More

    ಪಶುವೈದ್ಯರು ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡಲಿ

    ಬೆಳಗಾವಿ: ಪಶುವೈದ್ಯರು ನಗರಕ್ಕೆ ಸೀಮಿತಗೊಳ್ಳದೇ ಹಳ್ಳಿಗಳಿಗೆ ತೆರಳಿ ಜಾನುವಾರಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡಬೇಕು. ಸಾಕು ಪ್ರಾಣಿಗಳು ಕಾಯಿಲೆಗಳಿಗೆ ತುತ್ತಾದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸಲಹೆ ನೀಡಿದರು.

    ನಗರದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಗೋಕುಲ ಮಿಷನ್ ಅಡಿಯಲ್ಲಿ ಕೃತಕ ಗರ್ಭಧಾರಣೆಯ ಮೂಲಕ ರಾಸುಗಳ ತಳಿ ಉನ್ನತೀಕರಣ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

    ಹೈನುಗಾರಿಕೆ ಹೆಚ್ಚಿಸಲು, ಜಾನುವಾರುಗಳ ಸಂತತಿ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪಶುವೈದ್ಯರು ತಮ್ಮ ಸೇವೆಯನ್ನು ಗ್ರಾಮೀಣ ಪ್ರದೇಶಗಳಿಗೆ ಮೀಸಲಿಡಬೇಕು. ಗೋವು ಸಂಪನ್ಮೂಲ ಹೆಚ್ಚಿಸಲು ಮತ್ತು ಉತ್ಪನ್ನ ವೃದ್ಧಿಸುವ ಆಶಯದೊಂದಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಗೋಕುಲ ಮಿಷನ್ ಸ್ಥಾಪನೆ ಮಾಡಿದೆ. ತನ್ಮೂಲಕ ರಾಸುಗಳ ಸಂಖ್ಯೆ ಹೆಚ್ಚಿಸಿ ರೈತರ ಆದಾಯ ವೃದ್ಧಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ ಎಂದು ಸಚಿವ ಅಂಗಡಿ ತಿಳಿಸಿದರು.

    ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಅಶೋಕ ಕೊಳ್ಳ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಎ.ಕೆ. ಚಂದ್ರಶೇಖರ, ಸಹಾಯಕ ನಿರ್ದೇಶಕ ಡಾ. ಶಶಿಧರ ನಾಡಗೌಡ, ಜಿಲ್ಲಾ ಸಂಯೋಜಕ ಎಚ್.ವೈ. ಯರಗಟ್ಟಿ, ಸಹಾಯಕ ನಿರ್ದೇಶಕ ದೇವೇಂದ್ರ ಲಮಾಣಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts