More

    ವೈಭವದ ಬಳ್ಳಾರಿ ಉತ್ಸವಕ್ಕೆ ದಿನಗಣನೆ – ಜಿಲ್ಲಾಧಿಕಾರಿ ಪವನ ಕುಮಾರ ಮಾಲಪಾಟಿ ಮಾಹಿತಿ

    ಬಳ್ಳಾರಿ: ಗಣಿನಾಡು ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಳ್ಳಾರಿ ಉತ್ಸವ ಆಚರಿಸಲು ದಿನಗಣನೆ ಆರಂಭಗೊಂಡಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪವನ ಕುಮಾರ ಮಾಲಪಾಟಿ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.21 ಹಾಗೂ 22 ರಂದು ನಗರದ ಮುನ್ಸಿಪಲ್ ಮೈದಾನದಲ್ಲಿ ಎರಡು ದಿನ ಉತ್ಸವ ಆಚರಿಸಲು ನಿರ್ಧರಿಸಲಾಗಿದ್ದು, ಈಗಾಗಲೇ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಜ.4ರಂದು ಉತ್ಸವದ ಲಾಂಛನ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ.5 ಉತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ, 10ರಂದು ಚಿತ್ರಕಲಾ ಶಿಬಿರ, 18ರಂದು ಮ್ಯಾರಥಾನ್ ಹಾಗೂ ಗಾಳಿಪಟ ಸ್ಪರ್ಧೆ, 19ರಂದು ಅಲಂಕೃತ ಎತ್ತಿನಗಾಡಿ ಮೆರವಣಿಗೆ, ವಿವಿಧ ವೃತ್ತಗಳಿಗೆ ದೀಪಾಲಂಕಾರ ಮಾಡಲಾಗುವುದು ಎಂದರು.

    ವಸಂತ ವೈಭವಕ್ಕೆ ಸಜ್ಜು: ನಗರದಲ್ಲಿ ವಸಂತ ವೈಭವವನ್ನು ಆಯೋಜಿಸಲಾಗಿದ್ದು, ಮೈಸೂರು ದಸರಾ ರೀತಿಯಲ್ಲಿ ಆನೆ ಅಂಬಾರಿ, ವಿಶೇಷ ಅಶ್ವದಳ ಹಾಗೂ 300 ಕಲಾ ತಂಡಗಳ ಬೃಹತ್ ಮೆರವಣಿಗೆಯನ್ನು ಜ.20ರಂದು ಮಧ್ಯಾಹ್ನ 3 ಗಂಟೆಗೆ ಆಯೋಜಿಸಲಾಗಿದೆ. ರಂಗೋಲಿ, ಮೆಹಂದಿ ಸ್ಪರ್ಧೆ ಹಾಗೂ ಪ್ರದರ್ಶನ, 21ರಂದು ಸಾಹಸ ಕ್ರೀಡೆ ಹಮ್ಮಿಕೊಳ್ಳಲಾಗಿದೆ. ಮರಳು ಶಿಲ್ಪಕಲೆ, ಗ್ರಾಮೀಣ ಕ್ರೀಡೆಗಳಾದ ಕುಸ್ತಿ, ಕಬಡ್ಡಿ ಹಾಗೂ ಮಲ್ಲಕಂಬ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮತ್ಸೃ ಮೇಳ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ ಹಾಗೂ ಶ್ವಾನ ಪ್ರದರ್ಶನ ಆಯೋಜಿಸಲಾಗಿದೆ.

    ಎರಡು ದಿನ ಮನರಂಜನೆ : ಉತ್ಸವದ ಅಂಗವಾಗಿ ಜ.21 ಹಾಗೂ 22 ರಂದು ಎರಡು ದಿನ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ,ಟಾಲಿವುಡ್ ಗಾಯಕಿ ಮಂಗ್ಲಿ, ಎಂ.ಡಿ.ಪಲ್ಲವಿ, ಬಾಲಿವುಡ್ ಗಾಯಕಿ ಸುನಿಧಿ ಚವ್ಹಾಣ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

    ಭವನ ಲೋಕಾರ್ಪಣೆ : ಜಿಲ್ಲೆಯ ಜನರ ಹಲವು ವರ್ಷಗಳ ಕನಸು ನನಸಾಗಿದ್ದು, 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಜಿಲ್ಲಾಡಳಿತ ಭವನ ಜ.4ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಲಿದ್ದಾರೆ.

    ಜಿಲ್ಲಾಸ್ಪತ್ರೆಯಲ್ಲಿ 100 ಬೆಡ್‌ನ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಸಿಟಿ ಸ್ಕಾೃನಿಂಗ್ ಸೆಂಟರ್, ಎಂಆರ್‌ಐ ಸ್ಕಾೃನಿಂಗ್, ಎಕ್ಸರೇ ಕೇಂದ್ರ, ರೆಡ್‌ಕ್ರಾಸ್ ಸಂಸ್ಥೆಯ ರಕ್ತನಿಧಿ ಕೇಂದ್ರ, ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾೃಕ್ ನಿರ್ಮಾಣ ಸೇರಿದಂತೆ ಒಟ್ಟು 120 ಕೋಟಿ ರೂ. ವೆಚ್ಚದಲ್ಲಿ ನಡೆದಿರುವ ಕಾಮಗಾರಿಗಳನ್ನು ಸಿಎಂ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಅಲ್ಲದೆ 500 ಕೋಟಿ ರೂ. ವೆಚ್ಚದಲ್ಲಿ ನಡೆಯಬೇಕಾದ ವಿವಿಧ ಕಾಮಗಾರಿಗಳ ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ ಎಂದರು.

    ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿ, ಡಿಡಿಎಲ್‌ಆರ್ ಕಚೇರಿ ಹೊರತು ಪಡಿಸಿ ಒಟ್ಟು 11 ಇಲಾಖೆಗಳ ಕಚೇರಿಯನ್ನು ಜಿಲ್ಲಾಡಳಿತ ಭನವಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದರು.
    ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಪಾಲಿಕೆ ಆಯುಕ್ತ ರುದ್ರೇಶ್, ಪ್ರೊಬೇಷನರಿ ಐಎಎಸ್ ರೂಪಿಂದರ್ ಕೌರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts