More

    ನೆರೆ ಸಂತ್ರಸ್ತರ ನೋವಿಗೆ ಸರ್ಕಾರದ ಸ್ಪಂದನೆ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿಕೆ

    ದಾವಣಗೆರೆ: ರಾಜ್ಯದ ನೆರೆ ಸಂತ್ರಸ್ತರ ನೋವಿಗೆ ಸರ್ಕಾರ ಮಿಡಿದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜ. 1 ರಿಂದ 3 ರವರೆಗೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿರುವ ಸರ್ಕಾರದ ನೂರು ದಿನಗಳ ಸಾಧನೆ ಮತ್ತು ನೆರೆ ಸಂತ್ರಸ್ತರಿಗೆ ಕೈಗೊಂಡ ಪರಿಹಾರ ಕಾರ್ಯಕ್ರಮಗಳನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

    ರಾಜ್ಯದ 103 ತಾಲೂಕುಗಳು ಪ್ರವಾಹಕ್ಕೆ ತುತ್ತಾಗಿದ್ದವು. ಅಂಥ ಪ್ರದೇಶಗಳಿಗೆ ಕೇಂದ್ರ ಸರ್ಕಾರ 1200 ಕೋಟಿ ರೂ., ರಾಜ್ಯ ಸರ್ಕಾರ 6,450 ಕೋಟಿ ರೂ. ಬಿಡುಗಡೆ ಮಾಡಿದೆ. ಪ್ರವಾಹದಿಂದ ಸಂಪರ್ಕ ಕಳೆದುಕೊಂಡಿದ್ದ 175 ರಸ್ತೆ ಹಾಗೂ ಸೇತುವೆಗಳ ಪೈಕಿ 142 ರಸ್ತೆಗಳನ್ನು ಮತ್ತೆ ನಿರ್ಮಿಸಲಾಗಿದೆ ಎಂದರು.

    ಬೆಳೆ ನಷ್ಟ ಅನುಭವಿಸಿದ್ದ ಲಾನುಭವಿಗಳ ಕುರಿತು ಪ್ರದರ್ಶನದಲ್ಲಿಟ್ಟಿರುವ ಛಾಯಾಚಿತ್ರಗಳು ಔಚಿತ್ಯಪೂರ್ಣವಾಗಿವೆ ಎಂದು ತಿಳಿಸಿದರು.
    ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದ ಸರ್ಕಾರದ ನೂರು ದಿನಗಳ ಸಾಧನೆ ಕುರಿತ ಕಿರು ಹೊತ್ತಿಗೆಯನ್ನು ಗಣ್ಯರು ಬಿಡುಗಡೆಗೊಳಿಸಿದರು.

    ಕೆಎಸ್‌ಆರ್‌ಟಿಸಿ ಡಿಸಿ ಸಿದ್ದೇಶ್ವರ್, ಜಿಪಂ ಪಿಆರ್‌ಇಡಿ ಇಂಜಿನಿಯರ್ ಪರಮೇಶ್ವರಪ್ಪ, ಪರಿಶಿಷ್ಟ ಜಾತಿ ನಿಗಮದ ವ್ಯವಸ್ಥಾಪಕ ಸುರೇಶ್ ರೆಡ್ಡಿ, ವಾರ್ತಾಧಿಕಾರಿ ಡಿ. ಅಶೋಕ್‌ಕುಮಾರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts