More

    ಮೌಲ್ಯಾಧಾರಿತ ಪತ್ರಿಕೋದ್ಯಮ ಅಗತ್ಯ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರತಿಪಾದನೆ

    ಉಡುಪಿ: ಮೌಲ್ಯಾಧಾರಿತ ಪತ್ರಿಕೋದ್ಯಮ ಇಂದಿನ ಅಗತ್ಯ. ತಂತ್ರಜ್ಞಾನಗಳ ಬೆಳವಣಿಗೆಯಿಂದ ಎದುರಾಗಿರುವ ಸುಳ್ಳು ಸುದ್ದಿಗಳ ಭರಾಟೆಯ ಮಧ್ಯೆ ವಾಸ್ತವವನ್ನು ಜನರ ಮುಂದಿಡುವುದು ಸವಾಲಿನ ಕಾರ್ಯ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.
    ಮಾಹೆ ವಿವಿಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್(ಎಂಐಸಿ)ವತಿಯಿಂದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ 6ನೇ ಎಂ.ವಿ.ಕಾಮತ್ ದತ್ತಿ ಉಪನ್ಯಾಸದಲ್ಲಿ ‘ಪತ್ರಿಕೋದ್ಯಮ: ಭೂತ, ವರ್ತಮಾನ ಮತ್ತು ಭವಿಷ್ಯ’ ಎಂಬ ವಿಷಯದಲ್ಲಿ ವರ್ಚುವಲ್ ವೇದಿಕೆಯಲ್ಲಿ ಅವರು ಮಾತನಾಡಿದರು.

    ಪುರಾವೆ ಸಹಿತ ವಿಶ್ಲೇಷಣಾತ್ಮಕ ವರದಿಗಳ ಮೂಲಕ ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಂತೆ ಇರುವುದು ಮಾಧ್ಯಮಗಳ ಜವಾಬ್ದಾರಿ. ಆದರೆ ಪ್ರಸಕ್ತ ಚಾಲನೆಯಲ್ಲಿರುವ ಪತ್ರಿಕೋದ್ಯಮ ನೈತಿಕ ನಿರೀಕ್ಷೆಗಳನ್ನು ಮೀರುತ್ತಿದೆ. ಸುದ್ದಿ ಮತ್ತು ಸುಳ್ಳು ಸುದ್ದಿಗಳ ನಡುವಿನ ಗೆರೆ ಅತ್ಯಂತ ತೆಳುವಾಗಿದೆ. ಕೆಲವು ವರದಿಗಳು ಅತಿರಂಜಿತವಾಗಿ ಬಿತ್ತರವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

    ಲಾಭ ಗಳಿಸುವ ಉದ್ದೇಶದಿಂದ ಕೆಲವು ಅಜೆಂಡಾಗಳಿಗೆ ಮಹತ್ವ ನೀಡಲಾಗುತ್ತದೆ. ಇದರಿಂದ ಪತ್ರಿಕೆಗಳ ಮೌಲ್ಯಗಳು ಕುಸಿಯುತ್ತವೆ. ಪತ್ರಿಕಾ ಸ್ವಾತಂತ್ರೃ ಎಂಬುದು ಅನಿವಾರ್ಯತೆಯಾಗಿದೆ. ಆದರೆ ಈ ಸ್ವಾತಂತ್ರೃದ ನಡುವೆ ಜವಾಬ್ದಾರಿ ಇದೆ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು. ಉತ್ತರದಾಯಿತ್ವ ಇಲ್ಲದೆ ಕೆಲವು ಪತ್ರಿಕೆಗಳು ಹಾಗೂ ಸುದ್ದಿ ಸಂಸ್ಥೆಗಳು ಪ್ರಾರಂಭವಾಗುತ್ತಿರುವುದು ಪತ್ರಿಕೋದ್ಯಮದ ಮೌಲ್ಯಗಳನ್ನು ಗಾಳಿಗೆ ತೂರಲು ಮುಖ್ಯ ಕಾರಣ ಎಂದರು.

    ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿದರು. ಎಂಐಸಿ ನಿರ್ದೇಶಕಿ ಡಾ.ಪದ್ಮಾರಾಣಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಮಂಜುಳಾ ವೆಂಕಟ ರಾಘವನ್ ಉಪರಾಷ್ಟ್ರಪತಿಗಳನ್ನು ಪರಿಚಯಿಸಿದರು. ಶ್ರುತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನುಪಾ ಲೂವಿಸ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts