More

  ವೀರಯೋಧ ರವಿಕುಮಾರ ಅಮರ ರಹೇ

  ಹಾನಗಲ್ಲ: ಕಾಶ್ಮೀರದಲ್ಲಿ ಬಾಂಬ್ ಸಿಡಿದು ಮಡಿದ ವೀರಯೋಧ ರವಿಕುಮಾರ ಅವರ ಅಂತ್ಯ ಸಂಸ್ಕಾರ ಬುಧವಾರ ಸ್ವಗ್ರಾಮ ಬ್ಯಾತನಾಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

  ಮಾ. 30ರಂದು ಕಾಶ್ಮೀರ ಸಮೀಪದಲ್ಲಿ ನಡೆದ ದಾಳಿಯಲ್ಲಿ ಬಾಂಬ್ ಸ್ಪೋಟದಿಂದ ತೀವೃವಾಗಿ ಗಾಯಗೊಂಡಿದ್ದ ಸಿಆರ್​ಪಿಎಫ್ ಯೋಧ ರವಿಕುಮಾರ ಕೆಳಗಿನಮನಿ ಅವರನ್ನು ಚಿಕಿತ್ಸೆಗಾಗಿ ದೆಹಲಿಯ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸೋಮವಾರ ಮೃತಪಟ್ಟಿದ್ದರು.

  ಒಬ್ಬನೇ ಮಗನಾಗಿದ್ದ ರವಿಕುಮಾರ ಸೈನ್ಯ ಸೇರಿದ್ದರೂ ಕುಟುಂಬದ ಆರ್ಥಿಕ ಸ್ಥಿತಿ ಅಷ್ಟೇನೂ ಸುಧಾರಿಸಿರಲಿಲ್ಲ. ಮೂವರು ಸಹೋದರಿಯರು ಹಾಗೂ ತಂದೆ ತಾಯಿಯನ್ನು ರವಿಕುಮಾರ ಬಿಟ್ಟು ಹೋಗಿದ್ದಾರೆ.

  ಬುಧವಾರ ಆಯೋಜಿಸಿದ್ದ ಅಂತ್ಯಕ್ರಿಯೆಯಲ್ಲಿ ಇಡೀ ಗ್ರಾಮದ ಜನತೆ ಕಣ್ಣೀರಿಟ್ಟು ಅಂತಿಮ ನಮನ ಸಲ್ಲಿಸಿದರು. ಬೆಂಗಳೂರಿನಿಂದ ಸಿಆರ್​ಪಿಎಫ್ ವಾಹನದಲ್ಲಿ ಬುಧವಾರ ಬೆಳಗ್ಗೆ ಆಗಮಿಸಿದ ರವಿಕುಮಾರ ಅವರ ಪಾರ್ಥಿವ ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

  ವೀರಯೋಧ ರವಿಕುಮಾರ ಅಮರ ರಹೇ

  ನಂತರ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮೆರವಣಿಗೆಯುದ್ದಕ್ಕೂ ರವಿಕುಮಾರ ಅಮರ ರಹೇ, ಭಾರತ್ ಮಾತಾ ಕೀ ಜೈ ಘೊಷಣೆಗಳೊಂದಿಗೆ ಗ್ರಾಮಸ್ಥರು ಗೌರವ ಸಲ್ಲಿಸಿದರು. ಪುತ್ರನನ್ನು ಕಳೆದುಕೊಂಡ ಪಾಲಕರು, ಪತ್ನಿಯ ಆಕ್ರಂದನ ನೆರೆದಿದ್ದ ಜನರ ಕಣ್ಣಲ್ಲೂ ಒದ್ದೆಯಾಗಿಸಿತು.

  ಸಿಆರ್​ಪಿಎಫ್ ಹಾಗೂ ಸಿಐಎಸ್​ಎಫ್ ಮತ್ತು ರಾಜ್ಯ ಪೊಲೀಸ್ ಪಡೆ ಸಿಬ್ಬಂದಿ ಕುಶಾಲ ತೋಪುಗಳನ್ನು ಹಾರಿಸಿ ಯೋಧ ರವಿಕುಮಾರ ಅವರಿಗೆ ಅಂತಿಮ ಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿ ರಘುನಂದನ್​ವುೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠ ಡಾ.ಶಿವಕುಮಾರ, ಡಿವೈಎಸ್​ಪಿ ಜಿ.ಮಂಜುನಾಥ, ಇತರರು ಪಾಲ್ಗೊಂಡಿದ್ದರು.

  ಸಂಸದ ಶಿವಕುಮಾರ ಉದಾಸಿ, ಶಾಸಕ ಶ್ರೀನಿವಾಸ ಮಾನೆ, ಮಾಜಿ ಶಾಸಕರಾದ ಮನೋಹರ ತಹಶೀಲ್ದಾರ, ಶಿವರಾಜ ಸಜ್ಜನರ ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಗೌರವ ಸಲ್ಲಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts