ಹರಿದಾಡಿರುವುದು ಬೂಮ್​ ಗಮನಕ್ಕೆ ಬಂದ ತಕ್ಷಣ ಎಷ್ಟು ಸತ್ಯವೆಂದು ತಿಳಿಯಲು ಫ್ಯಾಕ್ಟ್​ಚೆಕ್​ ನಡೆಸಿದಾಗ ಅಸಲಿಯತ್ತು ಬಯಲಾಗಿದೆ.

    ಗೂಗಲ್​ ರಿವರ್ಸ್​ ಇಮೇಜ್​ನಲ್ಲಿ ನೋಡಿದಾಗ ಬೈಟ್​ ಕನ್ವೇಯರ್​ ಸ್ಟುಡಿಯೋ ಯೂಟ್ಯೂಬ್​ನಲ್ಲಿ ಈ ಸಂಬಂಧ ವಿಡಿಯೋ ಅಪ್​ಲೋಡ್​ ಆಗಿರುವುದು ಗಮನಕ್ಕೆ ಬಂತು. ಈ ವಿಡಿಯೋವನ್ನು 2015 ಮೇ 25ರಂದು ಅಪ್​ಲೋಡ್​ ಮಾಡಲಾಗಿದ್ದು, ಸುಲೈಮಾನ್​ ಹತ್ಯೆಗೂ 4 ನಾಲ್ಕು ವರ್ಷ ಹಳೆಯದಾಗಿದೆ. ಇದೊಂದು ಗೇಮ್​ ದೃಷ್ಟಿಯಿಂದ ಮಾಡಿರುವ ವಿಡಿಯೋ ಆಗಿದೆ. ಗೇಮ್​ ಬಗ್ಗೆ ತಿಳಿಸಲು ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಅಲ್ಲದೆ, ಇನ್ನು ಕಾರ್ಯರೂಪದಲ್ಲಿದೆ. ಎಲ್ಲ ವಿಷಯಗಳು ಬದಲಾಗಲಿದೆ ಎಂದು ವಿಡಿಯೋ ಕಂಟೆಂಟ್​ನಲ್ಲಿ ಬರೆಯಲಾಗಿತ್ತು.

    ಈ ಹಿಂದೆ ರಷ್ಯಾ ರಕ್ಷಣಾ ಪಡೆ ಮಾಡಿದ ದೊಡ್ಡ ಪ್ರಮಾದಿಂದಲೂ ಈ ವಿಡಿಯೋ ಬೆಳಕಿಗೆ ಬಂದಿತ್ತು. ಅಮೆರಿಕವು ಉಗ್ರ ಸಂಘಟನೆ ಇಸ್ಲಾಮಿಕ್​ ಸ್ಟೇಟ್​ಗೆ ಬೆಂಬಲ ನೀಡುತ್ತಿದೆ ಎಂದು ಹೇಳಿ ವಿಡಿಯೋವನ್ನು ಸಾಕ್ಷಿಯನ್ನಾಗಿ ಶೇರ್​ ಮಾಡಿ 2017ರಲ್ಲಿ ರಷ್ಯಾ ಮುಖಭಂಗ ಅನುಭವಿಸಿತ್ತು. ಹೀಗಾಗಿ ಸುಲೆಮಾನ್​ ಹತ್ಯೆ ಹೆಸರಿನಲ್ಲಿ ಓಡಾಡುತ್ತಿರುವ ವಿಡಿಯೋ ನಕಲಿಯಾಗಿದೆ ಎಂದು ಫ್ಯಾಕ್ಟ್​ಚೆಕ್​ನಲ್ಲಿ ತಿಳಿದುಬಂದಿದೆ.

    ಅಂದಹಾಗೆ ಇರಾನ್​ನ​ ಬಾಗ್ದಾದ್​ ಏರ್​ಪೋರ್ಟ್​ನಲ್ಲಿ ಕಳೆದ ಶುಕ್ರವಾರ ಅಮೆರಿಕ ಸೇನಾ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್​ನ ಪ್ರಮುಖ ಕ್ಯೂಡ್ಸ್​ ಪೋರ್ಸ್​ನ ಮುಖ್ಯಸ್ಥ ಜನರಲ್​ ಕಾಸಿಂ ಸುಲೆಮಾನ್​ ಹತ್ಯೆಯಾಗಿದ್ದಾರೆ. ಇದರ ಬೆನ್ನಲ್ಲೇ ಬೆನ್ನಲ್ಲೇ ಇರಾನ್​ ಸುಪ್ರೀಂ ಲೀಡರ್​ ಅಯತೊಲ್ಲಾ ಅಲಿ ಖಮೇನಿ ಅಮೆರಿಕಗೆ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯು ಜಗತ್ತನ್ನು ಆತಂಕಕ್ಕೆ ದೂಡಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕದನ ಭೀತಿ ಶುರುವಾಗಿದೆ. ಅಮೆರಿಕ ಮತ್ತು ಇರಾನ್​ ನಡುವಿನ ತಿಕ್ಕಾಟ ಭಾರತದ ಮೇಲೂ ಪರಿಣಾಮ ಬೀರಿದೆ. ಈಗಾಗಲೇ ಇರಾನ್​ನಿಂದ ಅಮೆರಿಕ ಸೇನೆಯನ್ನು ಗುರಿಯಾಗಿರಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. (ಏಜೆನ್ಸೀಸ್​)

    Iran

    American drone attack on Soleimani of Iran…

    TV36 Channel ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಜನವರಿ 6, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts