More

    “ಅವರು ಸಸ್ಯಾಹಾರ ಸೇವಿಸಿದ್ದನ್ನು ಎಂದೂ ನೋಡಿಯೇ ಇರಲಿಲ್ಲ”; ಟ್ರಂಪ್​ ಆಹಾರ ಪದ್ಧತಿ ಬಗ್ಗೆ ಅಮೆರಿಕ ಅಧಿಕಾರಿ ಆಶ್ಚರ್ಯಚಕಿತ ಮಾತು!

    ಅಹಮದಾಬಾದ್​: “ಅವರು ತರಕಾರಿ ತಿನ್ನುವುದನ್ನು ಎಂದೂ ನೋಡಿರಲಿಲ್ಲ” ಎಂದು ಯುಎಸ್ ಅಧಿಕಾರಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಟ್ರಂಪ್ ಆಹಾರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಆ ಅಧಿಕಾರಿ!

    ಟ್ರಂಪ್ ಅವರು ಸಾಮಾನ್ಯವಾಗಿ ಊಟದೊಂದಿಗೆ ಸಲಾಡ್ ಸೇವಿಸುತ್ತಾರೆ. ಆದರೆ, ಅದನ್ನು ಹೊರತುಪಡಿಸಿ, ಅವರು ತರಕಾರಿ ತಿನ್ನುವುದನ್ನು ನಾನು ನೋಡಿರಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

    ಭಾರತಕ್ಕೆ ಭೇಟಿ ನೀಡಿರುವ ಟ್ರಂಪ್​ ಅವರ ಆಹಾರ ಪದ್ಧತಿ ಏರುಪೇರಾಗುವ ಸಾಧ್ಯತೆ ಬಗ್ಗೆ ಮಾಹಿತಿ ನೀಡಿದ ಅಧಿಕಾರಿ, ಟ್ರಂಪ್​ ಅವರ ಆಹಾರದಲ್ಲಿ ಸಾಮಾನ್ಯವಾಗಿ ಸ್ಟೀಕ್ಸ್, ಬರ್ಗರ್ ಮತ್ತು ಮಾಂಸದ ತುಂಡುಗಳಿರುವುದು ಸಾಮಾನ್ಯ. ಆದರೆ ಅವರು ತರಕಾರಿ ಸೇವಿಸಿದರು ಎಂದಿದ್ದಾರೆ.

    ಮೋದಿ ಹಾಗೂ ಟ್ರಂಪ್​ ಅವರು ಮಂಗಳವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಜತೆಗೂಡಿ ಊಟ ಮಾಡಲಿದ್ದಾರೆ. ಈ ಮೊದಲು ಟ್ರಂಪ್ ಭೇಟಿ ನೀಡಿದ ದೇಶಗಳು ಅವರ ಆಹಾರಕ್ರಮಕ್ಕೆ ಅನುಗುಣವಾಗಿದ್ದವು. ಆದರೆ ಭಾರತದಲ್ಲಿ ಹಾಗಿಲ್ಲ.

    ಹೇಳಿಕೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಸಸ್ಯಾಹಾರಿ. ಅವರ ಜತೆ ಊಟ ಮಾಡಲಿರುವ ಟ್ರಂಪ್​ ಅವರಿಗೆ ಸಸ್ಯಾಹಾರದ ತಿನಿಸುಗಳಾದ ವೆಜ್ ಬರ್ಗರ್​, ಧಾನ್ಯ ರೋಟಿ, ಕೋಸುಗಡ್ಡೆ ಸಮೋಸಾ ಮತ್ತು ಎಳನೀರನ್ನು ಯುಎಸ್ ಅಧ್ಯಕ್ಷ ಟ್ರಂಪ್​ ಅವರಿಗೆ ಬಡಿಸಲು ಮೋದಿ ಯೋಚಿಸಿದ್ದಾರೆ.

    ಟ್ರಂಪ್​ ಅವರ ಮೆಚ್ಚಿನ ಆಹಾರ ಗೋಮಾಂಸ. ಆದರೆ ರಾಷ್ಟ್ರಪತಿ ಭವನದಲ್ಲಿ ಅದನ್ನು ಪೂರೈಸಲಾಗುತ್ತಿಲ್ಲ. ಅದರ ಬದಲಿಗೆ ಚಿಕನ್​ ಬರ್ಗರ್​, ಹುರಿದ ಪನ್ನೀರ್​ ಮುಂತಾದ ಆಹಾರಗಳಿರುತ್ತವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts