More

    3ನೇ ಬಾರಿ ಪ್ರಶಸ್ತಿ ಗೆದ್ದ ಸೂಪರ್‌ನೋವಾಸ್; ವೆಲಾಸಿಟಿ ಎದುರು 4ರನ್ ರೋಚಕ ಜಯ

    ಪುಣೆ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಸೂಪರ್‌ನೋವಾಸ್ ತಂಡ, ಮಿನಿ ಐಪಿಎಲ್ ಖ್ಯಾತಿಯ ವುಮೆನ್ಸ್ ಟಿ20 ಚಾಲೆಂಜ್‌ನಲ್ಲಿ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಎಂಸಿಎ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಹರ್ಮಾನ್‌ಪ್ರೀತ್ ಕೌರ್ ಪಡೆ 4 ರನ್‌ಗಳಿಂದ ವೆಲಾಸಿಟಿ ತಂಡದ ಎದುರು ರೋಚಕ ಜಯ ದಾಖಲಿಸಿತು. 2018 ಹಾಗೂ 2019ರಲ್ಲೂ ಸೂಪರ್‌ನೋವಾಸ್ ಚಾಂಪಿಯನ್ ಆಗಿತ್ತು.

    ಮೊದಲು ಬ್ಯಾಟಿಂಗ್ ಮಾಡಿದ ಸೂಪರ್‌ನೋವಾಸ್, ಆರಂಭಿಕ ಬ್ಯಾಟುಗಾರ್ತಿ ಡೀನ್‌ದ್ರಾ ಡಾಟಿನ್ (62ರನ್, 44 ಎಸೆತ, 1 ಬೌಂಡರಿ, 4 ಸಿಕ್ಸರ್) ಹಾಗೂ ನಾಯಕಿ ಹರ್ಮಾನ್‌ಪ್ರೀತ್ ಕೌರ್ (43 ರನ್, 29 ಎಸೆತ, 1 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗೆ 165 ರನ್ ಕಲೆಹಾಕಿತು. ಪ್ರತಿಯಾಗಿ ಲೌರಾ ವೊಲ್ವಾರ್ಡ್ (65*ರನ್, 40 ಎಸೆತ, 5 ಬೌಂಡರಿ) ಹಾಗೂ ಸಿಮ್ರಾನ್ (20*ರನ್) ಪ್ರತಿಹೋರಾಟದ ನಡುವೆಯೂ ವೆಲಾಸಿಟಿ 8 ವಿಕೆಟ್‌ಗೆ 161 ರನ್‌ಗಳಿಸಲಷ್ಟೇ ಶಕ್ತವಾಯಿತು.

    ಸೂಪರ್‌ನೋವಾಸ್: 7 ವಿಕೆಟ್‌ಗೆ 165 (ಪ್ರಿಯಾ ಪೂನಿಯಾ 28, ಡೀನ್‌ದ್ರಾ ಡಾಟಿನ್ 62, ಹರ್ಮಾನ್‌ಪ್ರೀತ್ ಕೌರ್ 43, ಕೇಟ್ ಕ್ರಾಸ್ 29ಕ್ಕೆ 2, ದೀಪ್ತಿ ಶರ್ಮ 20ಕ್ಕೆ 2, ಸಿಮ್ರಾನ್ ಬಹದೂರ್ 30ಕ್ಕೆ 2). ವೆಲಾಸಿಟಿ: 8 ವಿಕೆಟ್‌ಗೆ 161 (ವೊಲ್ವಾರ್ಡ್ 64*, ಸಿಮ್ರಾನ್ 20*, ಅಲಾನ್ ಕಿಂಗ್ 32ಕ್ಕೆ 3, ಸೋಫಿ ಎಲಕ್ಸ್‌ಸ್ಟೋನ್ 28ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts