More

    ವೇದವೆಂದರೆ ಜ್ಞಾನದ ಸಾಧನ : ಪಂ. ಮಧ್ವಾಚಾರ್ಯ ಮೋಕಾಶಿ ಅಭಿಮತ

    ವಿಜಯಪುರ : ಋಗ್ವೇದ ಒಂದು ದೊಡ್ಡ ಗ್ರಂಥ. ವೇದ ಅಂದರೆ ಜ್ಞಾನದ ಸಾಧನ. ವೇದದಲ್ಲಿ ಬರುವ ಸಂಸ್ಕೃತಿ, ಪ್ರಕೃತಿ ಹಾಗೂ ವಿಕೃತಿ ಕುರಿತು ಉಲ್ಲೇಖಿಸಲಾಗಿದ್ದು, ಈ ಎಲ್ಲ ಅಂಶಗಳ ಬಳಕೆ ನಮ್ಮ ಕೈಯಲ್ಲಿಯೇ ಇದೆ ಎಂದು ಸರ್ವಜ್ಞ ವಿಹಾರ ವಿದ್ಯಾಪೀಠದ ಕುಲಪತಿ ಪಂ. ಮಧ್ವಾಚಾರ್ಯ ಮೋಕಾಶಿ ಹೇಳಿದರು.

    ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಪ್ರತಿ ತಿಂಗಳು ಹಮ್ಮಿಕೊಳ್ಳುತ್ತಿರುವ ಋಗ್ವೇದ ಪರಿಚಯ ಹಾಗೂ ನಳಚರಿತ್ರೆ ಪ್ರವಚನ ಕಾರ್ಯಕ್ರಮ ನಿಮಿತ್ತ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಭೋಗ್ಯ ವಸ್ತುಗಳ ಬಗ್ಗೆ ತಾತ್ಸಾರ ಭಾವನೆ ಇರಬೇಕು. ನಿಯಮಕ್ಕೆ ಒಳಪಟ್ಟು ವಸ್ತು ಸ್ವೀಕರಿಸಬೇಕು. ಕಸಿದುಕೊಳ್ಳುವುದು ವಿಕೃತಿ ಯಾದರೇ ಸುಮ್ಮನೆ ಇರುವುದು ಪ್ರಕೃತಿ. ಒಳ್ಳೆಯದನ್ನು ಬಯಸಿ ಉತ್ತಮ ವಿಚಾರ ಧಾರೆಗಳನ್ನು ಹೊಂದಿರುವುದು ಸಂಸ್ಕೃತಿ. ಇದನ್ನು ವಿದ್ಯಾರ್ಥಿಗಳಾದ ತಾವು ಸ್ವೀಕಾರ ಮಾಡಿಕೊಂಡು ಉತ್ತಮ ಮಾರ್ಗದಲ್ಲಿ ಸಾಗಬೇಕೆಂದು ಮೋಕಾಶಿ ಅವರು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಎಸ್.ಎ. ಜಿದ್ದಿ ಮಾತನಾಡಿ, ಪ್ರತಿ ತಿಂಗಳು ಋಗ್ವೇದ ಪರಿಚಯ ಹಾಗೂ ಕನಕದಾಸರ ಹರಿಭಕ್ತಸಾರ ಈಗ ನಳಚರಿತ್ರೆ ಪ್ರವಚನ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದ್ದು, ಇದಕ್ಕೆ ಸಹಕಾರ ನೀಡಿದ ಎಲ್ಲರಗೂ ಧನ್ಯವಾದ ತಿಳಿಸಿದರು.

    ನಿರ್ದೇಶಕ ವಿ.ಡಿ. ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಕಂಠೀರವ ಕುಲ್ಲೊಳ್ಳಿ, ಬಿ.ಆರ್. ಬನಸೋಡೆ, ಎಸ್.ಆರ್. ಬಿರಾದಾರ, ರಾಜಶ್ರೀ ಜಿದ್ದಿ, ಅಶೋಕ ಜಿದ್ದಿ, ಬಸವರಾಜ ಮೇಟಿ ಮತ್ತಿತರರಿದ್ದರು. ಆಡಳಿತಾಧಿಕಾರಿ ಆರ್.ಸಿ. ವಾಡೇದ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts