More

    ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕನ್ನಡಿಗ ವೆಂಕಟೇಶ್ ಪ್ರಸಾದ್

    ನವದೆಹಲಿ: ಹಾಲಿ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿ ಕನ್ನಡಿಗ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, 3 ಬಾರಿಯ ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಥ್ರೋಪಟು ದೇವೇಂದ್ರ ಜಜಾರಿಯಾ ಮತ್ತು ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಎಲ್. ಸರಿತಾ ದೇವಿ ಸ್ಥಾನ ಪಡೆದಿದ್ದಾರೆ.

    ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮುಕುಂದಕಂ ಶರ್ಮ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಅಂಜುಂ ಚೋಪ್ರಾ ಮತ್ತು ಮಾಜಿ ಶೂಟರ್ ಅಂಜಲಿ ಭಾಗ್ವತ್, ಹಾಕಿ ಕೋಚ್ ಬಲದೇವ್ ಸಿಂಗ್, ಸಾಯ್ ನಿರ್ದೇಶಕ ಸಂದೀಪ್ ಪ್ರಧಾನ್, ಹಿರಿಯ ಪತ್ರಕರ್ತರಾದ ವಿಜಯ್ ಲೋಕಪಲ್ಲಿ ಮತ್ತು ವಿಕ್ರಾಂತ್ ಗುಪ್ತಾ ಕೂಡ ಸಮಿತಿಯಲ್ಲಿದ್ದಾರೆ.

    ಸಾಂಪ್ರದಾಯಿಕವಾಗಿ ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದೇ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಆದರೆ ಈ ಬಾರಿ ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಸಾಧಕರನ್ನೂ ಪ್ರಶಸ್ತಿಗೆ ಪರಿಗಣಿಸುವ ಹಿನ್ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ವಿಳಂಬಗೊಳಿಸಲಾಗಿತ್ತು. ಮುಂದಿನ ಕೆಲದಿನಗಳಲ್ಲಿ ಸಮಿತಿ ಸಭೆ ಸೇರಿ ಪ್ರಶಸ್ತಿಗೆ ಅರ್ಹರನ್ನು ಆರಿಸುವ ನಿರೀಕ್ಷೆ ಇದೆ.

    ಈ ಬಾರಿ ಭಾರತದ ಕ್ರೀಡಾಪಟುಗಳು ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಎರಡರಲ್ಲೂ ಸರ್ವಶ್ರೇಷ್ಠ ನಿರ್ವಹಣೆ ತೋರಿದ್ದು, ಕ್ರಮವಾಗಿ ದಾಖಲೆಯ 7 ಮತ್ತು 19 ಪದಕ ಜಯಿಸಿತ್ತು. ಇದರಿಂದಾಗಿ ಈ ಬಾರಿ ದಾಖಲೆಯ ಸಂಖ್ಯೆಯ ಕ್ರೀಡಾಪಟುಗಳಿಗೆ ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ ಮತ್ತು ಅರ್ಜುನ ಪ್ರಶಸ್ತಿಗಳು ಒಲಿಯುವ ನಿರೀಕ್ಷೆ ಇದೆ. ಖೇಲ್‌ರತ್ನ 25 ಲಕ್ಷ ರೂ. ಮತ್ತು ಅರ್ಜುನ 15 ಲಕ್ಷ ರೂ. ಬಹುಮಾನ ಮೊತ್ತ ಹೊಂದಿದೆ.

    ಈ ಬಾರಿ ಉದ್ದೀಪನ ಕಳಂಕಿತರಿಗೂ ಪ್ರಶಸ್ತಿ
    ಉದ್ದೀಪನ ಕಳಂಕಿತ ಕ್ರೀಡಾಪಟುಗಳು ಮತ್ತು ಕೋಚ್‌ಗಳನ್ನೂ ಈ ಬಾರಿ ರಾಷ್ಟ್ರೀಯ ಪ್ರಶಸ್ತಿಗಳಿಗೆ ಪರಿಗಣಿಸಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ. ಆದರೆ ಈ ಕಳಂಕಿತರು ನಿಷೇಧದ ಅವಧಿ ಪೂರೈಸಿರಬೇಕು ಎಂಬ ಷರುತ್ತು ವಿಧಿಸಿದೆ. ಹಾಲಿ ಉದ್ದೀಪನ ಪ್ರಕರಣದ ಆರೋಪ-ವಿಚಾರಣೆ ಎದುರಿಸುತ್ತಿರುವವರು ಮತ್ತು ನಿಷೇಧ ಶಿಕ್ಷೆ ಅನುಭವಿಸುತ್ತಿರುವವರು ಪ್ರಶಸ್ತಿಗೆ ಪರಿಗಣಿಸಲ್ಪಡುವುದಿಲ್ಲ. ಇದರಿಂದಾಗಿ ಬಾಕ್ಸರ್ ಅಮಿತ್ ಪಾಂಗಲ್ ಮುಂತಾದ ಉದ್ದೀಪನ ಕಳಂಕಿತರೂ ಈ ಬಾರಿ ಪ್ರಶಸ್ತಿ ಪುರಸ್ಕೃತರಾಗುವ ಅವಕಾಶ ಹೊಂದಿದ್ದಾರೆ. ಕಳೆದ ವರ್ಷದವರೆಗೆ ಉದ್ದೀಪನ ಕಳಂಕಿತರನ್ನು ಯಾವುದೇ ಪ್ರಶಸ್ತಿಗೆ ಪರಿಗಣಿಸಲಾಗುತ್ತಿರಲಿಲ್ಲ.

    ಹಿಂದಿ ಮಾತನಾಡುವ ಪ್ರದೇಶದಿಂದಲೇ ಐಪಿಎಲ್‌ಗೆ 2 ಹೊಸ ತಂಡ, ಬಿಸಿಸಿಐ ಬಯಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts