More

    ವಾಹನ ಸಂಚಾರ ತಡೆದು ವಕೀಲರ ಪ್ರತಿಭಟನೆ

    ಬೆಳಗಾವಿ: ಸ್ಥಳೀಯ ಶಹಾಪುರದಲ್ಲಿ ಮನೆ ಮುಂದೆ ಗೆಳೆಯರ ಜತೆ ಮಾತನಾಡುತ್ತ ನಿಂತಿದ್ದ ಯುವ ವಕೀಲರೊಬ್ಬರ ಮೇಲೆ ಶಹಾಪುರ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಕೀಲರು ಜಿಲ್ಲಾ ನ್ಯಾಯಾಲಯದ ಬಳಿ ಗುರುವಾರ ರಸ್ತೆ ಸಂಚಾರ ತಡೆದು, ಪ್ರತಿಭಟನೆ ನಡೆಸಿದರು.

    ಯುವ ವಕೀಲ ಶೀತಲ ರಾಮಶೆಟ್ಟಿ ಗೆಳೆಯರ ಜತೆ ಮಾತನಾಡುತ್ತ ನಿಂತಿದ್ದರು. ಸ್ಥಳಕ್ಕೆ ಆಗಮಿಸಿದ ಶಹಾಪುರ ಪೊಲೀಸರು ವಿನಾಕಾರಣ ಅವರ ಮೇಲೆ ಹಲ್ಲೆ ನಡೆಸಿದರು. ಇದರಿಂದ ಶೀತಲ ಗಾಯಗೊಂಡಿದ್ದಾರೆ. ಘಟನೆಗೆ ಕಾರಣರಾದ ಸಿಪಿಐ ಅಮಾನತುಗೊಳಿಸಬೇಕು ಎಂದು ವಕೀಲರು ಒತ್ತಾಯಿಸಿದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳೊಂದಿಗೂ ವಕೀಲರ ಸಂಘದ ಹಿರಿಯ ಸದಸ್ಯರು ವಾಗ್ವಾದ ನಡೆಸಿದರು. ವಕೀಲರ ಸಂಘದ ಹಿರಿಯ ಸದಸ್ಯ ಮೋಹನ ಮಾವಿನಕಟ್ಟಿ ಮಾತನಾಡಿ, ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಗೆಳೆಯರೊಂದಿಗೆ ಯುವ ವಕೀಲ ಚರ್ಚಿಸುತ್ತ ನಿಂತಿದ್ದ. ಆಗ ಪೊಲೀಸರು ಹಲ್ಲೆ ನಡೆಸಿದ್ದಾರೆ. ಇಂತಹ ಹಲ್ಲೆ ನಡೆಸಬೇಕು ಎಂದು ಪೊಲೀಸರಿಗೆ ಯಾರು ಪ್ರಚೋದನೆ ನೀಡಿದರು ಎಂಬುದು ಗೊತ್ತಾಗಿಲ್ಲ. ವಿನಾಕಾರಣ ಹಲ್ಲೆ ನಡೆಸಿ ಕಾನೂನು ಕೈಗೆತ್ತಿಕೊಂಡಿದ್ದಾರೆ. ಕೂಡಲೇ ಸಿಪಿಐ ಅಮಾನತುಗೊಳಿಸಬೇಕು. ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಪ್ರಭು, ಪ್ರವೀಣ ಕರೋಶಿ, ನಿತಿನ್ ಪಾಟೀಲ, ಅಲೋಕ ಬೆಲ್ಲದ, ಎಂ.ಎನ್.ಮಾವಿನಕಟ್ಟಿ, ಶ್ರೀಧರ ಮುತಗೇಕರ, ಶಿವಪುತ್ರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts