More

    VIDEO | ಸ್ಪೆಲ್ಲಿಂಗ್ ಸರಿಯಾಗಿದೆ….. ಆದರೆ ಪದ ಯಾವುದು ?!

    ನವದೆಹಲಿ: ಅಂತರಾಷ್ಟ್ರೀಯ ಭಾಷೆ ಎಂಬ ಹೆಸರಲ್ಲಿ ಇಂಗ್ಲೀಷ್ ಎಲ್ಲೆಡೆ ಹರಡಿದೆ. ಆದರೆ ಇಂಗ್ಲೀಷ್ ಕಲಿಯೋದು ಎಷ್ಟೋ ಜನರಿಗೆ ದೊಡ್ಡ ಸವಾಲು. ಇದನ್ನೇ ನಿರೂಪಿಸುವ ಒಂದು ಮಗುವಿನ ವೀಡಿಯೋ ತಿಳಿಹಾಸ್ಯದ ವಸ್ತುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.

    ನಗರ ಪ್ರದೇಶಗಳಲ್ಲಿ ಇಂಗ್ಲೀಷಿನಲ್ಲೇ ಮಾತಾಡುವ ಮಾಡರ್ನ್​ ಮಕ್ಕಳು ಒಂದೆಡೆಯಾದರೆ, ಇಂಗ್ಲೀಷಿನ ಬಳಕೆಯೇ ಇಲ್ಲದ ಗ್ರಾಮಾಂತರ ಪ್ರದೇಶಗಳಲ್ಲಿ ಅದನ್ನು ಕಲಿಯಲು ಹರಸಾಹಸ ಪಡುವ ಮಕ್ಕಳು ಮತ್ತೊಂದೆಡೆ. ಆದರೆ ಎಲ್ಲ ಪಾಲಕರಿಗೂ ತಮ್ಮ ಮಕ್ಕಳು ಇಂಗ್ಲೀಷು ಓದಿ ಬರೆದು ಮಾಡುವುದನ್ನು ನೋಡಲು ಬಲು ಇಷ್ಟ. ಈ ರೀತಿಯಾಗಿ ತಮ್ಮ ಮಗನ ಇಂಗ್ಲೀಷ್ ಕಲಿಕೆಯನ್ನು ಓರೆಗೆ ಹಚ್ಚಿದ ಪಾಲಕರ ಪಾಡನ್ನು ಈ ವೀಡಿಯೋದಲ್ಲಿ ಕಾಣಬಹುದು.

    ಪುಟ್ಟ ಹುಡುಗನೊಬ್ಬ ಜಾರಿನ ಮೇಲಿರುವ ಇಂಗ್ಲೀಷ್ ಅಕ್ಷರಗಳನ್ನು ‘ಎನ್ ಯು ಟಿ ಇ ಎಲ್ ಎಲ್ ಎ’ ಅಂತ ತಪ್ಪಿಲ್ಲದೆ ಓದುತ್ತಾನೆ. ಆದರೆ ಆ ನಂತರ ಆ ಪದವನ್ನು ಹೇಳು ಎಂದಾಗ ತನಗೆ ಗೊತ್ತಿರುವ ‘ಪೀನಟ್ ಬಟರ್’ ಹೆಸರನ್ನು ಹೇಳುತ್ತಾನೆ. ಶಕೀರಾ ಬೌರ್ನ್ ಎಂಬ ಲೇಖಕಿ ತನ್ನ ಟ್ವಿಟರ್ ಖಾತೆಯಲ್ಲಿ ಸ್ಪೆಲ್ಲಿಂಗ್ ಸರಿಯಾಗಿ ಓದಿದರೂ, ಹೆಸರನ್ನು ಮಾತ್ರ ಬೇರೆಯೇ ಹೇಳುವ ಈ ಫನ್ನಿ ವೀಡಿಯೋವನ್ನು ಶೇರ್ ಮಾಡಿದ್ದಾರೆ. “ನಗುವುದನ್ನು ನಿಲ್ಲಿಸಲಾಗುತ್ತಿಲ್ಲ…. ಈ ಹುಡುಗನ ಆತ್ಮವಿಶ್ವಾಸ ಚೆನ್ನಾಗಿದೆ..” ಎಂದು ಕಾಮೆಂಟ್​ ಮಾಡಿದ್ದಾರೆ.

    ಎರಡುಮೂರು ದಿನಗಳಲ್ಲೇ ನಾಲ್ಕು ಮಿಲಿಯನ್ ವೀಕ್ಷಣೆಗಳನ್ನು ಪಡೆದಿರುವ ಈ ವೀಡಿಯೋ ತುಣುಕಿಗೆ ಸಾವಿರಾರು ಜನರು ಲೈಕ್​ಗಳ ಸುರಿಮಳೆಗರೆದಿದ್ದಾರೆ. ಮಗುವಿನ ಮುಗ್ಧತೆಯನ್ನು ಸವಿದಿರುವ ಜನರು ಒಂದು ಲಕ್ಷಕ್ಕೂ ಮೀರಿದ ಕಾಮೆಂಟುಗಳನ್ನು ಹಾಕಿದ್ದಾರೆ.(ಏಜೆನ್ಸೀಸ್)

    VIDEO | “ವೆಲ್​ಕಮ್​ ಟು ದ ಕ್ಲಬ್, ಅಮೆರಿಕ…!”

    VIDEO | ಲ್ಯಾಂಡ್ ಕ್ರೂಸರ್ ಚಲಾಯಿಸಿದ ಐದು ವರ್ಷದ ಬಾಲಕ; ಕಾಲೆಟುಕದಿದ್ದರೂ ಕೈಗೆ ಸ್ಟೇರಿಂಗ್​!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts